Delhi Earthquake: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪ: ರಿಕ್ಟರ್ ಮಾಪನದಲ್ಲಿ 5.4ರಷ್ಟು ತೀವ್ರತೆ ದಾಖಲು
ಇಂದು (ನ. 12) ರಾತ್ರಿ 8 ಗಂಟೆ ಸುಮಾರಿಗೆ ದೆಹಲಿ ಮತ್ತು ನೆರೆಯ ನಗರಗಳಲ್ಲಿ ಭೂಕಂಪನದ ಅನುಭವ ಉಂಟಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಟೀಟ್ವ್ ಮಾಡಿದೆ.
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು (ನ. 12) ಮತ್ತೆ ಭೂಕಂಪನದ (Earthquake) ಅನುಭವ ಉಂಟಾಗಿದ್ದು, ರಿಕ್ಟರ್ ಮಾಪನದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಟ್ವೀಟ್ ಮಾಡಿದೆ. ದೆಹಲಿ, ನೊಯಿಡಾ ಸೇರಿದಂತೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲೂ ಭೂಮಿ ಕಂಪಿಸಿದೆ. ದೆಹಲಿಯಲ್ಲಿ ಒಂದು ವಾರದಲ್ಲಿ ಎರಡನೇ ಭಾರಿ ಭೂಮಿ ಕಂಪಿಸಿದ್ದು ಜನರು ಭಯದಲ್ಲಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ನೇಪಾಳ ಭೂಕಂಪದ ಕೇಂದ್ರ ಬಿಂದುವಾಗಿದ್ದು, 10 km ಆಳದಲ್ಲಿ ಭೂಮಿ ಕಂಪಿಸಿದೆ ಎನ್ನಲಾಗುತ್ತಿದೆ.
Earthquake tremors felt across Delhi pic.twitter.com/rnZ4Pov0dk
— ANI (@ANI) November 12, 2022
ಇದೇ ತಿಂಗಳು (ನ 9) ನೇಪಾಳದ ದೋಟಿ ಜಿಲ್ಲೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಹಲವು ಮನೆಗಳು ಕುಸಿದಿದ್ದು, ಸುದ್ದಿಸಂಸ್ಥೆಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಆರು ಮಂದಿ ಮೃತಪಟ್ಟಿರುವುದು ದೃಢವಾಗಿತ್ತು. ನೇಪಾಳದ ಭೂಕಂಪದ ಉತ್ತರಕಂಪನಗಳು (Strong Tremors) ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶ, ನೋಯ್ಡಾ ಸೇರಿದಂತೆ ಹಲವೆಡೆ ಜನರ ಅನುಭವಕ್ಕೆ ಬಂದಿತ್ತು. ಭೂಕಂಪದಿಂದ ಆಘಾತಕ್ಕೊಳಗಾದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದರು. ಸುಮಾರು 10 ಸೆಕೆಂಡ್ಗಳ ಕಾಲ ಭೂಕಂಪದ ಅನುಭವವಾಯಿತು ಎಂದು ವರದಿಯಾಗಿತ್ತು. ಭೂಕಂಪದ ಅನುಭವ ಉಂಟಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನರು ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದಾರೆ. ಅನೇಕರು ಮೀಮ್ಗಳನ್ನು ಸಹ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭೂಕಂಪ, ಜ್ವಾಲಾಮುಖಿ, ರೈಲು ದುರಂತ, ರಾಜಕೀಯ ನಾಯಕರ ತಲೆದಂಡದ ಬಗ್ಗೆ ಕರ್ನಾಟಕದ ಖ್ಯಾತ ಜ್ಯೋತಿಷಿ ಭವಿಷ್ಯ
Earthquake of Magnitude:5.4, Occurred on 12-11-2022, 19:57:06 IST, Lat: 29.28 & Long: 81.20, Depth: 10 Km ,Location: Nepal, for more information Download the BhooKamp App https://t.co/EeajzoWKi2 @OfficeOfDrJS @PMOIndia @DDNational @Ravi_MoES pic.twitter.com/QsUzaSduQv
— National Center for Seismology (@NCS_Earthquake) November 12, 2022
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:21 pm, Sat, 12 November 22