ನಾಳೆಯೇ ಹೊಸ ಕೊವಿಡ್ ರೂಲ್ಸ್ ಜಾರಿಯಾಗುತ್ತದೆ- ಆರೋಗ್ಯ ಸಚಿವ ಸುಧಾಕರ್; ಕಲಬುರಗಿ ಜನತೆಯಲ್ಲೂ ಢವಢವ

ಲಾಕ್ ಡೌನ್ ಬಗ್ಗೆ ಬಹಳ ಪ್ರಚಾರ ಆಗ್ತಿದೆ. ಆದರೆ ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಬಿಗಿಯಾದ ಕ್ರಮಗಳು ಆಗಬೇಕು. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕ್ರಮ‌ ತೆಗೆದುಕೊಳ್ಳಬೇಕಿದೆ. ಕೆಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕಾಗುತ್ತೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ನಾಳೆಯೇ ಹೊಸ ಕೊವಿಡ್ ರೂಲ್ಸ್ ಜಾರಿಯಾಗುತ್ತದೆ- ಆರೋಗ್ಯ ಸಚಿವ ಸುಧಾಕರ್; ಕಲಬುರಗಿ ಜನತೆಯಲ್ಲೂ ಢವಢವ
ಡಾ.ಕೆ.ಸುಧಾಕರ್ (ಸಂಗ್ರಹ ಚಿತ್ರ)
Follow us
ಸಾಧು ಶ್ರೀನಾಥ್​
|

Updated on:Apr 19, 2021 | 11:33 AM

ಬೆಂಗಳೂರು: ಕೊರೊನಾ ಕ್ರಿಮಿಯ ಅಟ್ಟಹಾಸದ ಎದುರು ಜನ ಮತ್ತು ಸರ್ಕಾರ ಬಸವಳಿದಂತೆ ಕಂಡುಬರುತ್ತಿದೆ. ಕ್ಷಿಪ್ರ ಕ್ರಮಗಳ ಜರೂರತ್ತು ಅತ್ಯಗತ್ಯವಾಗಿದೆ. ಏನಾದರೂ ಮಾಡಿ ಜನರನ್ನ ಕಾಪಾಡುವ ಹೊಣೆಗಾರಿಕೆ ಆಡಳಿತಾರೂಢ ಸರ್ಕಾರದ ಮೇಲಿದೆ. ಹಾಗಾಗಿಯೇ, ಕಳೆದ ವಾರದಲ್ಲಿ ಇದ್ದಕ್ಕಿದ್ದಂತೆ ಪರಿವರ್ತಿತವಾಗಿರುವ ಕೊರೊನಾ ಅಟ್ಟಹಾಸವನ್ನು ಮಟ್ಟಹಾಕಲು ಸರ್ಕಾರವೂ ಈ ವಾರದಲ್ಲಿ ಅನೇಕ ಖಡಕ್ ಕ್ರಮಗಳನ್ನು ಕೈಗೊಳ್ಳುವ ಮುನ್ಸೂಚನೆ ನೀಡುತ್ತಿದೆ. ಮತ್ತು ಆ ಹೊಸ ಕೊವಿಡ್ ರೂಲ್ಸ್ ನಾಳೆಯಿಂದಲೇ ಜಾರಿಗೆ ಬರುತ್ತವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಡ್, ಐಸಿಯು ಕೊರತೆ ಉಂಟಾಗುತ್ತೆ. ಬೆಡ್‌ಗಳು ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕಿದೆ ಎಂಬುದನ್ನು ಒಪ್ಪಿಕೊಂಡ ಆರೋಗ್ಯ ಸಚಿವ ಸುಧಾಕರ್ ಪರಿಸ್ಥಿತಿಯನ್ನು ನಿಭಾಯಿಸಲು ಉನ್ನತಮಟ್ಟದ ಸಭೆ ಇಂದು ನಡೆಯಲಿದೆ. ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರೂ ಕೂಡ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸ್ತಾರೆ. ಸರ್ವಪಕ್ಷ ಸಭೆಗಳ ನಾಯಕರ ಜೊತೆಯೂ ಚರ್ಚೆ ಮಾಡ್ತಾರೆ. ಇವತ್ತೇ ಬೆಂಗಳೂರಿಗೆ ಸಂಬಂಧಪಟ್ಟಂತೆ ರೂಲ್ಸ್ ಆಗಬಹುದು. ಇಲ್ಲ ನಾಳೆ ಸರ್ವಪಕ್ಷ ನಾಯಕರ ಜೊತೆ ಚರ್ಚೆ ಮಾಡಿ ನಾಳೆಯೇ ರೂಲ್ಸ್ ಬರಬಹುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೂಕ್ಷ್ಮವಾಗಿ ತಿಳಿಸಿದ್ದಾರೆ.

ಇನ್ನು, ಲಾಕ್ ಡೌನ್ ಬಗ್ಗೆ ಬಹಳ ಪ್ರಚಾರ ಆಗ್ತಿದೆ. ಆದರೆ ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಬಿಗಿಯಾದ ಕ್ರಮಗಳು ಆಗಬೇಕು. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕ್ರಮ‌ ತೆಗೆದುಕೊಳ್ಳಬೇಕಿದೆ. ಕೆಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕಾಗುತ್ತೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಬೆಂಗಳೂರು ಸಭೆ ಮೇಲೆ ಕಲಬುರಗಿ ಜಿಲ್ಲೆಯ ಜನರ ಚಿತ್ತ ಕಲಬುರಗಿ: ಬೆಂಗಳೂರು ಲಾಕ್​ಡೌನ್ ಆದ್ರೆ ಕಲಬುರಗಿಯಲ್ಲೂ ಅದೇ ನಿಯಂತ್ರಣ ಕ್ರಮಗಳು ಜಾರಿಯಾಗುವುದು ಬಹುತೇಕ ಪಕ್ಕ. ಏಕೆಂದರೆ ಬೆಂಗಳೂರು ಬಿಟ್ಟರೆ ಹೆಚ್ಚು ಕೇಸ್​ ಕಲಬುರಗಿಯಲ್ಲಿ ಪತ್ತೆಯಾಗಿವೆ. ಪ್ರತಿದಿನ 500-600 ಕೊರೊನಾ ಕೇಸ್​ ಪತ್ತೆಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ, ಬೆಂಗಳೂರು ಸಭೆ ಮೇಲೆ ಕಲಬುರಗಿ ಜಿಲ್ಲೆಯ ಜನರ ಕಣ್ಣು ನೆಟ್ಟಿದೆ. ಬೆಂಗಳೂರು ಲಾಕ್ ಡೌನ್ ಆದ್ರೆ ಕಲಬುರಗಿಯಲ್ಲಿ ಕೂಡಾ ಲಾಕ್ ಡೌನ್ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರು ಸಭೆಯಲ್ಲಿ ಯಾವ ತೀರ್ಮಾನ ಆಗುತ್ತೆ ಅಂತ ಕಾಯುತ್ತಿರೋ ಅಧಿಕಾರಿಗಳು ಮತ್ತು ಜನರು ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಟಫ್​ ರೂಲ್ಸ್ ಅವಶ್ಯಕತೆ. ಈಗಾಗಲೇ ಬೆಡ್ ಗಳು ಪುಲ್ ಆಗಿವೆ. ಸೋಂಕು ಹೀಗೆಯೇ ಹೆಚ್ಚಾದ್ರೆ, ಬೆಡ್ ಸಿಗದೇ ಜನರು ಸಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಟಫ್​ ರೂಲ್ಸ್ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರು ನಿರ್ಧಾರ ನಂತರ ಈ ಬಗ್ಗೆ ಚರ್ಚೆ ನಡೆಸಲು ಜಿಲ್ಲಾ ಉನ್ನತಾಧಿಗಳು ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸೋಂಕಿತರಿಗೆ ಸಿಗ್ತಿಲ್ಲ ಬೆಡ್​ಗಳು.. ಬಿಬಿಎಂಪಿ ವೆಬ್‌ಸೈಟ್‌ನಲ್ಲೇ ಐಸಿಯು ಬೆಡ್‌ಗಳು ಫುಲ್

(coronavirus aggravates bengaluru to get new containment rules but no lock down health mnister dr k sudhakar)

Published On - 11:04 am, Mon, 19 April 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ