ಒಸಾಮಾ ಬಿನ್ ಲಾಡೆನ್‌ನ್ನು ಹತ್ಯೆ ಮಾಡಿದ್ದ ಅಮೆರಿಕದ ನೌಕಾಪಡೆಯ ಮಾಜಿ ಯೋಧ ರಾಬರ್ಟ್ ಓ’ನೀಲ್ ಬಂಧನ

ಫ್ರಿಸ್ಕೊದಲ್ಲಿ ರಾಬರ್ಟ್ ಓ'ನೀಲ್ ಅವರನ್ನು ಬಂಧಿಸಲಾಗಿದ್ದು, ಅದೇ ದಿನ $3,500 ಬಾಂಡ್‌ನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಟೆಕ್ಸಾಸ್‌ನ ಡಲ್ಲಾಸ್-ಫೋರ್ಟ್ ವರ್ತ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಪತ್ರಿಕೆಯಾದ ದಿ ಡಲ್ಲಾಸ್ ಮಾರ್ನಿಂಗ್ ನ್ಯೂಸ್ ವರದಿ ಮಾಡಿದೆ. ಓ'ನೀಲ್ ಅವರ ಹೈಪ್ರೊಫೈಲ್ ಮತ್ತು ಮಿಲಿಟರಿ ಹಿನ್ನೆಲೆಯಿಂದಾಗಿ ಈ ಘಟನೆ ಗಮನ ಸೆಳೆದಿದೆ.

ಒಸಾಮಾ ಬಿನ್ ಲಾಡೆನ್‌ನ್ನು ಹತ್ಯೆ ಮಾಡಿದ್ದ ಅಮೆರಿಕದ ನೌಕಾಪಡೆಯ ಮಾಜಿ ಯೋಧ ರಾಬರ್ಟ್ ಓ'ನೀಲ್ ಬಂಧನ
ರಾಬರ್ಟ್ ಓ'ನೀಲ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 29, 2023 | 1:29 PM

ವಾಷಿಂಗ್ಟನ್ ಆಗಸ್ಟ್ 29: 2011 ರ ಕಾರ್ಯಾಚರಣೆಯಲ್ಲಿ ತಾನು ಒಸಾಮಾ ಬಿನ್ ಲಾಡೆನ್‌ನ (Osama bin Laden) ಹತ್ಯೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ  ಯುಎಸ್ ನೌಕಾಪಡೆಯ ಮಾಜಿ ಯೋಧ (US Navy SEAL) ರಾಬರ್ಟ್ ಓ’ನೀಲ್ (Robert O’Neill)ಅವರನ್ನು ಈ ವಾರದ ಆರಂಭದಲ್ಲಿ ಟೆಕ್ಸಾಸ್‌ನಲ್ಲಿ ಬಂಧಿಸಲಾಯಿತು. ನ್ಯೂಯಾರ್ಕ್ ಪೋಸ್ಟ್ ಅನ್ನು ಉಲ್ಲೇಖಿಸಿ ಎಎನ್ಐ ಮಾಡಿದ ವರದಿ ಪ್ರಕಾರ ರಾಬರ್ಟ್ ಓ’ನೀಲ್ ದೈಹಿಕ ಗಾಯವನ್ನು ಉಂಟುಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಫ್ರಿಸ್ಕೊದಲ್ಲಿ ಓ’ನೀಲ್ ಅವರನ್ನು ಬಂಧಿಸಲಾಗಿದ್ದು, ಅದೇ ದಿನ $3,500 ಬಾಂಡ್‌ನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಟೆಕ್ಸಾಸ್‌ನ ಡಲ್ಲಾಸ್-ಫೋರ್ಟ್ ವರ್ತ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಪತ್ರಿಕೆಯಾದ ದಿ ಡಲ್ಲಾಸ್ ಮಾರ್ನಿಂಗ್ ನ್ಯೂಸ್ ವರದಿ ಮಾಡಿದೆ. ಓ’ನೀಲ್ ಅವರ ಹೈಪ್ರೊಫೈಲ್ ಮತ್ತು ಮಿಲಿಟರಿ ಹಿನ್ನೆಲೆಯಿಂದಾಗಿ ಈ ಘಟನೆ ಗಮನ ಸೆಳೆದಿದೆ.

ವರದಿಯ ಪ್ರಕಾರ, ಮಾಜಿ ನೌಕಾಪಡೆಯ ಯೋಧ ರಾಬರ್ಟ್ ಓ’ನೀಲ್, ಟೆಕ್ಸಾಸ್‌ನಲ್ಲಿ ಎರಡು ದುಷ್ಕೃತ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆರೋಪಗಳು ದೈಹಿಕ ಗಾಯವನ್ನು ಉಂಟುಮಾಡುವ ಆಕ್ರಮಣಕ್ಕೆ ಸಂಬಂಧಿಸಿದ ಎ ವರ್ಗದ ದುಷ್ಕೃತ್ಯ ಮತ್ತು ಸಾರ್ವಜನಿಕ ಮದ್ಯಸೇವನೆ ವಿಚಾರದಲ್ಲಿ ವರ್ಗ ಸಿ ದುಷ್ಕೃತ್ಯವನ್ನು ಒಳಗೊಂಡಿವೆ. ಆದಾಗ್ಯೂ ಜೈಲು ದಾಖಲೆಗಳು ಆಕ್ರಮಣದ ಆರೋಪದ ಉಪಸ್ಥಿತಿಯನ್ನು ಪ್ರತ್ಯೇಕವಾಗಿ ಸೂಚಿಸುತ್ತವೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ಹೇಳಿದೆ.

ಓ’ನೀಲ್ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದು ಮೊದಲೇನೂ ಅಲ್ಲ. 2016 ರಲ್ಲಿ, ಮೊಂಟಾನಾದಲ್ಲಿ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಸಿಬಿಎಸ್ ನ್ಯೂಸ್‌ನ ವರದಿಯ ಪ್ರಕಾರ, ಆಪಾದನೆಗಳನ್ನು ಆಮೇಲೆ ಕೈ ಬಿಡಲಾಯಿತು.

ಇದನ್ನೂ ಓದಿ: ಇಡೀ ಅಮೆರಿಕನ್ನರ ಗಮನ ಸೆಳೆಯುತ್ತಿರುವ ವಿವೇಕ್ ರಾಮಸ್ವಾಮಿ ಯಾರು? ಇವರ ತಾಯಿಯ ಮೈಸೂರು ನಂಟು ಏನು? ಇಲ್ಲಿದೆ ಮಾಹಿತಿ

ಒಸಾಮಾ ಬಿನ್ ಲಾಡೆನ್ ಅನ್ನು ಹತ್ಯೆ ಮಾಡಿದ್ದು ಓ’ನೀಲ್?

2013 ರ ಎಸ್ಕ್ವೈರ್ ನಿಯತಕಾಲಿಕದ ಸಂದರ್ಶನದಲ್ಲಿ, ರಾಬರ್ಟ್ ಅವರು ಮೇ 2011 ನೆಪ್ಚೂನ್ ಸ್ಪಿಯರ್ ಎಂದು ಕರೆಯಲ್ಪಡುವ ಕಾರ್ಯಾಚರಣೆಯಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಹತ್ಯೆ ಮಾಡಿರುವುದಾಗಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ತಮ್ಮ ಆತ್ಮಚರಿತ್ರೆ “ಆಪರೇಟರ್” ನಲ್ಲಿ ಈ ಬಗ್ಗೆ ಅವರು ಮತ್ತಷ್ಟು ವಿವರಗಳನ್ನು ನೀಡಿದ್ದರು.  ಆದಾಗ್ಯೂ,ಅಮೆರಿಕ ಸರ್ಕಾರವು ಅವರ ಹೇಳಿಕೆಯನ್ನು ದೃಢೀಕರಿಸುವುದಾಗಲೀ, ನಿರಾಕರಿಸುವುದಾಗಲೀ ಮಾಡಿಲ್ಲ.

ರಾಬರ್ಟ್, ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ಇದನ್ನು ಉಳಿಸಿಕೊಳ್ಳುವುದು ಕಷ್ಟಕರವಾದ ರಹಸ್ಯವಾಗಿದೆ.” “ಎಲ್ಲರೂ ಹೆಮ್ಮೆಪಡುತ್ತಾರೆ. ನಾವು ಅದನ್ನು ಮಾಡಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ