ತೆಲಂಗಾಣ: ತೆಲಂಗಾಣದ SCCL ಕಲ್ಲಿದ್ದಲು ಗಣಿ (coal mine) ಉದ್ಯಮವನ್ನ ಖಾಸಗೀಕರಣಗೊಳುಸುತ್ತಾರೆ ಎಂಬುದು ಶುದ್ದ ಸುಳ್ಳು ಎಂದು ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ ಟ್ವೀಟರ್ನಲ್ಲಿ ಪ್ರಕಟಿಸಿದ್ದಾರೆ. ಎಸ್.ಸಿ.ಸಿ.ಎಲ್ ಕಂಪನಿಯಲ್ಲಿ ಕೇಂದ್ರ ಸರ್ಕಾರಕ್ಕಿಂತ ತೆಲಂಗಾಣ ರಾಜ್ಯ ಸರ್ಕಾರದ ಪಾಲುದಾರಿಕೆ ಹೆಚ್ಚಿದೆ. ಕೇಂದ್ರ ಸರ್ಕಾರ ಶೇ 49% ರಷ್ಟು ಶೇರ್ ಹೊಂದಿದ್ದರೆ, ತೆಲಂಗಾಣ ರಾಜ್ಯ ಸರ್ಕಾರದ್ದು ಶೇ 51% ರಷ್ಟು ಪಾಲುದಾರಿಕೆ ಇದೆ. ಹೀಗಿರುವಾಗ ಎಸ್.ಸಿ.ಸಿ.ಎಲ್ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಲು ಸಾಧ್ಯವೇ ಇಲ್ಲ. ಇಂತಹ ನಿರ್ಧಾರಗಳನ್ನ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕಿಂತ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಮಾತ್ರ ಇರುವುದು. ಹೀಗಿರುವಾಗ ಎಸ್.ಸಿ.ಸಿ.ಎಲ್ ಅನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ಕೊಡಲು ಬರುವುದಿಲ್ಲ ಎಂದಿದ್ದಾರೆ.
For political interest, some people spread rumours to instigate people. Such rumours are being spread about the SCCL and various coal mines in Telangana. It’s coming directly from Hyderabad: PM @NarendraModi ji@PMOIndia pic.twitter.com/lrFMW98O84
— Pralhad Joshi (@JoshiPralhad) November 12, 2022
ಅಷ್ಟಕ್ಕೂ ಎಸ್.ಸಿ.ಸಿ.ಎಲ್ನ್ನು ಖಾಸಗೀಕರಣಗೊಳಿಸುವ ಇರಾದೆಯೇ ಕೇಂದ್ರ ಸರ್ಕಾರಕ್ಕಿಲ್ಲ. ಈ ಬಗ್ಗೆ ಕೇಂದ್ರ ಆಲೋಚಿಸಿಯೂ ಇಲ್ಲ ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕೆಲವು ಜನ ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಎಸ್ ಸಿ ಸಿ ಎಲ್ ಹಾಗೂ ತೆಲಂಗಾಣದ ಇತರ ಗಣಿ ಕಂಪನಿಗಳ ಕುರಿತಾಗಿ ಖಾಸಗೀಕರಣದ ಗಾಳಿ ಸುದ್ದಿ ಹರಡಲಾಗುತ್ತಿದೆ.
ಸತ್ಯಾಂಶಗಳು ಈ ರೀತಿಯಾಗಿವೆ:
ಎಸ್ ಸಿ ಸಿ ಎಲ್ ನಲ್ಲಿ ತೆಲಂಗಾಣ ಸರ್ಕಾರ ಶೇ 51 ರಷ್ಟು ಪಾಲುದಾರಿಕೆ ಹಾಗೂ ಕೇಂದ್ರ ಸರ್ಕಾರ ಶೇಕಡ 49 ಪಾಲುದಾರಿಕೆ ಹೊಂದಿದೆ ಹೀಗಾಗಿ ಎಸ್ಸಿಸಿಎಲ್ ಖಾಸಗಿಕರಣ ಗೊಳಿಸುವ ನಿರ್ಧಾರ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆಯೇ ಇಲ್ಲ.
— Pralhad Joshi (@JoshiPralhad) November 12, 2022
ಈ ಎಲ್ಲಾ ಕಪಟ ಉದ್ದೇಶದ ಸುದ್ದಿಗಳನ್ನು ನೇರವಾಗಿ ಹೈದರಾಬಾದ್ನಿಂದ ಹರಡಲಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನ ಟ್ವೀಟರ್ನಲ್ಲಿ ಟ್ಯಾಗ್ ಮಾಡಿರುವ ಪ್ರಲ್ಹಾದ್ ಜೋಶಿಯವರು, ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 pm, Sat, 12 November 22