ಗಂಡನ ಆಕಸ್ಮಿಕ ಸಾವು: ಮಾನಸಿಕವಾಗಿ ನೊಂದ ಪತ್ನಿ 15 ದಿನದಲ್ಲಿ ಆತ್ಮಹತ್ಯೆ
Hyderabad wife suicide: ಗಚ್ಚಿಬೌಲಿಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದ ಅಮನ್ ಕುಮಾರ್ ಸಿಂಗ್ ಅವರು ಅಧಿಕ ರಕ್ತದೊತ್ತಡದಿಂದ ಕಳೆದ ತಿಂಗಳ 26ರಂದು ಬ್ರೈನ್ ಸ್ಟ್ರೋಕ್ ನಿಂದ ಸಾವನ್ನಪ್ಪಿದ್ದರು. ಆದರೆ ಅವರ ಹಠಾತ್ ಸಾವಿನ ದುಃಖವನ್ನು ಪತಿಗೆ ಅರಗಿಸಿಕೊಳ್ಳಲಾಗಿಲ್ಲ.
ಗಂಡ ಎಂದರೆ ಆಕೆಗೆ ಅಪಾರ ಪ್ರೀತಿ. ಆ ಜೋಡಿಯನ್ನು ನೋಡಿ ಎಲ್ಲರೂ ಸುಖೀ ಜೋಡಿ ಎಂದುಕೊಂಡರು. ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ ಇಬ್ಬರು ಮಕ್ಕಳೊಂದಿಗೆ ಅವರ ಜೀವನ ಸುಗಮವಾಗಿ ಸಾಗಿತ್ತು. ಆದರೆ ಇವರಿಬ್ಬರ ಪರಸ್ಪರ ಪ್ರೀತಿ ಹೀಗಿರುವಾಗ ಪತಿಗೆ ಬ್ರೈನ್ ಸ್ಟ್ರೋಕ್ ಆಗಿದೆ. ಪತಿಯ ಸಾವನ್ನು ಸಹಿಸಲಾಗದೆ ಪತ್ನಿ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದಾರುಣ ಘಟನೆ ಮಂಗಳವಾರ ಮಂಗಲ್ ಹೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರು ನೀಡಿದ ವಿವರಗಳ ಪ್ರಕಾರ, ರಹೀಂಪುರದ ಅಮನ್ ಕುಮಾರ್ ಸಿಂಗ್ (36) ಅವರು ಕೆಲವು ವರ್ಷಗಳ ಹಿಂದೆ ಅಪ್ಪರ್ ಧೂಳ್ ಪೇಟ್ ಆರಾಂಘರ್ ಕಾಲೋನಿಗೆ ಸೇರಿದ ಅಸ್ಮಿತಾ (31) ಅವರನ್ನು ಮದುವೆಯಾಗಿದ್ದರು. ಅವರಿಗೆ ರೋನಕ್ ಮತ್ತು ರಿಥ್ವಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಗಚ್ಚಿಬೌಲಿಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದ ಅಮನ್ ಕುಮಾರ್ ಸಿಂಗ್ ಅವರು ಅಧಿಕ ರಕ್ತದೊತ್ತಡದಿಂದ ಕಳೆದ ತಿಂಗಳ 26ರಂದು ಬ್ರೈನ್ ಸ್ಟ್ರೋಕ್ ನಿಂದ ಸಾವನ್ನಪ್ಪಿದ್ದರು. ಆದರೆ ಅವರ ಹಠಾತ್ ಸಾವಿನ ದುಃಖವನ್ನು ಪತಿಗೆ ಅರಗಿಸಿಕೊಳ್ಳಲಾಗಿಲ್ಲ.
Also Read: ಒಡಿಶಾದ ಸೂಪರ್‌ಫುಡ್ ಕೆಂಪು ಇರುವೆ ಚಟ್ನಿಗೆ ಲಭಿಸಿತು ಜಿಐ ಟ್ಯಾಗ್! ಏನಿದರ ವಿಶೇಷ
ಇದರಿಂದ ಅಸ್ಮಿತಾ 15 ದಿನಗಳ ಕಾಲ ಪತಿ ಫೋಟೋವನ್ನು ತನ್ನ ಹತ್ತಿರ ಇಟ್ಟುಕೊಂಡು ಮನಬಿಚ್ಚಿ ಅಳುತ್ತಿದ್ದರು. ತೀವ್ರ ಮಾನಸಿಕ ಸ್ಥಿಮಿತ ಕಳೆದುಕೊಂಡ ಅವರು ನಿನ್ನೆ ಮಂಗಳವಾರ ಸಂಜೆ ಆರಾಂಘರ್ ಕಾಲೋನಿಯಲ್ಲಿ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Wed, 10 January 24