ಬಾಯಿ ಒಣಗುತ್ತಿದೆಯಾ? ಯಾವುದಕ್ಕೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ; ಹೊಸ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ ಡೆಡ್ಲಿ ವೈರಸ್​

ಬಾಯಿ ಒಣಗುತ್ತಿದೆಯಾ? ಯಾವುದಕ್ಕೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ; ಹೊಸ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ ಡೆಡ್ಲಿ ವೈರಸ್​
ಗೌರಿ ಅಗರ್ವಾಲ್

ಕೊವಿಡ್ ಲಕ್ಷಣಗಳಲ್ಲಿ ಒಣ ಬಾಯಿ, ಜಠರಗರುಳಿನ ಸಮಸ್ಯೆ, ವಾಕರಿಕೆ, ಕೆಂಪು ಕಣ್ಣುಗಳು ಮತ್ತು ತಲೆನೋವಿನ ಸಮಸ್ಯೆಗಳು ಹೆಚ್ಚು ಕಂಡು ಬರುತ್ತಿದೆ.

shruti hegde

| Edited By: Apurva Kumar Balegere

Apr 19, 2021 | 1:38 PM

ದೆಹಲಿ: ದಿನ ಸಾಗುತ್ತಿದ್ದಂತೆಯೇ ಕೊವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರೂಪಾಂತರಿ ಕೊರೊನಾ ಹರಡುವಿಕೆಯಿಂದ ಈ ವರ್ಷದ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಹದಗೆಟ್ಟಿದೆ. ಹಿರಿಯ ನಾಗರಿಕರಿಗಿಂತ ಯುವ ಜನಾಂಗದಲ್ಲಿ ಕೊರೊನಾ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಜ್ವರವೊಂದೇ ಅಲ್ಲದೇ ಕಣ್ಣು ಕೆಂಪಾಗುವುದು, ಬಾಯಿ ಒಣಗುವುದು, ಜಠರದ ಸಮಸ್ಯೆಗಳಂತಹ ಹೊಸ ಲಕ್ಷಣಗಳು ಯುವ ಜನಾಂಗಗಳಲ್ಲಿ ಕಂಡು ಬರುತ್ತಿದೆ.

ಜೆನೆಸ್ಟ್ರಿಂಗ್ಸ್ ಡೈನಾಸ್ಟಿಕ್ ಸೆಂಟರ್​ನ ಮುಖ್ಯಸ್ಥೆ ಗೌರಿ ಅಗರ್ವಾಲ್ ಅವರ ಪ್ರಕಾರ, ವಯಸ್ಸಾದವರಿಗೆ ಹೋಲಿಸಿದರೆ ಬಹಳಷ್ಟು ಯುವ ಜನಾಂಗಗಳು ಕೊವಿಡ್​ ಸೋಂಕು ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ರೋಗ ಹೊಸ ಲಕ್ಷಣಗಳೊಂದಿಗೆ ಕಂಡು ಬರುತ್ತಿದೆ. ಹಲವಾರು ಒಣ ಬಾಯಿ, ಜಠರಗರುಳಿನ ಸಮಸ್ಯೆ, ವಾಕರಿಕೆ, ಕೆಂಪು ಕಣ್ಣುಗಳು ಮತ್ತು ತಲೆನೋವಿನ ಸಮಸ್ಯೆಯನ್ನು ವೈದ್ಯರಲ್ಲಿ ತೋಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಜ್ವರದ ಕುರಿತಾಗಿಯಷ್ಟೇ ದೂರು ನೀಡುತ್ತಿಲ್ಲ ಎಂದು ಅವರು ಮಾಹಿತಿ ತಿಳಿಸಿದ್ದಾರೆ.

ಪ್ರಕರಣಗಳ ಏರಿಕೆಗೆ ಪ್ರಾಥಮಿಕ ಕಾರಣವೆಂದರೆ ಕೊವಿಡ್ ಪ್ರೋಟೋಕಾಲ್‌ಗಳ ಅತಿರೇಕದ ಉಲ್ಲಂಘನೆ. ಕಳೆದ ವರ್ಷದ ಕೊನೆಯಿಂದ ನಾವು ಗಮನಿಸಿದರೆ ಕೊವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಬಗ್ಗೆ ಜನರು ಅಸಡ್ಡೆ ತೋರಿಸುತ್ತಿದ್ದಾರೆ. ಅದರಿಂದ ಸೋಂಕು ಹೆಚ್ಚಳ ಪ್ರಕರಣಗಳಲ್ಲಿ ಏರಿಕೆಯಲ್ಲಿ ಆಶ್ಚರ್ಯವೇನಿಲ್ಲ ಎಂದು ಗೌರಿ ಅಗರ್ವಾಲ್ ಅವರು ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಗೆ ಕಾರಣವಾಗಬಹುದಾದ ಅಂಶಗಳ ಬಗ್ಗೆ ಮಾತನಾಡಿದ್ದಾರೆ.

ಕೊರೊನಾ ಸಕ್ರಿಯ ಪ್ರಕರಣಗಳನ್ನು ಕಂಡು ಹಿಡಿಯಲು ಮತ್ತು ಆರೋಗ್ಯವಂತ ಜನರಿಂದ ಕೊವಿಡ್​ ದೂರವಿರುವಂತೆ ನೋಡಿಕೊಳ್ಳಲು ದೇಶವು, ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ವೇಗವಾಗಿ ಹೆಚ್ಚಿಸಬೇಕಾಗಿದೆ. ಮೈಕ್ರೊ ಕಂಟೈನ್‌ಮೆಂಟ್ ವಲಯಗಳನ್ನು, ಜೊತೆಗೆ ಕೊವಿಡ್ ಪರೀಕ್ಷೆಯನ್ನು ಹೆಚ್ಚಿಸುವ ಪ್ರಧಾನ ಮಂತ್ರಿಯವರ ಸಲಹೆಯು ಕೊವಿಡ್​ ನಿಯಂತ್ರಣಕ್ಕೆ ಸಹಾಯಕಾರಿಯಾಗುತ್ತದೆ. ಹೆಚ್ಚಿನ ಜನರಿಗೆ ವ್ಯಾಕ್ಸಿನೇಷನ್ ನೀಡಬೇಕು ಮತ್ತು ಲಸಿಕೆಗಳ ಕೊರತೆಯಿದ್ದರೆ ಸರ್ಕಾರವು ತುರ್ತಾಗಿ ಪರಿಹಾರ ಒದಗಿಸಬೇಕು ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಪ್ರತಿ ನಿತ್ಯ ಹೊಸ ದಾಖಲೆಗಳ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಸಚಿವಾಲಯ ತಿಳಿಸಿದಂತೆಯೇ ಕಳೆದ 24 ಗಂಟೆಗಳಲ್ಲಿ 2,61,500 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿವೆ. ಹಾಗೂ ಕಳೆದ 24 ಗಂಟೆಗಳಲ್ಲಿ 1,38,423 ಡಿಸ್ಚಾರ್ಜ್ ಮತ್ತು 1,501 ಸಾವುಗಳು ಸಂಭವಿಸಿವೆ.

ಇದನ್ನೂ ಓದಿ: ನಾಳೆಯೇ ಹೊಸ ಕೊವಿಡ್ ರೂಲ್ಸ್ ಜಾರಿಯಾಗುತ್ತದೆ- ಆರೋಗ್ಯ ಸಚಿವ ಸುಧಾಕರ್; ಕಲಬುರಗಿ ಜನತೆಯಲ್ಲೂ ಢವಢವ

ಚಾಮರಾಜನಗರ ಜಿಲ್ಲಾಡಳಿತದಿಂದ ಕೊವಿಡ್ ತಡೆಗೆ ವಿನೂತನ ಪ್ರಯೋಗ; ಕೊರೊನಾ ಸುರಕ್ಷಾ ಪಡೆಗೆ ಚಾಲನೆ

Follow us on

Related Stories

Most Read Stories

Click on your DTH Provider to Add TV9 Kannada