New Parliament: ನೂತನ ಸಂಸತ್ ಭವನದ ಉದ್ಘಾಟನೆಗೆ ಬನ್ನಿ, ಇದನ್ನು ರಾಜಕೀಯಗೊಳಿಸಬೇಡಿ: ರವಿಶಂಕರ್ ಪ್ರಸಾದ್
ಕಾರ್ಯಕ್ರಮವನ್ನು ಬಹಿಷ್ಕರಿಸುವ ಕಾಂಗ್ರೆಸ್ ಕ್ರಮಕ್ಕೂ ರಾಷ್ಟ್ರಪತಿಗೂ ಯಾವುದೇ ಸಂಬಂಧವಿಲ್ಲ. ಡಿಸೆಂಬರ್ 2020 ರಲ್ಲಿ ಸಂಸತ್ ಭವನಕ್ಕೆ ಶಂಕುಸ್ಥಾಪನೆ ಮಾಡುವ ಕಾರ್ಯಕ್ರಮದ ಭಾಗವಾಗಿತ್ತೇ ಕಾಂಗ್ರೆಸ್? ಅವರು ಎಂದಾದರೂ ಗುಜರಾತ್‌ನಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಗೆ ಅಥವಾ ಇಂಡಿಯಾ ಗೇಟ್‌ನಲ್ಲಿರುವ ಮಿಲಿಟರಿಯ ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದಾರೆಯೇ?
ದೆಹಲಿ: ಮೇ 28 ರಂದು ನೂತನ ಸಂಸತ್ ಭವನವನ್ನು (Parliament) ಔಪಚಾರಿಕವಾಗಿ ಉದ್ಘಾಟಿಸಲು ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದ ಬಿಜೆಪಿ (BJP) ಹಿರಿಯ ನಾಯಕ ರವಿಶಂಕರ್ ಪ್ರಸಾದ್ (Ravi Shankar Prasad), ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸದಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ. ದಯವಿಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿ. ಸಂಸತ್ತು ಭಾರತದ ಪ್ರಜಾಪ್ರಭುತ್ವದ ಕಿರೀಟವಾಗಿದೆ. ಪ್ರಧಾನ ಮಂತ್ರಿ ಕೂಡ ಸಂಸತ್ತಿನ ಪ್ರಮುಖ ಭಾಗವಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ. ಭಾನುವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವುದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅಲ್ಲ ಎಂಬ ಕಾರಣಕ್ಕೆ ಇಪ್ಪತ್ತೊಂದು ರಾಜಕೀಯ ಪಕ್ಷಗಳು ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಘೋಷಿಸಿವೆ. ದ್ರೌಪದಿ ಮುರ್ಮು ಅವರಿಗೆ ಉದ್ಘಾಟನೆ ಮಾಡಲು ಅವಕಾಶ ನೀಡದೇ ಇರುವುದು ರಾಷ್ಟ್ರಪತಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಮತ್ತು ಇತರ ಹಲವು ವಿರೋಧ ಪಕ್ಷಗಳು ಹೇಳಿವೆ.
ರಾಷ್ಟ್ರಪತಿಗಳ ಬಗ್ಗೆ ತಮಗೆ ಸಂಪೂರ್ಣ ಗೌರವವಿದೆ. ರಾಷ್ಟ್ರಪತಿ ಕಚೇರಿಯನ್ನು ವಿವಾದಕ್ಕೆ ಎಳೆಯಲು ಬಯಸುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಕಾರ್ಯಕ್ರಮವನ್ನು ಬಹಿಷ್ಕರಿಸುವ ಕಾಂಗ್ರೆಸ್ ಕ್ರಮಕ್ಕೂ ರಾಷ್ಟ್ರಪತಿಗೂ ಯಾವುದೇ ಸಂಬಂಧವಿಲ್ಲ. ಡಿಸೆಂಬರ್ 2020 ರಲ್ಲಿ ಸಂಸತ್ ಭವನಕ್ಕೆ ಶಂಕುಸ್ಥಾಪನೆ ಮಾಡುವ ಕಾರ್ಯಕ್ರಮದ ಭಾಗವಾಗಿತ್ತೇ ಕಾಂಗ್ರೆಸ್? ಅವರು ಎಂದಾದರೂ ಗುಜರಾತ್‌ನಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಗೆ ಅಥವಾ ಇಂಡಿಯಾ ಗೇಟ್‌ನಲ್ಲಿರುವ ಮಿಲಿಟರಿಯ ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದಾರೆಯೇ?. ಇಲ್ಲ. ಅವರು ಮಾಡಲಿಲ್ಲ. ಏಕೆಂದರೆ ಮೋದಿ ಅದನ್ನು ಮಾಡಿದ್ದು. ಇದು ಅವರ ಸಮಸ್ಯೆ ಎಂದು ಪ್ರಸಾದ್ ಹೇಳಿದರು.
2020ರ ಡಿಸೆಂಬರ್‌ನಲ್ಲಿ ಪಿಎಂ ಮೋದಿ ಹೊಸ ಸಂಸತ್ತಿನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದಾಗ, ಕಾಂಗ್ರೆಸ್ ಸಮಾರಂಭವನ್ನು ಬಹಿಷ್ಕರಿಸಿತ್ತು. ಕೇಂದ್ರ ಹಿಂತೆಗೆದುಕೊಂಡಿದ್ದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ರೈತರು ದೆಹಲಿಯ ಹೊರಗೆ ಪ್ರತಿಭಟನೆ ನಿರತರಾಗಿದ್ದ ಹೊತ್ತಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇದನ್ನು ಆಗ ಕಾಂಗ್ರೆಸ್ ಕಟುವಾಗಿಯೇ ಟೀಕಿಸಿತ್ತು,
ಬುಧವಾರ, 19 ರಾಜಕೀಯ ಪಕ್ಷಗಳು ಮೇ 28 ರಂದು ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಪ್ರಕಟಿಸಲು ಜಂಟಿ ಹೇಳಿಕೆಯನ್ನು ನೀಡಿದ್ದು, “ಪ್ರಜಾಪ್ರಭುತ್ವದ ಆತ್ಮವು ಸಂಸತ್ತಿನಿಂದ ಹೊರಬಂದಾಗ” ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಂಡುಕೊಂಡಿಲ್ಲ ಎಂದಿವೆ. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಕೂಡ ಈ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೇಳಿವೆ.
ಇದನ್ನೂ ಓದಿ: New Parliament: ಪ್ರಧಾನಿ ಮೋದಿಗೆ ಸೆಂಗೋಲ್ ಹಸ್ತಾಂತರಿಸಲಿದ್ದಾರೆ ಮಧುರೈ ಅಧೀನಂ ಪೀಠಾದಿಪತಿ ಹರಿಹರ ದೇಶಿಕ ಸ್ವಾಮೀಜಿ
ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರತಿಪಕ್ಷಗಳು ಈ ರೀತಿ ಬಹಿಷ್ಕರಿಸುವುದದು ಮೊದಲೇನೂ ಅಲ್ಲ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಕಡೆಗಣಿಸುವ ಅವರ ಕ್ಯಾಪ್‌ಗೆ ಮತ್ತೊಂದು ಗರಿಯಾಗಿದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ