ಮಹಿಳೆಯೊಬ್ಬರು 6 ತಿಂಗಳ ಮುಗುವಿನೊಂದಿಗೆ 16ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 33 ವರ್ಷದ ಮಹಿಳೆಯೊಬ್ಬರು ಬುಧವಾರ ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ 16 ನೇ ಮಹಡಿಯಿಂದ ತನ್ನ ಆರು ತಿಂಗಳ ಹೆಣ್ಣುಮಗುವಿನೊಂದಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ.
ತಡರಾತ್ರಿ, ಲಾ ರೆಸಿಡೆನ್ಶಿಯಾ ಸೊಸೈಟಿಯ ಟವರ್ 2 ರಿಂದ ಬೀಳುವ ದೊಡ್ಡ ಶಬ್ದ ಕೇಳಿಸಿತು. ಘಟನಾ ಸ್ಥಳಕ್ಕೆ ಸೊಸೈಟಿ ಸಿಬ್ಬಂದಿ ಆಗಮಿಸಿದಾಗ ಮಹಿಳೆ ಹಾಗೂ ಆಕೆಯ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಸಾವನ್ನಪ್ಪಿದ್ದರು.
ಮತ್ತಷ್ಟು ಓದಿ: ಗಂಡನ ಆಕಸ್ಮಿಕ ಸಾವು: ಮಾನಸಿಕವಾಗಿ ನೊಂದ ಪತ್ನಿ 15 ದಿನದಲ್ಲಿ ಆತ್ಮಹತ್ಯೆ
ಭದ್ರತಾ ತಂಡವು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಿಯಂತ್ರಿಸಿದರು. ಇಡೀ ಘಟನೆ ಬಿಶ್ರಖ್ ಏರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರ ವಿಚಾರಣೆ ವೇಳೆ ಸಾರಿಕಾ ಅನಾರೋಗ್ಯದಿಂದ ಬಳಲುತ್ತಿದ್ದು, ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೃತಳ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ