ನಿಷೇಧಿತ ಪಿಎಲ್‌ಎಫ್‌ಐ ನಕ್ಸಲ್ ಸಂಘಟನೆಯ ಇಬ್ಬರು ಅರೆಸ್ಟ್
ನಿಷೇಧಿತ ನಕ್ಸಲ್ ಸಂಘಟನೆ ಪಿಎಲ್‌ಎಫ್‌ಐನ ಇಬ್ಬರು ಸಹಚರರನ್ನು ಜಾರ್ಖಂಡ್‌ನ ಖುಂಟಿಯಲ್ಲಿ ಬಂಧಿಸಲಾಗಿದೆ. ಬಂಧಿತರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖುಂತಿ (ಜಾರ್ಖಂಡ್): ನಿಷೇಧಿತ ನಕ್ಸಲ್ ಸಂಘಟನೆ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (PLFI) ಇಬ್ಬರು ಸಹಚರರನ್ನು ಜಾರ್ಖಂಡ್‌ನ ಖುಂಟಿಯಲ್ಲಿ ಬಂಧಿಸಲಾಗಿದೆ. ನಕ್ಸಲರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಖುಂತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಮನ್ ಕುಮಾರ್ ಹೇಳಿದ್ದಾರೆ. ಬಂಧಿತ ಪಿಎಲ್‌ಎಫ್‌ಐ ಸಹಚರರನ್ನು ಲಲಿತ್ ಖೇರ್ವಾರ್ ಮತ್ತು ಶಿವನಾರಾಯಣ ಸಿಂಗ್ ಎಂದು ಗುರುತಿಸಲಾಗಿದೆ.
ಸದ್ಯ ಬಂಧಿತ ನಕ್ಸಲರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಎಸ್ಪಿ ಅಮನ್ ಕುಮಾರ್ ತಿಳಿಸಿದ್ದಾರೆ. ಮೇ 21 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಲೆಮರೆಸಿಕೊಂಡಿದ್ದ ಪಿಎಲ್‌ಎಫ್‌ಐನ ಸ್ವಯಂಘೋಷಿತ ಮುಖ್ಯಸ್ಥ ದಿನೇಶ್ ಗೋಪೆ ಅಲಿಯಾಸ್ ಕುಲದೀಪ್ ಯಾದವ್ ಅಲಿಯಾಸ್ ಬಡ್ಕು ಎಂಬಾತನನ್ನು ದೆಹಲಿಯಲ್ಲಿ ಬಂಧಿಸಿತ್ತು. ಆರೋಪಿ ವಿರುದ್ಧ 102 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: ಖಲಿಸ್ತಾನಿಗಳಿಂದ ಜೀವ ಬೆದರಿಕೆ: ಪಂಜಾಬ್ ಸಿಎಂ ಭಗವಂತ್ ಮಾನ್ಗೆ Z+ ಭದ್ರತೆ
NIA ತನಿಖೆಗಳ ಪ್ರಕಾರ, ಜಾರ್ಖಂಡ್, ಬಿಹಾರ ಮತ್ತು ಒಡಿಶಾದಲ್ಲಿ ಗೋಪ್ ವಿರುದ್ಧ 102 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಮತ್ತು ಈ ಪ್ರಕರಣಗಳಲ್ಲಿ ಹೆಚ್ಚಿನವು ಕೊಲೆಗಳು, ಅಪಹರಣಗಳು, ಬೆದರಿಕೆಗಳು, ಸುಲಿಗೆ ಮತ್ತು 2007 ರಲ್ಲಿ ರೂಪುಗೊಂಡ ಮಾವೋವಾದಿ ಸಂಘಟನೆಯಾದ PLFI ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿ (ಸಿಪಿಐ-ಮಾವೋವಾದಿ)ಗಾಗಿ ನಿಧಿ ಸಂಗ್ರಹಿಸುವುದಕ್ಕೆ ಸಂಬಂಧಿಸಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ