AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ನಾಯಕನ ಸೋದರಳಿಯ

ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ನಾಯಕ ಶಕ್ತಿಸಿನ್ಹ ಗೋಹಿಲ್ ಸೋದರಳಿಯ ಯಶ್‌ರಾಜ್ ಗೋಹಿಲ್ ಪತ್ನಿ ರಾಜೇಶ್ವರಿ ಜಡೇಜಾ ಅವರನ್ನು ಪರವಾನಗಿ ಪಡೆದ ಬಂದೂಕಿನಿಂದ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಇದು ಎರಡನೇ ವಿವಾಹವಾಗಿತ್ತು. ಘಟನೆಗೆ ಕಾರಣ ಮತ್ತು ಬಂದೂಕು ಬಳಕೆಯ ಬಗ್ಗೆ ತನಿಖೆ ನಡೆಯುತ್ತಿದೆ.

ಪತ್ನಿಯನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ನಾಯಕನ ಸೋದರಳಿಯ
ಯಶ್​ರಾಜ್ Image Credit source: India Today
ನಯನಾ ರಾಜೀವ್
|

Updated on: Jan 22, 2026 | 11:59 AM

Share

ಅಹಮದಾಬಾದ್, ಜನವರಿ 22: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಗುಜರಾತ್ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಶಕ್ತಿಸಿನ್ಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಗೋಹಿಲ್, ತನ್ನ ಪತ್ನಿ ರಾಜೇಶ್ವರಿ ಜಡೇಜಾ ಅವರನ್ನು ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಮೂಲತಃ ಭಾವನಗರದ ಈ ದಂಪತಿ ಎರಡು ತಿಂಗಳ ಹಿಂದೆ ಮದುವೆಯಾದ ನಂತರ ಅಹಮದಾಬಾದ್‌ನಲ್ಲಿ ನೆಲೆಸಿದ್ದರು. ಇಬ್ಬರೂ ಈ ಹಿಂದೆ ಮದುವೆಯಾಗಿದ್ದರು, ಮತ್ತು ಇದು ಇಬ್ಬರಿಗೂ ಎರಡನೇ ವಿವಾಹವಾಗಿತ್ತು.

ಪೊಲೀಸ್ ಪ್ರಾಥಮಿಕ ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ದಂಪತಿ ಊಟ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಈ ಘಟನೆ ನಡೆದಿದೆ. ಯಶ್​ರಾಜ್, ರಾಜೇಶ್ವರಿ (30) ಅವರನ್ನು ಹತ್ಯೆ ಮಾಡಲು ತಮ್ಮ ಮನೆಯಲ್ಲಿ ಇರಿಸಲಾಗಿದ್ದ ಪರವಾನಗಿ ಪಡೆದ ಬಂದೂಕನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಯ ಪಂಚತಾರಾ ಹೋಟೆಲ್​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಪೊಲೀಸರ ಪ್ರಕಾರ, ರಾಜೇಶ್ವರಿ ಅವರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಲಾಗಿತ್ತು ಮತ್ತು ಯಶ್ರಾಜ್ ಕೂಡ ತಲೆಗೆ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲೇ ರಾಜೇಶ್ವರಿ ಸಾವನ್ನು ದೃಢಪಡಿಸಿದ್ದಾರೆ.ರಾಜೇಶ್ವರಿ ಮೃತಪಟ್ಟ ಬಳಿಕ, ಸ್ವಲ್ಪ ಸಮಯದ ನಂತರ, ಯಶ್ರಾಜ್ ತನ್ನ ಪ್ರಾಣವನ್ನು ತಾನೇ ಕೊನೆಗೊಳಿಸಲು ಅದೇ ಪಿಸ್ತೂಲ್ ಬಳಸಿದ್ದಾರೆಂದು ವರದಿಯಾಗಿದೆ. ಯಶ್‌ರಾಜ್ ಮನೆಯಲ್ಲಿ ಬಂದೂಕನ್ನು ಹೇಗೆ ಮತ್ತು ಏಕೆ ಇಟ್ಟುಕೊಂಡಿದ್ದನು ಎಂಬುದರ ಜೊತೆಗೆ, ಸಾವಿಗೆ ಕಾರಣವಾದ ಸಂದರ್ಭಗಳನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಮತ್ತೊಂದು ಘಟನೆ ಕೋಲ್ಕತ್ತಾದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಪತ್ನಿ ಮತ್ತು ಆಕೆಯ ಸಂಬಂಧಿಕರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಮೃತ ಸನ್ನಿ ಸಿಂಗ್ (34) ಅವರ ಶವವನ್ನು ನಿನ್ನೆ ರಾತ್ರಿ ಪೊಲೀಸರು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ತನಿಖೆ ಆರಂಭವಾಗಿದೆ. ಆತನ ಕುಟುಂಬ ಸದಸ್ಯರು ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ, ಯುವಕನ ಪತ್ನಿ ಮತ್ತು ಭಾವನ ಕಡೆಗೆ ಬೆರಳು ತೋರಿಸಿದರು.

ಸಿಂಗ್ ಅವರ ಮೃತದೇಹ ಅದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪುನಿತಾ ವಾಸಿಸುತ್ತಿದ್ದ ಕೋಣೆಯ ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ, ಅವರು ಬಾಲ್ಕನಿಯಿಂದ ಕೆಳಗೆ ಇಳಿದು, ಮನೆಯ ಬಾಗಿಲು ತೆರೆದು, ಒಳಗೆ ಹೋಗಿ ನೇತಾಡುತ್ತಿರುವ ಶವವನ್ನು ಕಂಡುಕೊಂಡಿದ್ದಾರೆ. ಶೀಘ್ರದಲ್ಲೇ ಸರ್ಶುನಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಶವವನ್ನು ವಶಪಡಿಸಿಕೊಂಡರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ