ಖಜುರಾಹೊ: ಮಧ್ಯಪ್ರದೇಶದ ಖಜುರಾಹೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಂ ನರೇಂದ್ರ ಮೋದಿ, 21ನೇ ಶತಮಾನದಲ್ಲಿ ಉತ್ತಮ ಜಲ ಸಂಪನ್ಮೂಲಗಳನ್ನು ಹೊಂದಿರುವ ರಾಷ್ಟ್ರಗಳು ಮಾತ್ರ ಮುನ್ನಡೆಯಲು ಸಾಧ್ಯ ಎಂದು ಹೇಳಿದ್ದಾರೆ. ಅಂಬೇಡ್ಕರ್ ಅವರ ದೂರದೃಷ್ಟಿ ದೇಶದ ಜಲ ಸಂಪನ್ಮೂಲಗಳ ಬಲವರ್ಧನೆ, ಅವುಗಳ ನಿರ್ವಹಣೆ ಮತ್ತು ಅಣೆಕಟ್ಟು ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಿದೆ ಎಂದು ಹೇಳಿದ್ದಾರೆ.
ಪ್ರಮುಖ ನದಿ ಕಣಿವೆ ಯೋಜನೆಗಳ ಅಭಿವೃದ್ಧಿ ಮತ್ತು ಕೇಂದ್ರ ಜಲ ಆಯೋಗದ ರಚನೆಯಲ್ಲಿ ಅಂಬೇಡ್ಕರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷವು ದೇಶದ ಹೆಚ್ಚುತ್ತಿರುವ ನೀರಿನ ಸಂರಕ್ಷಣೆಯ ಅಗತ್ಯಕ್ಕೆ ಎಂದಿಗೂ ಗಮನ ಕೊಡಲಿಲ್ಲ. 21ನೇ ಶತಮಾನದ ಪ್ರಮುಖ ಸವಾಲೆಂದರೆ ನೀರಿನ ಭದ್ರತೆ. 21ನೇ ಶತಮಾನದಲ್ಲಿ ಸರಿಯಾದ ನಿರ್ವಹಣೆಯೊಂದಿಗೆ ಸಮರ್ಪಕ ಜಲಸಂಪನ್ಮೂಲ ಹೊಂದಿರುವ ದೇಶಗಳು ಮಾತ್ರ ಮುನ್ನಡೆಯಲಿವೆ ಎಂದಿದ್ದಾರೆ.
#WATCH | Madhya Pradesh: Prime Minister Narendra Modi to shortly inaugurate and lay the foundation stone of multiple development projects in Khajuraho, on the 100th birth anniversary of former Prime Minister Atal Bihari Vajpayee.
(Source: ANI/DD News) pic.twitter.com/qXIlVXSHXJ
— ANI (@ANI) December 25, 2024
ಇದನ್ನೂ ಓದಿ: ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ ಬರೆಯುವೆ, ಪ್ರಧಾನಿ ಮೋದಿ ಭೇಟಿ ಮಾಡುವೆ: ಲಕ್ಷ್ಮೀ ಹೆಬ್ಬಾಳ್ಕರ್
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ ಖಾಂಡ್ವಾ ಜಿಲ್ಲೆಯಲ್ಲಿ ಓಂಕಾರೇಶ್ವರ ತೇಲುವ ಸೌರ ಯೋಜನೆಯನ್ನು ಉದ್ಘಾಟಿಸಿದರು. ನದಿ ಜೋಡಣೆ ಯೋಜನೆಯ ಭಾಗವಾದ ದೌಧನ್ ನೀರಾವರಿ ಯೋಜನೆಯ ಅಡಿಗಲ್ಲು ಹಾಕಿದರು. ಮಧ್ಯಪ್ರದೇಶದ 10 ಜಿಲ್ಲೆಗಳಲ್ಲಿ ಸುಮಾರು 44 ಲಕ್ಷ ಮತ್ತು ಉತ್ತರ ಪ್ರದೇಶದ 21 ಲಕ್ಷ ಜನರು ಈ ಯೋಜನೆಯಡಿ ಕುಡಿಯುವ ನೀರನ್ನು ಪಡೆಯುತ್ತಾರೆ. ಇದರ ಅಂದಾಜು ವೆಚ್ಚ 44,605 ಕೋಟಿ ರೂ.
#WATCH | Khajuraho, Madhya Pradesh | Prime Minister Narendra Modi says “One of the biggest challenges of the 21st century is water security. In the 21st century, only that country will be able to progress which has sufficient water and proper water management. Farms and fields… pic.twitter.com/eOgEC1B3g0
— ANI (@ANI) December 25, 2024
ಈ ಯೋಜನೆಯಿಂದ 2,000 ಗ್ರಾಮಗಳ ಸುಮಾರು 7.18 ಲಕ್ಷ ಕೃಷಿ ಕುಟುಂಬಗಳು ಪ್ರಯೋಜನ ಪಡೆಯಲಿದ್ದು, 103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಕುವೈತ್‌ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಪ್ರದಾನ
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಮೋದಿ ಬಿಡುಗಡೆ ಮಾಡಿದರು. ವಾಜಪೇಯಿ ಸರ್ಕಾರವು ದೇಶದ ನೀರಾವರಿ ಅಗತ್ಯಗಳಿಗೆ ಮತ್ತು ಪ್ರವಾಹವನ್ನು ಎದುರಿಸಲು ಪರಿಹಾರವಾಗಿ ನದಿ ಜೋಡಣೆಯನ್ನು ಪ್ರಸ್ತಾಪಿಸಿತ್ತು ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ