ಇಂದು ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್, ಕಡಿಮೆಯಾಗುತ್ತಾ ಹೊರೆ?
ದೆಹಲಿ: ದೇಶದಲ್ಲಿ ಕ್ರೂರಿ ಕೊರೊನಾ ದಾಳಿಯಿಟ್ಟ ಬಳಿಕ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ಅತ್ತ ಆದಾಯ ಇಲ್ಲದೆ, ಇತ್ತ ಉದ್ಯಮಗಳೂ ಉಳಿಯದೆ ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಹೊತ್ತಲ್ಲೇ ಜಿಎಸ್‌ಟಿ ಸಭೆ ಕರೆಯಲಾಗಿದ್ದು, ಇಂದು ನಡೆಯಲಿರುವ ಜಿಎಸ್‌ಟಿ ಮೀಟಿಂಗ್ ತೀವ್ರ ಕುತೂಹಲ ಕೆರಳಿಸಿದೆ. ಯಾವ ಯಾವ ಕ್ಷೇತ್ರಕ್ಕೆ ಡಿಸ್ಕೌಂಟ್ ಸಿಗುತ್ತೆ ಅನ್ನೋದೆ ಯಕ್ಷಪ್ರಶ್ನೆಯಾಗಿದೆ. ಲಕ್ಷಾಂತರ ಜನರಿಗೆ ಹಬ್ಬಿರುವ ಮಹಾಮಾರಿ. ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿರುವ ಪರಿಸ್ಥಿತಿ. ಅಂದಹಾಗೆ ನೆರೆ ರಾಷ್ಟ್ರ ಚೀನಾದಿಂದ ಇಡೀ ವಿಶ್ವಕ್ಕೆ ಹರಡಿ, ವರ್ಲ್ಡ್ ಟೂರ್ ನಂತರ […]
ದೆಹಲಿ: ದೇಶದಲ್ಲಿ ಕ್ರೂರಿ ಕೊರೊನಾ ದಾಳಿಯಿಟ್ಟ ಬಳಿಕ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ಅತ್ತ ಆದಾಯ ಇಲ್ಲದೆ, ಇತ್ತ ಉದ್ಯಮಗಳೂ ಉಳಿಯದೆ ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಹೊತ್ತಲ್ಲೇ ಜಿಎಸ್‌ಟಿ ಸಭೆ ಕರೆಯಲಾಗಿದ್ದು, ಇಂದು ನಡೆಯಲಿರುವ ಜಿಎಸ್‌ಟಿ ಮೀಟಿಂಗ್ ತೀವ್ರ ಕುತೂಹಲ ಕೆರಳಿಸಿದೆ. ಯಾವ ಯಾವ ಕ್ಷೇತ್ರಕ್ಕೆ ಡಿಸ್ಕೌಂಟ್ ಸಿಗುತ್ತೆ ಅನ್ನೋದೆ ಯಕ್ಷಪ್ರಶ್ನೆಯಾಗಿದೆ.
ಲಕ್ಷಾಂತರ ಜನರಿಗೆ ಹಬ್ಬಿರುವ ಮಹಾಮಾರಿ. ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿರುವ ಪರಿಸ್ಥಿತಿ. ಅಂದಹಾಗೆ ನೆರೆ ರಾಷ್ಟ್ರ ಚೀನಾದಿಂದ ಇಡೀ ವಿಶ್ವಕ್ಕೆ ಹರಡಿ, ವರ್ಲ್ಡ್ ಟೂರ್ ನಂತರ ಭಾರತದಲ್ಲೂ ಭಯ ಹುಟ್ಟಿಸಿರುವ ‘ಕೊರೊನಾ’ ಸೋಂಕು ಆರ್ಥಿಕತೆಯನ್ನ ದಿಕ್ಕೆಡಿಸಿದೆ. ದೇಶದಲ್ಲಿ ಲಾಕ್‌ಡೌನ್ ಪರಿಣಾಮ ಉದ್ಯಮವಲಯ ತತ್ತರಿಸಿದೆ.
ಹೋಟೆಲ್ ಸೇರಿದಂತೆ ರೆಸ್ಟೊರೆಂಟ್, ಅಂಗಡಿ, ಕೈಗಾರಿಕೆಗಳು ಲಾಕ್ಡೌನ್ನಿಂದ ಬಂದ್ ಆಗಿದ್ದವು. ಆದ್ರೆ ಈಗ ಲಾಕ್ಡೌನ್ನ ಸಂಕೋಲೆಯಿಂದ ಮುಕ್ತಿ ಸಿಕ್ಕರೂ ತತ್ತರಿಸಿರುವ ಆರ್ಥಿಕತೆ ಸುಧಾರಿಸುತ್ತಿಲ್ಲ. ಮೊದಲಿನಂತೆ ವ್ಯಾಪಾರ ಇಲ್ಲ, ಉದ್ಯಮ ಚುರುಕಾಗಿ ನಡೆಯುತ್ತಿಲ್ಲ. ಗ್ರಾಹಕರು ಸೇವಾ ವಲಯದತ್ತ ಸುಳಿಯುತ್ತಿಲ್ಲ. ಹೀಗಾಗಿ ‘ಜಿಎಸ್‌ಟಿ’ ದರ ಕಡಿಮೆ ಮಾಡಿ ಎಂಬ ಕೂಗು ಕೇಳಿಬಂದಿದೆ. ಇಷ್ಟೆಲ್ಲಾ ನಡೆಯುತ್ತಿರುವಾಗ್ಲೇ ಇಂದು ಜಿಎಸ್‌ಟಿ ಕೌನ್ಸಿಲ್ ಸಭೆಯನ್ನ ಕರೆಯಲಾಗಿದೆ.
ಜಿಎಸ್‌ಟಿ ದರ ಕಡಿಮೆ ಮಾಡುತ್ತಾ ಕೇಂದ್ರ ಸರ್ಕಾರ? ಕಳೆದ 3 ವರ್ಷದಲ್ಲೇ ಇವತ್ತಿನ ಸಭೆ ಬಹಳ ಮಹತ್ವದ್ದು. ಏಕೆಂದರೆ ಕೊರೊನಾ ವೈರಸ್ ಮತ್ತು ಲಾಕ್ಡೌನ್ನ ಪರಿಣಾಮ ದೇಶದ ಎಲ್ಲಾ ಆರ್ಥಿಕ ವಲಯಗಳಿಗೂ ಹೊಡೆತ ಬಿದ್ದಿದೆ. ಇಂತಹ ಸ್ಥಿತಿಯಲ್ಲಿ ದೇಶದ ತೆರಿಗೆ ವ್ಯವಸ್ಥೆ, ತೆರಿಗೆ ದರ ಹೇಗಿರಬೇಕು ಎಂದು ನಿರ್ಧರಿಸುವ ಮಹತ್ವದ ಚರ್ಚೆ ಜಿಎಸ್‌ಟಿ ಮಂಡಳಿಯಲ್ಲಿ ನಡೆಯಲಿದೆ. ಮಾರ್ಚ್ ತಿಂಗಳ ಬಳಿಕ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ.
ಸಭೆಯಲ್ಲಿ ಜಿಎಸ್‌ಟಿ ದರ ಕಡಿಮೆ ಮಾಡಬೇಕೇ? ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಉದ್ಯಮ ವಲಯ ಸೇರಿದಂತೆ ಎಲ್ಲಾ ಕ್ಷೇತ್ರಗಳು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿವೆ. ಇಂಥ ಹೊತ್ತಿನಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯುತ್ತಿದೆ. ಏಪ್ರಿಲ್ನಲ್ಲಿ ದೇಶದಲ್ಲಿ ಜಿಎಸ್‌ಟಿ ಸಂಗ್ರಹ 49,500 ಕೋಟಿ ರೂಪಾಯಿಗೆ ಕುಸಿದಿದೆ. ಇದಕ್ಕೂ ಮೊದಲು ಪ್ರತಿ ತಿಂಗಳು 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಜಿಎಸ್‌ಟಿ ಸಂಗ್ರಹಿಸುವ ಗುರಿ ಇತ್ತು. ಆದರೆ ಅದು ಹುಸಿಯಾಗುತ್ತಾ ಸಾಗಿದೆ. ಇಷ್ಟೆಲ್ಲದರ ನಡುವೆ ಇಂದಿನ ಜಿಎಸ್‌ಟಿ ಸಭೆಯಲ್ಲಿ ಕೈಗೊಳ್ಳಬಹುದಾದ ನಿರ್ಧಾರಗಳನ್ನ ನೋಡೋದಾದ್ರೆ.
ತೈಲ, ಗ್ಯಾಸ್ ಜಿಎಸ್‌ಟಿ ವ್ಯಾಪ್ತಿಗೆ? ಇವತ್ತು ಮಹತ್ವದ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆದರೂ ಜಿಎಸ್‌ಟಿ ದರ ಕಡಿಮೆ ಮಾಡುವ ಸಾಧ್ಯತೆ ಇಲ್ಲ. ಅಲ್ಲದೆ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್ನಲ್ಲಿ ರಾಜ್ಯಗಳಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಯಬಹುದಾಗಿದೆ. ಮತ್ತೊಂದ್ಕಡೆ ಉದ್ಯಮ ವಲಯಕ್ಕೆ ಕೇಂದ್ರದಿಂದ ರಿಲೀಫ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಸಾಲ ಪಡೆಯೋ ಬಗ್ಗೆಯೂ ಮೀಟಿಂಗ್ನಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ. ಇನ್ನುಳಿದಂತೆ ಬಹುದೊಡ್ಡ ಆದಾಯ ಮೂಲವಾಗಿರುವ ತೈಲ ಹಾಗೂ ಗ್ಯಾಸ್ ಅನ್ನ ಜಿಎಸ್‌ಟಿ ವ್ಯಾಪ್ತಿಗೆ ತರುವ ಪ್ರಸ್ತಾಪ ಮಂಡನೆಯಾಗಬಹುದು.
ಒಟ್ನಲ್ಲಿ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರಗಳು ಇವೆ. ಆದರೆ ಕೇಂದ್ರ ಸರ್ಕಾರಕ್ಕೂ ‘ಜಿಎಸ್‌ಟಿ’ ಆದಾಯದಲ್ಲಿ ಭಾರಿ ಕೊರತೆ ಉಂಟಾಗಿದೆ. ಹೀಗಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸಹಾಯ ಹಸ್ತ ಡೌಟ್ ಅಂತಾನೆ ಹೇಳಬಹುದು. ಆದ್ರೆ ದೇಶದ ಉದ್ಯಮ ವಲಯಕ್ಕೆ ಹಾಗೂ ಆರ್ಥಿಕ ಚೇತರಿಕೆಗೆ ಯಾವ್ಯಾವ ಕ್ರಮ ಕೈಗೊಳ್ಳಲಾಗುತ್ತದೆ ಅನ್ನೋದನ್ನ ಕಾದು ನೋಡಬೇಕು.
Published On - 6:29 am, Fri, 12 June 20