ಚಾಮರಾಜನಗರ ಜಿಲ್ಲಾಡಳಿತದಿಂದ ಕೊವಿಡ್ ತಡೆಗೆ ವಿನೂತನ ಪ್ರಯೋಗ; ಕೊರೊನಾ ಸುರಕ್ಷಾ ಪಡೆಗೆ ಚಾಲನೆ

ಕೆಂಪು ಬಣ್ಣದ ಶರ್ಟ್ ಮತ್ತು ಟೋಪಿ ಧರಿಸುವ ಸುರಕ್ಷಾ ಪಡೆ ಸಿಬ್ಬಂದಿ ನಗರದ ಪ್ರಮುಖ ಸರ್ಕಲ್​ಗಳಲ್ಲಿ ನಿಂತು ಮೈಕ್ ಮೂಲಕ ಹೇಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಈ ಸುರಕ್ಷಾ ಪಡೆಗೆ ಚಾಲನೆ ನೀಡಿದರು.

ಚಾಮರಾಜನಗರ ಜಿಲ್ಲಾಡಳಿತದಿಂದ ಕೊವಿಡ್ ತಡೆಗೆ ವಿನೂತನ ಪ್ರಯೋಗ; ಕೊರೊನಾ ಸುರಕ್ಷಾ ಪಡೆಗೆ ಚಾಲನೆ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಸುರಕ್ಷಾ ಪಡೆಗೆ ಚಾಲನೆ ನೀಡಿದರು
Follow us
preethi shettigar
| Updated By: Digi Tech Desk

Updated on:Apr 19, 2021 | 1:00 PM

ಚಾಮರಾಜನಗರ: ಕೊರೊನಾ ಎರಡನೇ ಅಲೆ ಶುರುವಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾರಂಭಿಸಿದೆ. ರಾಜ್ಯದಲ್ಲಿಯೇ ಮೊದಲನೇ ಬಾರಿಗೆ ಕೊರೊನಾ ಸುರಕ್ಷಾ ಪಡೆ ರಚಿಸಿದೆ. ಜಿಲ್ಲೆಯಾದ್ಯಂತ 20 ಪಡೆಗಳ ರಚನೆ ಮಾಡಲಾಗಿದ್ದು, ಕೊರೊನಾ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದೆ. ಪ್ರತಿ ಅಂಗಡಿ ಮುಂಗಟ್ಟುಗಳಿಗೂ ಹೋಗಿ ಮಾಸ್ಕ್ ಮಹತ್ವ ಮತ್ತು ದಂಡ ವಿಧಿಸುವ ಕಾರ್ಯವನ್ನ ಕೊರೊನಾ ಸುರಕ್ಷಾ ಪಡೆ ಮಾಡಲಿದೆ.

ಕೊವಿಡ್ ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವುದು ಮತ್ತು ಕೊವಿಡ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಚಾಮರಾಜನಗರ ಜಿಲ್ಲಾಡಳಿತ ನೂತನ ಕ್ರಮಕ್ಕೆ ಮುಂದಾಗಿದೆ. ಚಾಮರಾಜನಗರ ಜಿಲ್ಲೆಯಾದ್ಯಂತ ಇರುವ ಐದು ಸ್ಥಳೀಯ ಸಂಸ್ಥೆಗಳಲ್ಲೂ  ಕೊರೊನಾ ಸುರಕ್ಷಾ ಪಡೆ ರಚಿಸಲಾಗಿದೆ. ಪ್ರತಿಯೊಂದು ಸುರಕ್ಷಾ ಪಡೆಯಲ್ಲೂ ನಾಲ್ಕರಿಂದ ಐದು ಸ್ಕೌಟ್ಸ್ ಆ್ಯಂಡ್ ಗೈಡ್ಸ್​ನ ಸದಸ್ಯರು ಇರಲಿದ್ದಾರೆ. ಇವರ ಜೊತೆ ಓರ್ವ ಪೊಲೀಸ್ ಅಧಿಕಾರಿ, ನಗರಸಭೆಯ ಆರೋಗ್ಯ ಅಧಿಕಾರಿಗಳು ಇರಲಿದ್ದಾರೆ.

ಕೆಂಪು ಬಣ್ಣದ ಶರ್ಟ್ ಮತ್ತು ಟೋಪಿ ಧರಿಸುವ ಸುರಕ್ಷಾ ಪಡೆ ಸಿಬ್ಬಂದಿ ನಗರದ ಪ್ರಮುಖ ಸರ್ಕಲ್​ಗಳಲ್ಲಿ ನಿಂತು ಮೈಕ್ ಮೂಲಕ ಹೇಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಈ ಸುರಕ್ಷಾ ಪಡೆಗೆ ಚಾಲನೆ ನೀಡಿದರು. ಈ ವೇಳೆ ಮಾಸ್ಕ್ ಧರಿಸದೇ ವಾಹನ ಸವಾರಿ ಮಾಡುತ್ತಿದ್ದವರನ್ನು ತಡೆದು ದಂಡ ವಿಧಿಸಲಾಯಿತು. ಇನ್ನು ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಹಾಕದೇ ಇರುವವರ ವಿರುದ್ಧ ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿಯೇ ದಂಡ ವಿಧಿಸಲಾಯಿತು.

ಪಟ್ಟಣದ ಕೆಲವೆಡೆ ಅಂತರ ಕಾಯ್ದುಕೊಳ್ಳದ ಹಾಗೂ ಮಾಸ್ಕ್ ಧರಿಸದೇ ಬಂದ ಗ್ರಾಹಕರಿಗೆ ವ್ಯಾಪಾರ ಖರೀದಿಗೆ ಅವಕಾಶ ನೀಡಿದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಅಂಗಡಿ ಮುಚ್ಚಲು ಆದೇಶಿಸಿದರು. ಕೊವಿಡ್ ಶಿಷ್ಟಾಚಾರ ಉಲ್ಲಂಘಿಸಿದ ಕೆಲವು ಅಂಗಡಿಗಳನ್ನು ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಮುಚ್ಚಿಸಲಾಯಿತು. ಅಂಗಡಿ ಮಾಲೀಕರು, ರಸ್ತೆ ಬದಿ ವ್ಯಾಪಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಮ್ಮ ಅಂಗಡಿ ಮುಂಗಟ್ಟು, ವ್ಯಾಪಾರ ಸ್ಥಳದಲ್ಲಿ ಮಾಸ್ಕ್ ಧರಿಸುವ ಬಗ್ಗೆ ಫಲಕಗಳನ್ನು ಹಾಕಬೇಕು. ಮಾಸ್ಕ್ ಹಾಕದೇ ಅಂಗಡಿಗಳಿಗೆ ಬರುವವರಿಗೆ ವ್ಯಾಪಾರ, ಖರೀದಿಗೆ ಅವಕಾಶ ನೀಡಬಾರದೆಂದು ತಿಳಿಸಿದರು.

ಕೊವಿಡ್ ಆರಂಭ ಆದಾಗಿಂದ ಇದೇ ಮೊದಲ ಬಾರಿಗೆ ಶನಿವಾರ 130 ಕೊರೊನಾ ಪ್ರಕರಣ ಒಂದೇ ದಿನ ದಾಖಲಾಗಿರುವುದು ಜಿಲ್ಲಾಡಳಿತಕ್ಕೆ ಆತಂಕ ಉಂಟು ಮಾಡಿದೆ. ಜನರಲ್ಲಿ ಎಷ್ಟೇ ಅರಿವು ಮೂಡಿಸಿದರೂ ಎಚ್ಚೆತ್ತು ಕೊಳ್ಳದೆ, ಕೊರೊನಾ ಕೈ ಮೀರುತ್ತಿರುವುದನ್ನ ಅರಿತ ಪೊಲೀಸ್ ಇಲಾಖೆ ಕೂಡ ದಂಡ ಹಾಕಲು ಮುಂದಾಗಿದೆ.‌ ಇನ್ನು ಮುಂದೆ ಅಂಗಡಿ ಮುಂಗಟ್ಟು, ಕಲ್ಯಾಣ ಮಂಟಪ, ಸಾರ್ವಜನಿಕ ಸ್ಥಳಗಳಿಗೆ ಸುರಕ್ಷಾ ಪಡೆ ಭೇಟಿ ನೀಡಲಿದೆ.

ಈ ವೇಳೆ ಮಾಸ್ಕ್ ಧರಿಸದ ಯುವಕ ತಂಡ ಹಿಡಿದು ತರಲಿದ್ದು, ನಗರಸಭೆ ಆರೋಗ್ಯಾಧಿಕಾರಿ 100 ರುಪಾಯಿ ದಂಡ ಹಾಕಲಿದ್ದಾರೆ.‌ ಇನ್ನೂ ಯುವಕರಿಗೆ ಈಗಾಗಲೇ ಐದು ದಿನಗಳ ಕಾಲ ತರಭೇತಿ ನೀಡಲಾಗಿದ್ದು, ಪೊಲೀಸರು ಇಡೀ ಸುರಕ್ಷಾ ಪಡೆಗೆ ಬೆಂಗಾವಲಾಗಿ ಇರಲಿದ್ದಾರೆ ಎಂದು ಎಸ್​ಪಿ ದಿವ್ಯ ಥಾಮಸ್ ಹೇಳಿದ್ದಾರೆ.

ಒಟ್ಟಿನಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಹೆಮ್ಮಾರಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಅಧಿಕಾರಿಗಳ ಶ್ರಮಕ್ಕೆ ಸಾರ್ವಜನಿಕರು, ವರ್ತಕರು ಕೈ ಜೋಡಿಸಿದರೆ ಆದಷ್ಟು ಬೇಗ ಕೊರೊನಾ ಹೆಮ್ಮಾರಿಯನ್ನ ಓಡಿಸಬಹುದಾಗಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಕೊರೊನಾ ಕರ್ಫ್ಯೂ; ಗಣಿನಾಡಿನಲ್ಲಿ ನಿಯಂತ್ರಣಕ್ಕೆ ಬಾರದ ಕೊವಿಡ್ 19

Covid-19 Karnataka Update: ಕರ್ನಾಟಕದಲ್ಲಿ ಇಂದು 19,067 ಜನರಿಗೆ ಕೊರೊನಾ ದೃಢ, 81 ಸಾವು

(Chamarajanagar district administration Corona Safety Force has started new methods to control covid)

Published On - 12:34 pm, Mon, 19 April 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ