New Delhi: ದೇಶದಲ್ಲಿ10 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಸರ್ಕಾರದಿಂದ ಅನುಮತಿ

| Updated By: Digi Tech Desk

Updated on: Feb 09, 2023 | 11:45 AM

ಕೇಂದ್ರದ ಪ್ರಸ್ತುತ ನೀತಿಯು ಪರಮಾಣು ಶಕ್ತಿಯನ್ನು ನಿಷೇದಿಸುತ್ತದೆ,ಆದರೆ ಪರಮಾಣು ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಜಂಟಿ ಉದ್ಯಮಗಳನ್ನು ಸಕ್ರಿಯಗೊಳಿಸಲು 1962 ರ ಪರಮಾಣು ಶಕ್ತಿ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

New Delhi: ದೇಶದಲ್ಲಿ10 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಸರ್ಕಾರದಿಂದ ಅನುಮತಿ
ಭಾರತದಲ್ಲಿ 10 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಸರ್ಕಾರದ ಅನುಮತಿ
Image Credit source: Daily Pioneer
Follow us on

ನವ ದೆಹಲಿ: ದೇಶದಲ್ಲಿ ಒಟ್ಟು 7000 ಮೆಗಾವ್ಯಾಟ್ ಸಾಮರ್ಥ್ಯದ 10 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಇಲಾಖೆಯ ರಾಜ್ಯ ಖಾತೆ ಸಚಿವ ಡಾ.ಜಿತೇಂದ್ರ ಸಿಂಗ್ (Dr. Jitendra Singh) ಲೋಕಸಭೆಯಲ್ಲಿ ಕೊಟ್ಟ ಲಿಖಿತ ಉತ್ತರದಲ್ಲಿ ಒಟ್ಟು 8700 ಮೆಗಾವ್ಯಾಟ್ ಸಾಮರ್ಥ್ಯದ 11 ರಿಯಾಕ್ಟರ್‌ಗಳು ನಿರ್ಮಾಣ ಅಥವಾ ಕಾರ್ಯಾರಂಭದ ವಿವಿಧ ಹಂತಗಳಲ್ಲಿವೆ ಎಂದು ತಿಳಿಸಿದ್ದಾರೆ.

ಕೇಂದ್ರದ ಪ್ರಸ್ತುತ ನೀತಿಯು ಪರಮಾಣು ಶಕ್ತಿಯನ್ನು ನಿಷೇದಿಸುತ್ತದೆ, ಆದರೆ ಪರಮಾಣು ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಜಂಟಿ ಉದ್ಯಮಗಳನ್ನು ಸಕ್ರಿಯಗೊಳಿಸಲು 1962 ರ ಪರಮಾಣು ಶಕ್ತಿ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

2019 ರಲ್ಲಿ ನಡೆದ ಇಂಡಿಯಾ ಎನರ್ಜಿ ಫೋರಂನ ಪರಮಾಣು ಸಮಾವೇಶದಲ್ಲಿ, 7 ಪರಮಾಣು ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿವೆ. 17 ರಿಯಾಕ್ಟರ್‌ಗಳು ಪೈಪ್‌ಲೈನ್ ಹಂತದಲ್ಲಿವೆ ಎಂದು ಕೆ.ಎನ್. ವ್ಯಾಸ್ ಹೇಳಿದ್ದರು. ಅಣುಶಕ್ತಿ ಸ್ಥಾವರ ನಿರ್ಮಾಣ ವೆಚ್ಚ ಕಡಿತಗೊಳಿಸುವ ಹಾಗೂ ನಿರ್ಮಾಣ ಕಾರ್ಯ ತ್ವರಿತಗೊಳಿಸುವ ಉದ್ದೇಶದಿಂದ ಭವಿಷ್ಯದಲ್ಲಿ ಫ್ಲೀಟ್ ಮೋಡ್(ಐದು ವರ್ಷಗಳ ಅವಧಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸುವ ವಿಧಾನ) ನಿರ್ಮಾಣ ವಿಧಾನವನ್ನು ಅನುಸರಿಸಲಾಗುವುದು ಎಂದೂ ಕೆ.ಎನ್. ವ್ಯಾಸ್ ತಿಳಿಸಿದ್ದರು.

ಇದನ್ನೂ ಓದಿ: ಟರ್ಕಿಗೆ ತೆರಳಲಿದೆ ಭಾರತದ ಮತ್ತೊಂದು ಬ್ಯಾಚ್; ಈವರೆಗೆ ಕೊಟ್ಟ ನೆರವು ಎಷ್ಟು?

ಇಂಡಿಯಾ ಎನರ್ಜಿ ಫೋರಂನ (India Energy Forum) ಪರಮಾಣು ಸಮಾವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಜಿತೇಂದ್ರ ಸಿಂಗ್ , ಅಣುಶಕ್ತಿ ಬಳಕೆಯ ಕುರಿತಂತೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಯನ್ನು ನಿವಾರಿಸಲು ಅರಿವು ಮೂಡಿಸಬೇಕಿದೆ ಎಂದಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಅಣು ಶಕ್ತಿ ಒಂದು ಪರ್ಯಾಯ ಮೂಲವಾಗಿದೆ ಮತ್ತು ದೈನಂದಿನ ಬದುಕನ್ನು ಸುಲಲಿತಗೊಳಿಸುವ ಒಂದು ಸಾಧನವಾಗಿದೆ ಎಂದು ಸಮಾವೇಶದಲ್ಲಿ ಮಾತನಾಡಿದ್ದರು.

ದೇಶದಲ್ಲಿ 2030ರೊಳಗೆ 21 ಹೊಸ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಯೋಜನೆಯಿದೆ ಎಂದು ಪರಮಾಣು ವಿದ್ಯುತ್ ಇಲಾಖೆ ಕಳೆದ 2018 ರಲ್ಲಿ ತಿಳಿಸಿತ್ತು.