ಹೊಸ ಸಂಸತ್ ಕಟ್ಟಡದ ಒಳಾಂಗಣ
ನವದೆಹಲಿ: ಮೇ 28 ರ ಭಾನುವಾರದಂದು ದೇಶದ ಸಂಸತ್ತಿನ ಹೊಸ ಕಟ್ಟಡ (New Parliament Building Inaguration) ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭವ್ಯವಾದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ಕೇಂದ್ರ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಬೆಳಗ್ಗೆ 7.30ರಿಂದ 9.30ರವರೆಗೆ ನಡೆಯಲಿದೆ. ಎರಡನೇ ಹಂತದ ಉದ್ಘಾಟನಾ ಕಾರ್ಯಕ್ರಮವು ಮಧ್ಯಾಹ್ನ 12 ರಿಂದ 2.30 ರವರೆಗೆ ಅಂದರೆ ನಡೆಯಲಿದೆ.
ಹೊಸ ಸಂಸತ್ ಭವನದ ನಿರ್ಮಾಣವು ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿದೆ. ಹೊಸ ಸಂಸತ್ ಭವನದ ಜೊತೆಗೆ, ಕರ್ತವ್ಯ ಪಥ್‌ನ ಕೆಲಸವೂ ಪೂರ್ಣಗೊಂಡಿದೆ. ಇದಲ್ಲದೇ ಸೆಂಟ್ರಲ್ ಸೆಕ್ರೆಟರಿಯೇಟ್, ಎಕ್ಸಿಕ್ಯೂಟಿವ್ ಎನ್ ಕ್ಲೇವ್, ನ್ಯಾಷನಲ್ ಮ್ಯೂಸಿಯಂ ಮುಂತಾದ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೂಲಗಳ ಪ್ರಕಾರ, ಉದ್ಘಾಟನಾ ಕಾರ್ಯಕ್ರಮವು ಎರಡು ಹಂತಗಳಲ್ಲಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆಯಲಿದೆ.
ಮೊದಲ ಹಂತದ ಕಾರ್ಯಕ್ರಮಗಳೇನು?
- ಬೆಳಗ್ಗೆ 7:30ರಿಂದ 8:30ರವರೆಗೆ ಹವನ ಹಾಗೂ ಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಗಾಂಧಿ ಮೂರ್ತಿಯ ಬಳಿ ಪೂಜೆಗಾಗಿ ಪೆಂಡಾಲ್ ಸ್ಥಾಪಿಸಲಾಗುವುದು.
- ಈ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಉಪಾಧ್ಯಕ್ಷರು, ಕೇಂದ್ರ ಸರ್ಕಾರದ ಸಚಿವರು ಭಾಗವಹಿಸಲಿದ್ದಾರೆ.
- ಪೂಜೆಯ ನಂತರ ಲೋಕಸಭೆಯ ಒಳಗೆ ಬೆಳಗ್ಗೆ 8:30 ರಿಂದ 9:00 ರ ಅವಧಿಯಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಲಾಗುತ್ತದೆ.
- ಬೆಳಿಗ್ಗೆ 9 ರಿಂದ 9:30 ರವರೆಗೆ ಪ್ರಾರ್ಥನಾ ಸಭೆ ಇರುತ್ತದೆ. ಈ ಪ್ರಾರ್ಥನಾ ಸಭೆಯಲ್ಲಿ ಋಷಿಮುನಿಗಳು ಮತ್ತು ಸಂತರು ಉಪಸ್ಥಿತರಿರುತ್ತಾರೆ.
- ಬೆಳಗ್ಗೆ 10.30ಕ್ಕೆ ಸಾವರ್ಕರ್ ಪುಷ್ಪಾರ್ಚನೆ ಕಾರ್ಯಕ್ರಮವೂ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಮುಖಂಡರು ಭಾಗವಹಿಸಲಿದ್ದಾರೆ.
- ಮೊದಲ ಹಂತದ ಕಾರ್ಯಕ್ರಮಗಳ ನಂತರ ಸುಮಾರು ಎರಡೂವರೆ ಗಂಟೆಗಳ ವಿರಾಮ ಇರುತ್ತದೆ.
ಎರಡನೇ ಹಂತದ ಕಾರ್ಯಕ್ರಮಗಳೇನು?
- ಎರಡನೇ ಹಂತದ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ರಾಷ್ಟ್ರಗೀತೆಯೊಂದಿಗೆ ಆರಂಭವಾಗಲಿದೆ.
- ಇದಾದ ಬಳಿಕ ಎರಡು ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.
- ರಾಜ್ಯಸಭೆಯ ಉಪಾಧ್ಯಕ್ಷರು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಸಂದೇಶವನ್ನು ಓದುತ್ತಾರೆ.
- ವೇಳಾಪಟ್ಟಿಯ ಪ್ರಕಾರ, ಪ್ರತಿಪಕ್ಷಗಳು ಬಹಿಷ್ಕಾರವನ್ನು ಘೋಷಿಸಿದ್ದರೂ, ಪ್ರತಿಪಕ್ಷದ ನಾಯಕರೂ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ಬಳಿಕ ಲೋಕಸಭೆ ಸ್ಪೀಕರ್ ಕೂಡ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
- ಸಮಾರಂಭದಲ್ಲಿ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಾಗುವುದು.
- ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
- ಮಧ್ಯಾಹ್ನ 2ರಿಂದ 2.30ರೊಳಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ