ವಾಟ್ಸ್​​ಆ್ಯಪ್​ ಪಿಂಕ್​​ ಲಿಂಕ್​ ನಿಮ್ಮ ಮೊಬೈಲ್​ಗೂ ಬರಬಹುದು ಎಚ್ಚರ..; ಹಾಗೊಮ್ಮೆ ಲಿಂಕ್​ ಬಂದರೆ ನೀವೇನು ಮಾಡ್ಬೇಕು?

ಫೋನ್​ಗಳನ್ನು ಹ್ಯಾಕ್​ ಮಾಡಲು ಇಂಥ ಲಿಂಕ್​ಗಳನ್ನು ಕಳಿಸಿ ಗಿಮಿಕ್ ಮಾಡುವುದು ಹಳೇ ವಿಧಾನ. ಇದೀಗ ಪಿಂಕ್​ ವಾಟ್ಸ್​ ಆ್ಯಪ್​ ಎಂಬ ಹೊಸ ರೂಪದೊಂದಿಗೆ ಮತ್ತೆ ಸದ್ದುಮಾಡುತ್ತಿದೆ.

ವಾಟ್ಸ್​​ಆ್ಯಪ್​ ಪಿಂಕ್​​ ಲಿಂಕ್​ ನಿಮ್ಮ ಮೊಬೈಲ್​ಗೂ ಬರಬಹುದು ಎಚ್ಚರ..; ಹಾಗೊಮ್ಮೆ  ಲಿಂಕ್​ ಬಂದರೆ ನೀವೇನು ಮಾಡ್ಬೇಕು?
ವಾಟ್ಸ್​ಆ್ಯಪ್ ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Apr 19, 2021 | 12:31 PM

ಕಳೆದ ಎರಡು-ಮೂರು ದಿನಗಳಿಂದ ಪಿಂಕ್​ ವಾಟ್ಸ್​ಆ್ಯಪ್​ ಎಂಬ ಶಬ್ದ ಪದೇಪದೆ ಕಿವಿಗೆ ಬೀಳುತ್ತಲೇ ಇದೆ. ವಾಟ್ಸ್​ಆ್ಯಪ್ ಬಳಕೆದಾರರಿಗೆ ಲಿಂಕ್​ವೊಂದು ಬರುತ್ತಿದ್ದು, ಅದನ್ನು ಕ್ಲಿಕ್ ಮಾಡಿದವರ ಫೋನ್​ಗೆ ವೈರಸ್ ಅಟ್ಯಾಕ್ ಆಗಿ, ಹ್ಯಾಕ್ ಆಗುತ್ತಿದೆ…! ಇದು ವಾಟ್ಸ್​ಆ್ಯಪ್​ನ ಹೊಸ ವರ್ಶನ್​. ಪಿಂಕ್​ ಟ್ರೇಡ್​ಮಾರ್ಕ್ ಹೊಂದಿದೆ. ಇದರಲ್ಲೂ ಸಹ ಮೆಸೇಜ್​, ಚಾಟ್​ ಮಾಡಬಹುದು. ಇನ್ನು ಪಿಂಕ್ ವಾಟ್ಸ್​ಆ್ಯಪ್​ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿವೆ ಎಂಬ ಸಂದೇಶಗಳೊಂದಿಗೆ ಲಿಂಕ್​ವೊಂದು ವಾಟ್ಸ್​ಆ್ಯಪ್​ಗೆ ಬರುತ್ತಿದೆ. ಇದು ಹೆಚ್ಚಾಗಿ ಗ್ರೂಪ್​ಗಳಲ್ಲಿ ಬರುತ್ತಿದ್ದು, ಸಹಜವೆಂಬಂತೇ ಜನರು ಕ್ಲಿಕ್​ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ.

ಫೋನ್​ಗಳನ್ನು ಹ್ಯಾಕ್​ ಮಾಡಲು ಇಂಥ ಲಿಂಕ್​ಗಳನ್ನು ಕಳಿಸಿ ಗಿಮಿಕ್ ಮಾಡುವುದು ಹಳೇ ವಿಧಾನ. ಇದೀಗ ಪಿಂಕ್​ ವಾಟ್ಸ್​ ಆ್ಯಪ್​ ಎಂಬ ಹೊಸ ರೂಪದೊಂದಿಗೆ ಮತ್ತೆ ಸದ್ದುಮಾಡುತ್ತಿದೆ. ಈ ಲಿಂಕ್ ನಿಮ್ಮ ವಾಟ್ಸ್​ಆ್ಯಪ್​ಗೂ ಬರಬಹುದು. ಹಾಗೊಮ್ಮೆ ಬಂದರೆ ತುಂಬ ಆತಂಕ ಪಡುವ ಅಗತ್ಯವಿಲ್ಲ. ಕ್ಲಿಕ್ ಕೂಡ ಮಾಡಬೇಡಿ. ಆ ಲಿಂಕ್​ನಿಂದ ದೂರವೇ ಇರಿ ಎಂದು ಸೈಬರ್ ಭದ್ರತಾ ವಿಶ್ಲೇಷಕರು ಹೇಳಿದ್ದಾರೆ.

ಅಂತರ್ಜಾಲ ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು, ವಾಟ್ಸ್​ಆ್ಯಪ್​ ಪಿಂಕ್ ಬಗ್ಗೆ ಎಚ್ಚರಿಕೆಯಿಂದ ಇರಿ. ಪಿಂಕ್ ವಾಟ್ಸ್​ಆ್ಯಪ್​ ಹೆಸರಲ್ಲಿ ವೈರಸ್ ಹರಿದಾಡುತ್ತಿದೆ. ಈ ಲಿಂಕ್​ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್​ನಲ್ಲಿರುವ ಎಲ್ಲವನ್ನೂ ಕಳೆದುಕೊಳ್ಳುತ್ತೀರಿ. ಹ್ಯಾಕ್​ ಆಗುತ್ತದೆ ಎಂದಿದ್ದಾರೆ.

ಪಿಂಕ್​ ವಾಟ್ಸ್​ಆ್ಯಪ್​ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಒಂದು ಎಪಿಕೆ ಆ್ಯಪ್​ ಡೌನ್​ಲೋಡ್ ಆಗಿ, ನಮ್ಮ ಇಡೀ ಮೊಬೈಲ್ ಹ್ಯಾಕ್ ಆಗುತ್ತದೆ. ಹಾಗಾಗಿ ಅಧಿಕೃತ ಆ್ಯಪ್​ ಸ್ಟೋರ್ ಆಗಿರುವ ಗೂಗಲ್​ ಅಥವಾ ಆ್ಯಪಲ್​ ಆ್ಯಪ್​ಸ್ಟೋರ್​ಗಳಲ್ಲಿ ಇರುವ ಆ್ಯಪ್​ಗಳನ್ನು ಮಾತ್ರ ಡೌನ್​ಲೋಡ್ ಮಾಡಿಕೊಳ್ಳಬೇಕು. ಉಳಿದಂತೆ ಯಾವುದೇ ಲಿಂಕ್ ಮೂಲಕ ಹೋಗಿ ಆ್ಯಪ್​ಗಳನ್ನು ಡೌನ್​​ಲೋಡ್ ಮಾಡಿಕೊಳ್ಳಬಾರದು ಎಂದು ಟೆಕ್​ ತಜ್ಞರು ಹೇಳಿದ್ದಾರೆ. ಫೋನ್​ನಲ್ಲಿರುವ ವೈಯಕ್ತಿಕ ಡಾಟಾ ಕದಿಯಲು ಇಂಥ ಲಿಂಕ್​ಗಳನ್ನು ಬಳಕೆ ಮಾಡಲಾಗುತ್ತದೆ. ಬ್ಯಾಂಕಿಂಗ್​​ ವ್ಯವಹಾರಕ್ಕೆ ಸಂಬಂಧಪಟ್ಟ ಪಾಸ್​ವರ್ಡ್​ಗಳೂ ಹ್ಯಾಕರ್​ಗಳ ಪಾಲಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ವಾಟ್ಸ್​ಆ್ಯಪ್​ ಪಿಂಕ್ ಅಥವಾ ವಾಟ್ಸ್ಆ್ಯಪ್ ಗೋಲ್ಡ್​ ಕೂಡ ಹ್ಯಾಕರ್​ಗಳ ಇನ್ನೊಂದು ಗಿಮಿಕ್​ ಆಗಿದ್ದು, ಫೇಕ್ ಫೀಚರ್​ ಆಗಿದೆ. ಈ ಲಿಂಕ್ ಬಂದರೆ ಇಗ್ನೋರ್ ಮಾಡಿ. ಡಿಲೀಟ್​ ಮಾಡಿಬಿಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ತೀವ್ರ ಹಲ್ಲೆಗೊಳಗಾದ ಸರಗಳ್ಳ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ಮಾಡಲ್ಲ, ಇತರ ಜಿಲ್ಲೆಗಳಲ್ಲಿ ಕೇವಲ 30 ನಿಮಿಷ ನಡೆಯಲಿದೆ ಪ್ರಚಾರ

World Liver Day 2021: ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

Published On - 12:30 pm, Mon, 19 April 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್