ಸಹೋದ್ಯೋಗಿಯೊಂದಿಗೆ ಅರಣ್ಯಾಧಿಕಾರಿಗೆ ಅಕ್ರಮ ಸಂಬಂಧ, ಪತ್ನಿ, ಮಕ್ಕಳನ್ನೇ ಕೊಂದು ಹೂತು ಹಾಕಿದ್ದ ವ್ಯಕ್ತಿ

ಅರಣ್ಯಾಧಿಕಾರಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ(Murder) ಮಾಡಿ  ಹೂತುಹಾಕಿರುವ ಘಟನೆ ಗುಜರಾತ್​ನ ಭಾವನಗರದಲ್ಲಿ ನಡೆದಿದೆ. ಆತ ಕಳೆದ ನಾಲ್ಕು ವರ್ಷಗಳಿಂದ ತನ್ನ ಸಹೋದ್ಯೋಗಿ ಜತೆ ಅಕ್ರಮ ಸಂಬಂಧ ಹೊಂದಿದ್ದ, ಕುಟುಂಬದವರು ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಮೂವರನ್ನು ಕೊಂದು ಹೊಂಡದಲ್ಲಿ ಹೂತು ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಹೋದ್ಯೋಗಿಯೊಂದಿಗೆ ಅರಣ್ಯಾಧಿಕಾರಿಗೆ ಅಕ್ರಮ ಸಂಬಂಧ, ಪತ್ನಿ, ಮಕ್ಕಳನ್ನೇ ಕೊಂದು ಹೂತು ಹಾಕಿದ್ದ ವ್ಯಕ್ತಿ
ಅರಣ್ಯಾಧಿಕಾರಿ

Updated on: Nov 21, 2025 | 1:02 PM

ಭಾವನಗರ, ನವೆಂಬರ್ 21: ಅರಣ್ಯಾಧಿಕಾರಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ(Murder) ಮಾಡಿ  ಹೂತುಹಾಕಿರುವ ಘಟನೆ ಗುಜರಾತ್​ನ ಭಾವನಗರದಲ್ಲಿ ನಡೆದಿದೆ. ಆತ ಕಳೆದ ನಾಲ್ಕು ವರ್ಷಗಳಿಂದ ತನ್ನ ಸಹೋದ್ಯೋಗಿ ಜತೆ ಅಕ್ರಮ ಸಂಬಂಧ ಹೊಂದಿದ್ದ, ಕುಟುಂಬದವರು ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಮೂವರನ್ನು ಕೊಂದು ಹೊಂಡದಲ್ಲಿ ಹೂತು ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಖಂಬಾಲಾ ಎಂಬ ಆರೋಪಿ 2022ರಲ್ಲಿ ಮಹಿಳಾ ಅರಣ್ಯಾಧಿಕಾರಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ, ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಆ ಮಹಿಳೆ ಈ ಅಪರಾಧದಲ್ಲಿ ಭಾಗಿಯಾಗಿದ್ದಾಳೋ ಇಲ್ಲವೋ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅರಣ್ಯ ಅಧಿಕಾರಿಯನ್ನು ಇತ್ತೀಚೆಗೆ ಭಾವನಗರಕ್ಕೆ ವರ್ಗಾಯಿಸಲಾಯಿತು, ಆದರೆ ಅವರ 40 ವರ್ಷದ ಪತ್ನಿ ನಯನಾ, 13 ವರ್ಷದ ಮಗಳು ಪ್ರೀತಾ ಮತ್ತು 9 ವರ್ಷದ ಮಗ ಭವ್ಯಾ ಸೂರತ್‌ನಲ್ಲಿ ವಾಸಿಸುತ್ತಿದ್ದರು. ಸಣ್ಣ ರಜೆಗಾಗಿ ಭಾವನಗರಕ್ಕೆ ಬಂದಿದ್ದರು. ಸ್ವಲ್ಪ ಸಮಯದ ನಂತರ ಅವರು ಕಾಣೆಯಾಗಿದ್ದರು, ಇದು ಕುಟುಂಬದಲ್ಲಿ ಕಳವಳವನ್ನು ಉಂಟುಮಾಡಿತ್ತು.

ಮತ್ತಷ್ಟು ಓದಿ: ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ‌ ಹತ್ಯೆ: ಕಾರಣವೇನು?

ನವೆಂಬರ್ 5 ರಂದು, ಅಧಿಕಾರಿ ಪೊಲೀಸರನ್ನು ಸಂಪರ್ಕಿಸಿ, ತನ್ನ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ತನ್ನ ಪತ್ನಿ ಮತ್ತು ಮಕ್ಕಳು ಆಟೋರಿಕ್ಷಾದಲ್ಲಿ ಹೋಗುವುದನ್ನು ನೋಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಸಿಬ್ಬಂದಿ ಈ ಹೇಳಿಕೆಯನ್ನು ನಿರಾಕರಿಸಿದ್ದ.

ವಿಚಾರಣೆಯ ಸಮಯದಲ್ಲಿ ಖಂಭಾಲಾ ವಿಚಿತ್ರ ವರ್ತನೆ ಮತ್ತು ಕಾಣೆಯಾದ ಕುಟುಂಬ ಸದಸ್ಯರ ಬಗ್ಗೆ ಅವರಲ್ಲಿ ವ್ಯಕ್ತವಾಗದ ಕಾಳಜಿ ನೋಡಿ ಪೊಲೀಸರಿಗೆ ಅನುಮಾನ ಹೆಚ್ಚಾಗಿತ್ತು. ಖಂಭಾಲಾ ಅವರ ಕರೆ ದಾಖಲೆಗಳ ಪ್ರಾಥಮಿಕ ತನಿಖೆಯಲ್ಲಿ ಅವರು ಗಿರೀಶ್ ವಾನಿಯಾ ಎಂಬ ಕಿರಿಯ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಂಡುಬಂದಿದೆ. ಆರೋಪಿಯು ವಾನಿಯಾ ಅವರನ್ನು ಕಸ ಸುರಿಯಲು ತನ್ನ ಮನೆಯ ಹಿಂದೆ ಎರಡು ಹೊಂಡಗಳನ್ನು ಅಗೆಯಲು ಕೇಳಿಕೊಂಡಿದ್ದ.

ನಾಲ್ಕು ದಿನಗಳ ಬಳಿಕ ನೀಲಗಾಯ್ ಹೊಂಡಕ್ಕೆ ಬಿದ್ದಿಬಿಟ್ಟಿದೆ ಅನ್ನು ಮುಚ್ಚಬೇಕು ಎಂದು  ಡಂಪರ್ ಟ್ರಕ್ ಕಳುಹಿಸುವಂತೆ ಕರೆ ಮಾಡಿದ್ದ. ನವೆಂಬರ್ 16 ರಂದು ಪೊಲೀಸರು ಆರೋಪಿಯ ಪತ್ನಿ ಮತ್ತು ಮಕ್ಕಳ ಶವಗಳನ್ನು ಹೊಂಡಗಳಿಂದ ಹೊರತೆಗೆದರು. ನಂತರ ಅರಣ್ಯ ಅಧಿಕಾರಿಯನ್ನು ಬಂಧಿಸಲಾಯಿತು.

ವಿಚಾರಣೆಯ ಸಮಯದಲ್ಲಿ ಖಂಭಾಲಾ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಇದು ಪೂರ್ವ ಯೋಜಿತ ಕೊಲೆ ಎಂದು ಹೇಳಿದ್ದಾನೆ. ಕೊಲೆಯ ನಂತರ ಅವನು ತನ್ನ ಹೆಂಡತಿಯ ಫೋನ್‌ನಿಂದ ತನಗೆ ಸಂದೇಶವನ್ನು ಕಳುಹಿಸಿಕೊಂಡಿದ್ದ, ಅವಳು ಬೇರೊಬ್ಬರೊಂದಿಗೆ ವಾಸಿಸಲು ಹೊರಟು ಹೋಗುತ್ತಿದ್ದಾಳೆ ಎಂದು ಅದರಲ್ಲಿ ಬರೆದಿದ್ದ. ನಂತರ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿದ್ದ. ಎಲ್ಲರನ್ನೂ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗದೆ ಎಂಬುದಾಗಿ ತಿಳಿಸಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 12:56 pm, Fri, 21 November 25