ಗುಜರಾತ್: ಬುಲೆಟ್ ರೈಲು ಯೋಜನಾ ಸ್ಥಳದಲ್ಲಿ ಅಪಘಾತ, 25 ರೈಲುಗಳು ರದ್ದು

ಬುಲೆಟ್ ರೈಲು ಯೋಜನಾ ಸ್ಥಳದಲ್ಲಿ ನಿರ್ಮಾಣ ಕಾರ್ಯದ ವೇಳೆ ಅಪಘಾತ ಸಂಭವಿಸಿದೆ. ಇಲ್ಲಿನ ನಿರ್ಮಾಣ ಕಾರ್ಯದಲ್ಲಿ ಬಳಸಲಾಗುತ್ತಿದ್ದ ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ ಆಕಸ್ಮಿಕವಾಗಿ ತನ್ನ ಸ್ಥಾನದಿಂದ ಜಾರಿದ್ದು ಪಕ್ಕದ ರೈಲ್ವೆ ಮಾರ್ಗದ ಮೇಲೆ ಪರಿಣಾಮ ಬೀರಿತು. ಇದು ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ನ ಭಾಗವಾಗಿತ್ತು. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಟ್ವಾದಲ್ಲಿ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ತಿಳಿಸಿದೆ.

ಗುಜರಾತ್: ಬುಲೆಟ್ ರೈಲು ಯೋಜನಾ ಸ್ಥಳದಲ್ಲಿ ಅಪಘಾತ, 25 ರೈಲುಗಳು ರದ್ದು
ಗ್ಯಾಂಟ್ರಿ
Image Credit source: Hindustan Times

Updated on: Mar 24, 2025 | 12:09 PM

ಅಹಮದಾಬಾದ್, ಮಾರ್ಚ್​ 24: ಬುಲೆಟ್ ರೈಲು ಯೋಜನಾ ಸ್ಥಳದಲ್ಲಿ ನಿರ್ಮಾಣ ಕಾರ್ಯದ ವೇಳೆ ಅಪಘಾತ ಸಂಭವಿಸಿದೆ. ಇಲ್ಲಿನ ನಿರ್ಮಾಣ ಕಾರ್ಯದಲ್ಲಿ ಬಳಸಲಾಗುತ್ತಿದ್ದ ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ ಆಕಸ್ಮಿಕವಾಗಿ ತನ್ನ ಸ್ಥಾನದಿಂದ ಜಾರಿದ್ದು ಪಕ್ಕದ ರೈಲ್ವೆ ಮಾರ್ಗದ ಮೇಲೆ ಪರಿಣಾಮ ಬೀರಿತು. ಇದು ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ನ ಭಾಗವಾಗಿತ್ತು. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಟ್ವಾದಲ್ಲಿ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ತಿಳಿಸಿದೆ.

ಈ ಘಟನೆಯಿಂದಾಗಿ ಕನಿಷ್ಠ 25 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಹಮದಾಬಾದ್ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಲ್ಲದೆ, 15 ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಐದು ರೈಲುಗಳ ಸಮಯವನ್ನು ಮರು ನಿಗದಿಪಡಿಸಲಾಗಿದ್ದು, ಆರು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.

ರೈಲು ಸಂಚಾರವನ್ನು ಪುನಃಸ್ಥಾಪಿಸಲು ಹಾನಿಗೊಳಗಾದ ರೈಲ್ವೆ ಮಾರ್ಗದಿಂದ ‘ಗ್ಯಾಂಟ್ರಿ’ ಅನ್ನು ತೆಗೆದುಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕ್ರೇನ್‌ಗಳ ಸಹಾಯದಿಂದ ರೈಲ್ವೆ ಹಳಿಗಳ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು ಭುವನೇಶ್ವರ ವಿಶೇಷ ರೈಲು ಟ್ರಿಪ್ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

ರದ್ದಾದ ರೈಲುಗಳಲ್ಲಿ ವತ್ವಾ-ಬೋರಿವಲಿ ಎಕ್ಸ್‌ಪ್ರೆಸ್, ಅಹಮದಾಬಾದ್-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್, ವಡೋದರಾ-ವತ್ವಾ ಇಂಟರ್‌ಸಿಟಿ, ಅಹಮದಾಬಾದ್-ವಲ್ಸಾದ್ ಗುಜರಾತ್ ಕ್ವೀನ್, ಜಾಮ್‌ನಗರ-ವಡೋದರಾ ಇಂಟರ್‌ಸಿಟಿ, ವದ್ನಗರ-ವಲ್ಸಾದ್-ವದ್‌ನಗರ ಎಕ್ಸ್‌ಪ್ರೆಸ್ ಮತ್ತು ವತ್ವಾ-ಆನಂದ್ ಮೆಮು ಸೇರಿವೆ.

ಇದಲ್ಲದೆ, ಅಹಮದಾಬಾದ್-ಮಜಿತಿಯಾ ಚೆನ್ನೈ ಸೆಂಟ್ರಲ್ ಹಮ್‌ಸಫರ್ ಎಕ್ಸ್‌ಪ್ರೆಸ್, ರಾಜ್‌ಕೋಟ್-ಸಿಕಂದರಾಬಾದ್ ಎಕ್ಸ್‌ಪ್ರೆಸ್ ಮತ್ತು ಇತರ ಕೆಲವು ರೈಲುಗಳ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗಿದೆ. ಪ್ರಯಾಣಿಕರಿಗೆ ಸಹಾಯ ಮಾಡಲು ರೈಲ್ವೆ ಅಧಿಕಾರಿಗಳು ಸಹಾಯವಾಣಿ ಸಂಖ್ಯೆಯನ್ನು ಸಹ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ದೆಹಲಿ ಪೊಲೀಸರು ಜನಸಂದಣಿ ನಿರ್ವಹಣಾ ಕ್ರಮಗಳನ್ನು ಜಾರಿಗೆ ತಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ