ದೆಹಲಿ: ಪಠಾಣ್‌ಕೋಟ್‌ನ (Pathankot) ಧೀರಪುಲ್ (Dheerapul ಬಳಿಯ ಭಾರತೀಯ ಸೇನೆಯ (Indian Army) ತ್ರಿವೇಣಿ ಗೇಟ್‌ನಲ್ಲಿ ಸೋಮವಾರ ಮುಂಜಾನೆ ಗ್ರೆನೇಡ್ ಸ್ಫೋಟ (Grenade Blast) ಸಂಭವಿಸಿದೆ. ಕಂಟೋನ್ಮೆಂಟ್‌ನ ತ್ರಿವೇಣಿ ಗೇಟ್‌ನ (Triveni Gate)ಮುಂದೆ ಕೆಲವು ಅಪರಿಚಿತ ಮೋಟರ್‌ಸೈಕ್ಲಿಸ್ಟ್‌ಗಳು ಗ್ರೆನೇಡ್ ಬಿಸಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಪಡೆದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. “ಪಠಾಣ್‌ಕೋಟ್‌ನ ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ ಸಂಭವಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಸಿಸಿಟಿವಿಗಳ ದೃಶ್ಯಾವಳಿಗಳನ್ನು ತನಿಖೆ ಮಾಡಲಾಗುತ್ತಿದೆ” ಎಂದು ಪಠಾಣ್‌ಕೋಟ್‌ನ ಎಸ್‌ಎಸ್‌ಪಿ ಸುರೇಂದ್ರ ಲಂಬಾ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಫೋಟದ ನಂತರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ . ಸ್ಥಳದಿಂದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಗ್ರೆನೇಡ್‌ನ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸ್ಫೋಟದಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
Punjab | A grenade blast took place near Triveni Gate of an Army camp in Pathankot. Further investigation is underway. CCTVs footage will be probed: SSP Pathankot, Surendra Lamba pic.twitter.com/NsVSQxz0eF
— ANI (@ANI) November 22, 2021
ಜನವರಿ 2016 ರಲ್ಲಿ, ಭಾರತೀಯ ವಾಯುಪಡೆಯ ಪಠಾಣ್‌ಕೋಟ್ ವಾಯುಪಡೆಯ ನೆಲೆಯ ಮೇಲೆ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ಮಾಡಿದರು, ಇದರಲ್ಲಿ ಭದ್ರತಾ ಪಡೆಗಳ ಮೂವರು ಸಿಬ್ಬಂದಿ ಹುತಾತ್ಮರಾಗಿದ್ದರು.
ಇದನ್ನೂ ಓದಿ: Petrol Price Today: ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ