ಗುಜರಾತ್ ವಿದ್ಯಾಪೀಠದ ಆವರಣದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್​​ರಿಂದ ಸ್ವಚ್ಛತಾ ಅಭಿಯಾನ

| Updated By: ರಶ್ಮಿ ಕಲ್ಲಕಟ್ಟ

Updated on: Dec 18, 2022 | 4:34 PM

ಎಲ್ಲರೂ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳಲು ಹೇಳಿದ ದೇವವ್ರತ್, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಭ್ಯಾಸವಾಗಬೇಕು ಅದು ದೊಡ್ಡ ಮೊತ್ತದ ಹಣವನ್ನು ಬೇಡುವುದಿಲ್ಲ ಎಂದಿದ್ದಾರೆ.

ಗುಜರಾತ್ ವಿದ್ಯಾಪೀಠದ ಆವರಣದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್​​ರಿಂದ ಸ್ವಚ್ಛತಾ ಅಭಿಯಾನ
ವಿದ್ಯಾಪೀಠ ಆವರಣದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಗುಜರಾತ್ ಗವರ್ನರ್
Image Credit source: @ADevvrat/Twitter
Follow us on

ಅಹಮದಾಬಾದ್‌ನಲ್ಲಿರುವ ಗುಜರಾತ್ ವಿದ್ಯಾಪೀಠದ(Gujarat Vidyapith) ಆವರಣದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ (Governor Acharya Devvrat) ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದಾರೆ.ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಆಧರಿಸಿ ನಡೆಯುತ್ತಿರುವ ಈ ಅಭಿಯಾನದಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (Ahmedabad Municipal Corporation)ಸಹಾಯದಿಂದ 20 ಕ್ಕೂ ಹೆಚ್ಚು ಟ್ರಕ್‌ಗಳ ಕಸವನ್ನು ತೆಗೆದುಹಾಕಲಾಯಿತು. ಶುಕ್ರವಾರದಂದು ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ಸಂದರ್ಭದಲ್ಲಿ ಸ್ಥಳವನ್ನು ಸ್ವಚ್ಛಗೊಳಿಸಿ ಮರುದಿನ ಹೂವಿನ ಗಿಡಗಳನ್ನು ನೆಡಲಾಗಿದೆ.ದೇವವ್ರತ್ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಗುಜರಾತ್ ವಿದ್ಯಾಪೀಠದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದಾರೆ.ತಮ್ಮ ಸಭೆಗಳಲ್ಲಿ, ರಾಜ್ಯಪಾಲರು ಕ್ಯಾಂಪಸ್‌ನ ಆಟದ ಮೈದಾನವನ್ನು ಸರಿಪಡಿಸಿ ಸಾಧ್ಯವಾದಷ್ಟು ಬೇಗ ಬಳಸಲು ಸೂಚನೆಗಳನ್ನು ನೀಡಿದ್ದಾರೆ. 1,400 ವಿದ್ಯಾರ್ಥಿಗಳು ವಾಸಿಸುವ ಮತ್ತು ಅಧ್ಯಯನ ಮಾಡುವ ಗುಜರಾತ್ ವಿದ್ಯಾಪೀಠದ ಆಟದ ಮೈದಾನದಲ್ಲಿ ತ್ಯಾಜ್ಯದ ರಾಶಿಗಳು ತೊಂದರೆಯುಂಟು ಮಾಡುತ್ತವೆ ಎಂದು ಅವರು ಹೇಳಿದ್ದಾರೆ. ವಿದ್ಯಾಪೀಠದ ಕಟ್ಟಡಗಳ ಮೇಲೆ ಬೆಳೆದಿರುವ ಗಿಡ-ಮರಗಳಿಂದ ಆಗುತ್ತಿರುವ ಹಾನಿಯ ಬಗ್ಗೆಯೂ ರಾಜ್ಯಪಾಲರು ಗಮನ ಸೆಳೆದಿದ್ದಾರೆ.

ಎಲ್ಲರೂ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳಲು ಹೇಳಿದ ದೇವವ್ರತ್, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಭ್ಯಾಸವಾಗಬೇಕು ಅದು ದೊಡ್ಡ ಮೊತ್ತದ ಹಣವನ್ನು ಬೇಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪ್ರತಿ ವರ್ಷ ನೂರಾರು ಯುವಕ ಯುವತಿಯರು ಮರ್ಯಾದೆಗೇಡು ಹತ್ಯೆಗೊಳಗಾಗುತ್ತಾರೆ: ಸಿಜೆಐ ಚಂದ್ರಚೂಡ್

ರಾಜ್ಯಪಾಲರ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ 10 ಮಂದಿ ಪೌರ ಕಾರ್ಮಿಕರು, ಜೆಸಿಬಿ ಯಂತ್ರ, ಮೂರು ಡಂಪರ್‌ಗಳು, ಹೈಡ್ರಾಲಿಕ್ ಜಾಕ್ ಟ್ರಾಲಿ, ಟ್ಯಾಂಕರ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು 15 ಮಂದಿ ತೋಟದ ಕಾರ್ಮಿಕರ ಸಹಾಯದಿಂದ ಗುಜರಾತ್ ವಿದ್ಯಾಪೀಠದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ