ಉದ್ದನೆಯ ಕೂದಲಿನಿಂದ ವಿಶ್ವಖ್ಯಾತಿ ಗಳಿಸಿ, ಗಿನ್ನಿಸ್​ ದಾಖಲೆ ನಿರ್ಮಿಸಿದ್ದ ಯುವತಿಯ ನ್ಯೂ ಲುಕ್​; ಕೂದಲು ಕತ್ತರಿಸಿ ಮ್ಯೂಸಿಯಂಗೆ ನೀಡಿದ ನೀಲಾಂಶಿ

|

Updated on: Apr 19, 2021 | 2:30 PM

ಇನ್ನು ಕೂದಲನ್ನು ಕತ್ತರಿಸುವುದಕ್ಕೂ ಮೊದಲು ನೀಲಾಂಶಿ ಅದಕ್ಕೆ ಮುತ್ತಿಕ್ಕಿ, ಗುಡ್​ಬೈ ಹೇಳಿದ್ದಾರೆ. ತಾನು ಸ್ವಲ್ಪ ನರ್ವಸ್ ಆಗಿದ್ದೆ. ಆದರೂ ನನ್ನ ಹೊಸ ಹೇರ್​ಸ್ಟೈಲ್​ ನೋಡಿ ತುಂಬ ಖುಷಿಯಾಗಿದ್ದೇನೆ.. ಎಕ್ಸೈಟ್ ಆಗಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.

ಉದ್ದನೆಯ ಕೂದಲಿನಿಂದ ವಿಶ್ವಖ್ಯಾತಿ ಗಳಿಸಿ, ಗಿನ್ನಿಸ್​ ದಾಖಲೆ ನಿರ್ಮಿಸಿದ್ದ ಯುವತಿಯ ನ್ಯೂ ಲುಕ್​; ಕೂದಲು ಕತ್ತರಿಸಿ ಮ್ಯೂಸಿಯಂಗೆ ನೀಡಿದ ನೀಲಾಂಶಿ
ಉದ್ದನೆಯ ಕೂದಲನ್ನು ಕತ್ತರಿಸಿದ ನೀಲಾಂಶಿ
Follow us on

ವಿಶ್ವದಲ್ಲಿ ಅತ್ಯಂತ ಉದ್ದ ತಲೆಕೂದಲನ್ನು ಹೊಂದಿದ ಯುವತಿ ಎಂಬ ಹೆಗ್ಗಳಿಕೆ ಪಾತ್ರಳಾಗಿ, ಗಿನ್ನೀಸ್​ ದಾಖಲೆ ನಿರ್ಮಿಸಿದ್ದ ಗುಜರಾತ್​ನ ಮೊಡಾಸಾದ ನೀಲಾಂಶಿ ಪಟೇಲ್​ ತಮ್ಮ ಕೂದಲನ್ನು ಕತ್ತರಿಸಿದ್ದಾರೆ. ನನ್ನ ಜೀವನವನ್ನೇ ಬದಲಿಸಿದ್ದ ಕೂದಲನ್ನು ಕತ್ತರಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ನೀಲಾಂಶಿ ಪಟೇಲ್​ ತಮ್ಮ ಉದ್ದನೆಯ ಕೂದಲಿನಿಂದಾಗಿ 2018ರಿಂದಲೂ ಗಿನ್ನೀಸ್​ ಬುಕ್​ನಲ್ಲಿ ದಾಖಲೆ ನಿರ್ಮಿಸುತ್ತಲೇ ಇದ್ದರು. 2018ರಲ್ಲಿ ಮೊದಲ ಬಾರಿಗೆ ಗಿನ್ನೀಸ್ ದಾಖಲೆ ಬರೆಯುವಾಗ ಅವರಿಗೆ 16 ವರ್ಷ ವಯಸ್ಸು. ಕೂದಲು 170.5ಸೆಂಟಿಮೀಟರ್​ (5ಅಡಿ 7 ಇಂಚು) ಇತ್ತು.

6ನೇ ವರ್ಷದಿಂದ ನೀಲಾಂಶಿ ಕೂದಲು ಕತ್ತರಿಸರಲಿಲ್ಲ. 12 ವರ್ಷದಿಂದ ಒಮ್ಮೆಯೂ ಕೂದಲಿಗೆ ಕತ್ತರಿ ಹಾಕದ ನೀಲಾಂಶಿ ಇದೀಗ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದಾರೆ. ಕಳೆದ ಜುಲೈನಲ್ಲಿ ಅವರು 18ನೇ ವಷದ ಹುಟ್ಟಿದ ಹಬ್ಬ ಆಚರಣೆ ಮಾಡಿಕೊಂಡಿದ್ದು ಅದಕ್ಕೂ ಮೊದಲು ಅವರ ಉದ್ದನೆಯ ಕೂದಲನ್ನು ಅಳೆಯಲಾಗಿತ್ತು. ಆಗ ಅದರ ಅಳತೆ 200 ಸೆಂಟಿಮೀಟರ್​ (6 ಅಡಿ 6.7 ಇಂಚು) ಆಗಿತ್ತು. ಈಕೆ ತನಗೆ ತನ್ನ ಕೂದಲು ಲಕ್ಕಿ ಚಾರ್ಮ್ ಎಂದೂ ಹೇಳಿಕೊಂಡಿದ್ದಳು.

ಹೊಸ ಲುಕ್​ನಲ್ಲಿ ನೀಲಾಂಶಿ

ದಶಕಗಳ ಕಾಲ ಕೂದಲನ್ನು ಬೆಳೆಸಿದ್ದ ನೀಲಾಂಶಿ ಅದನ್ನೀಗ ಕತ್ತರಿಸಿದ್ದಾರೆ. ಆದರೆ ಕತ್ತರಿಸಿದ ಬಳಿಕ ಆ ಕೂದಲನ್ನು ಏನು ಮಾಡಬೇಕು ಎಂಬ ಬಗ್ಗೆ ತನ್ನ ತಾಯಿ ಕಾಮಿನಿಬೆನ್​ ಜತೆ ಚರ್ಚಿಸಿದ್ದಾರೆ. ನೀಲಾಂಶಿಗೆ ತನ್ನ ಕೂದಲನ್ನು ಹರಾಜು ಹಾಕುವುದೋ, ದಾನ ಮಾಡುವುದೋ ಅಥವಾ ಮ್ಯೂಸಿಯಂಗೆ ಕಳಿಸಬೇಕೋ ಎಂಬುದರ ಬಗ್ಗೆ ಗೊಂದಲ ಇತ್ತು. ಇನ್ನು ನೀಲಾಂಶಿ ವಿಶ್ವದ ಗಮನ ಸೆಳೆದಿದ್ದು ಆಕೆಯ ಕೂದಲಿನಿಂದ, ಅಲ್ಲದೆ ವಿಶ್ವದಾಖಲೆ ಬರೆದಿದ್ದಾಳೆ. ಹಾಗಾಗಿ ಅವಳ ಕೂದಲನ್ನು ಮ್ಯೂಸಿಯಂಗೆ ನೀಡುವುದೇ ಸರಿ ಎಂದು ಕಾಮಿನಿಬೆನ್​ ಅಭಿಪ್ರಾಯ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ತಮ್ಮ ಉದ್ದನೆಯ ಕೂದಲನ್ನೂ ಸಹ ಕತ್ತರಿಸಿ ದಾನ ಮಾಡಿದ್ದಾರೆ. ಅಲ್ಲಿಗೆ ಮಗಳ ಕೂದಲು ಮ್ಯೂಸಿಯಂಗೆ ಹೋದರೆ, ತಾಯಿ ತನ್ನ ಕೂದಲನ್ನು ದಾನ ಮಾಡಿದ್ದಾರೆ.

ನೀಲಾಂಶಿ ಹಾಗೂ ಆಕೆಯ ತಾಯಿ ಕಾಮಿನಿ ಬೆನ್​

ಇನ್ನು ಕೂದಲನ್ನು ಕತ್ತರಿಸುವುದಕ್ಕೂ ಮೊದಲು ನೀಲಾಂಶಿ ಅದಕ್ಕೆ ಮುತ್ತಿಕ್ಕಿ, ಗುಡ್​ಬೈ ಹೇಳಿದ್ದಾರೆ. ತಾನು ಸ್ವಲ್ಪ ನರ್ವಸ್ ಆಗಿದ್ದೆ. ಆದರೂ ನನ್ನ ಹೊಸ ಹೇರ್​ಸ್ಟೈಲ್​ ನೋಡಿ ತುಂಬ ಖುಷಿಯಾಗಿದ್ದೇನೆ.. ಎಕ್ಸೈಟ್ ಆಗಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ. ನನ್ನ ಗುರುತೇ ತಲೆಕೂದಲಾಗಿತ್ತು. ಅದನ್ನು ಕಳೆದುಕೊಳ್ಳುತ್ತಿರುವುದು ಭಾವನಾತ್ಮಕವಾದ ವಿಚಾರವೆಂದಿದ್ದಾರೆ. ಇನ್ನು ಕೂದಲನ್ನು ಪೂರ್ತಿಯಾಗಿ ಕತ್ತರಿಸಿದ ಮೇಲೆ ನೀಲಾಂಶಿಯವರ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಹಾಗೇ ಕರೆದುಕೊಂಡು ಹೋಗಿ ಕನ್ನಡಿಯ ಎದುರು ನಿಲ್ಲಿಸಲಾಯಿತು. ಅದಾದ ಮೇಲೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡ ನೀಲಾಂಶಿ ಖುಷಿಯಲ್ಲಿ ಕುಣಿದಾಡಿದ್ದಾರೆ. ಓ ಮೈ ಗಾಡ್​.. ಇಟ್ ಈಸ್ ಬ್ಯೂಟಿಫುಲ್​.. ನಾನೊಬ್ಬಳು ಪುಟ್ಟ ರಾಜಕುಮಾರಿಯಂತೆ ಕಾಣಿಸುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ. ಇನ್ನು ಮಗಳ ಕೂದಲಿನ ಆರೈಕೆ ಮಾಡಿದ್ದ ತಾಯಿ ಕಾಮಿನಿಬೆನ್​ ಕೂಡ ಮಗಳ ಹೊಸ ಸ್ಟೈಲ್ ನೋಡಿ ಖುಷಿಪಟ್ಟಿದ್ದಾರೆ. ಆದರೂ ಆಕೆಯ ಕೂದಲನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ನೀಲಾಂಶಿ ಕೂದಲನ್ನು ಕತ್ತರಿಸುತ್ತಿರುವ ದೃಶ್ಯ