ದೆಹಲಿ ಸೆಪ್ಟೆಂಬರ್ 12: ಪ್ರಾಚೀನ ಸ್ಟಿಚ್ಡ್ ಶಿಪ್ (Stitched ship) (ಮರದ ಹಲಗೆಗಳನ್ನು ಒತ್ತೊತ್ತಾಗಿ ಇರಿಸಿ ನಿರ್ಮಿಸುವ ಹಳೇ ತಂತ್ರ) ಪುನರ್ನಿರ್ಮಿಸಲು ಸರ್ಕಾರ ಮತ್ತು ನೌಕಾಪಡೆಯು (Navy) ಇತರ ಪಾಲುದಾರರೊಂದಿಗೆ ಸಹಕರಿಸುತ್ತಿದೆ. ಅಂತಹ ಹಡಗುಗಳು ಭಾರತದ ಹಳೆಯ ಕಡಲ ವ್ಯಾಪಾರ ಮಾರ್ಗಗಳಲ್ಲಿ ಸಾಗರಗಳಲ್ಲಿ ಸಾಗಿದ ಸಮಯವನ್ನು ನೆನಪಿಸುತ್ತದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಹಡಗು ಸಿದ್ಧವಾದ ನಂತರ, ಭಾರತೀಯ ನೌಕಾಪಡೆಯು ಪ್ರಾಚೀನ ನ್ಯಾವಿಗೇಷನ್ ತಂತ್ರಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಕಡಲ ವ್ಯಾಪಾರ ಮಾರ್ಗಗಳಲ್ಲಿ “ಅನನ್ಯ ಪ್ರಯಾಣ” ವನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಮರುಶೋಧನೆ ಮತ್ತು ಪುನರುಜ್ಜೀವನದ ಪಯಣವು ಮಂಗಳವಾರ ಗೋವಾದ ಹೊಡಿ ಇನ್ನೋವೇಶನ್ಸ್‌ನಲ್ಲಿ ನಡೆಯಲಿರುವ ಕೀಲ್ ಲೇಯಿಂಗ್ (ಹಡಗು ನಿರ್ಮಾಣಕ್ಕೆ ಔಪಚಾರಿಕ ಚಾಲನೆ) ಸಮಾರಂಭದೊಂದಿಗೆ ಪ್ರಾರಂಭವಾಗಿದೆ.ಕೇಂದ್ರ ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಅಧ್ಯಕ್ಷತೆ ವಹಿಸಿದ್ದರು.
Tomorrow we will be laying the keel of the “stitched ship”!! The idea is to recreate a 4th century AD Indian merchant ship and sail it on ancient routes from Kalinga to SE Asia. Being done by Indian navy & Culture Ministry. Here is the preview : https://t.co/F7W644zAVy
— Sanjeev Sanyal (@sanjeevsanyal) September 11, 2023
ಈ ಯೋಜನೆಯು ವಿವಿಧ ಸಚಿವಾಲಯಗಳ ನಡುವಿನ ಸಹಕಾರದ ಫಲಿತಾಂಶವಾಗಿದೆ. ಹಡಗಿನ ವಿನ್ಯಾಸ ಮತ್ತು ನಿರ್ಮಾಣವನ್ನು ಭಾರತೀಯ ನೌಕಾಪಡೆಯು ನೋಡಿಕೊಳ್ಳುತ್ತಿದೆ. ಪೂರ್ಣಗೊಂಡ ನಂತರ, ಹಡಗು ಐತಿಹಾಸಿಕ ಕಡಲ ವ್ಯಾಪಾರ ಮಾರ್ಗಗಳ ಮೂಲಕ ಪ್ರಯಾಣಿಸುತ್ತದೆ. ಈ ಯೋಜನೆಯು ಸಂಸ್ಕೃತಿ ಸಚಿವಾಲಯದಿಂದ ಆರ್ಥಿಕ ನೆರವು ಪಡೆಯುತ್ತಿದೆ. ಏತನ್ಮಧ್ಯೆ, ಶಿಪ್ಪಿಂಗ್ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಂತರರಾಷ್ಟ್ರೀಯ ಪ್ರಯಾಣದ ತಡೆರಹಿತ ಪ್ರಯಾಣ ಖಚಿತಪಡಿಸಿಕೊಳ್ಳಲು ಯೋಜನೆಯನ್ನು ಬೆಂಬಲಿಸುತ್ತದೆ.
ಈ ರೀತಿ ಹಡಗು ನಿರ್ಮಾಣದಲ್ಲಿ ಪರಿಣಿತರಾದ ಬಾಬು ಶಂಕರನ್ ಅವರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಹಡಗು ತಯಾರಕರ ಗುಂಪು ಇದನ್ನು ನಿರ್ಮಿಸಲಿದೆ. ಮರದ ಹಲಗೆಗಳನ್ನು ಹಡಗಿನ ಆಕಾರಕ್ಕೆ ಅನುಗುಣವಾಗಿ ಸಾಂಪ್ರದಾಯಿಕ ಸ್ಟೀಮಿಂಗ್ ವಿಧಾನವನ್ನು ಬಳಸಿಕೊಂಡು ಅಚ್ಚು ಮಾಡಲಾಗುತ್ತದೆ. ಹಡಗಿನ ನಿರ್ಮಾಣದ ಪ್ರಾಚೀನ ಭಾರತೀಯ ಪದ್ಧತಿಗೆ ಸದೃಶವಾದ ಪ್ರಕ್ರಿಯೆಯಲ್ಲಿ, ಪ್ರತಿ ಹಲಗೆಯನ್ನು ಹಗ್ಗಗಳು ಬಳಸಿ ಮುಂದಿನದಕ್ಕೆ ಜೋಡಿಸಲಾಗುತ್ತದೆ. ಇದನ್ನು ತೆಂಗಿನ ನಾರು, ಅಂಟು ಮತ್ತು ಮೀನಿನ ಎಣ್ಣೆಯ ಮಿಶ್ರಣದಿಂದ ಮುಚ್ಚಲಾಗುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಅನುಷ್ಠಾನ ಸಮಿತಿಯು ಡಿಸೆಂಬರ್ 14, 2022 ರಂದು ಸ್ಮರಣಾರ್ಥ ಯೋಜನೆಯಾಗಿ ಯೋಜನೆಯನ್ನು ಅನುಮೋದಿಸಿತು. ಸಂಸ್ಕೃತಿ ಸಚಿವಾಲಯದೊಂದಿಗೆ ಹಲವಾರು ಸುತ್ತಿನ ಚರ್ಚೆಯ ನಂತರ, ಭಾರತೀಯ ನೌಕಾಪಡೆಯ ನೇವಲ್ ಆರ್ಕಿಟೆಕ್ಚರ್ ನಿರ್ದೇಶನಾಲಯವು 18 ಜುಲೈ 18, 2023 ರಂದು ಗೋವಾದ M/s Hodi Innovations ನೊಂದಿಗೆ ಪ್ರಾಚೀನ ಹೊಲಿದ ಹಡಗಿನ ನಿರ್ಮಾಣಕ್ಕಾಗಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ