AICC ಅಧ್ಯಕ್ಷ ಚುನಾವಣೆಯಲ್ಲಿ ತರೂರ್‌ಗೆ ಮತ ಹಾಕಿದ್ದ 1,000 ಕಾಂಗ್ರೆಸ್ ನಾಯಕರು ಶೀಘ್ರ ಬಿಜೆಪಿಗೆ: ಸಂಚಲನ ಮೂಡಿದ ಅಸ್ಸಾಂ ಸಿಎಂ ಹೇಳಿಕೆ!
ಅಧ್ಯಕ್ಷೀಯ ಚುನಾವಣೆಯಲ್ಲಿ ತರೂರ್‌ಗೆ ಮತ ಹಾಕಿದ್ದ 1,000 ಕಾಂಗ್ರೆಸ್ ನಾಯಕರು ಶೀಘ್ರ ಬಿಜೆಪಿ ಸೇರಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಗುವಾಹಾಟಿ: ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ (AICC President Election) ಶಶಿ ತರೂರ್ (Shashi Tharoor) ಬೆಂಬಲಿಸಿದ 1,000 ಕಾಂಗ್ರಸ್ ನಾಯಕರು ಶೀಘ್ರದಲ್ಲೇ ಬಿಜೆಪಿ (BJP) ಸೇರಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam CM Himanta Sarma) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಫಲಿತಾಂಶದ ಬಳಿಕ ಶಶಿ ತರೂರ್ ಬೆಂಬಲಿಗರು ಪಕ್ಷ ತೊರೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಹಿಮಂತ ಬಿಸ್ವಾ ಶರ್ಮಾ ಅವರ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಗುಜರಾತ್ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ಉಚಿತ ವಿದ್ಯುತ್, ಸಾಲಮನ್ನಾ ಭರವಸೆ
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿ ತರೂರ್ 1,072 ಮತಗಳನ್ನು ಪಡೆದಿದ್ದರು. ಗಾಂಧಿ ಕುಟುಂಬದ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಖರ್ಗೆ ಬದಲು ಶಶಿ ತರೂರ್‌ಗೆ ಮತ ಹಾಕಿದ ಪ್ರಜಾಪ್ರಭುತ್ವದಲ್ಲಿ ವಿಶ್ವಾವರಿಸಿದ್ದ ನಾಯಕರು ಶೀಘ್ರದಲ್ಲೇ ಬಿಜೆಪಿ ಸೇರಿಕೊಳ್ಳುವ ನಿರೀಕ್ಷೆ ಇದೆ ಎಂದು ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಪಕ್ಷದ ನಾಯಕರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಈ ಚನಾವಣೆ ಫಿಕ್ಸ್ ಆಗಿತ್ತು. ಫಲಿತಾಂಶ ಪ್ರಕಟಗೊಳ್ಳುವುದಕ್ಕಿಂತಲೂ ಮೊದಲು ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂದಿದ್ದರು. ಕಾಂಗ್ರೆಸ್ ಚುನಾವಣೆ ನಡೆದಾಗಲೇ ಫಲಿತಾಂಶವನ್ನು ಎಲ್ಲರೂ ಊಹಿಸಿದ್ದರು ಎಂದು ಆರೋಪಿಸಿದ್ದಾರೆ.
.ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 9,500 ಪಕ್ಷದ ಪ್ರತಿನಿಧಿಗಳು ಮತ ಚಲಾಯಿಸಿದ್ದರು. ಖರ್ಗೆ 7,897 ಮತಗಳನ್ನು ಪಡೆದ್ದರೆ, ತರೂರ್ 1,072 ಮತಗಳನ್ನು ಪಡೆದುಕೊಂಡಿದ್ದರು. ತರೂರ್ ಮೊದಲಿನಿಂದಲೂ ಚುನಾವಣೆ ಏಕಪಕ್ಷೀಯವಾಗಿದ್ದು, ಸಮಬಲ ಇಲ್ಲ ಎಂದು ಆರೋಪಿಸುತ್ತಿದ್ದರು. ಆದರೆ, ಅವರು ತಮ್ಮ ನಾಮಪತ್ರ ವಾಪಸ್ ಪಡೆಯಲು ನಿರಾಕರಿಸಿ ಸ್ಪರ್ಧೆಗಿಳಿದಿದ್ದರು.
Published On - 9:31 pm, Sat, 12 November 22