ಇನ್ನೂ ಪ್ಯಾನ್ ಕಾರ್ಡ್ ಹೊಂದಿಲ್ಲವಾ? ಆನ್ಲೈನ್ ಮೂಲಕ ಸಿಂಪಲ್ ಆಗಿ ಹೇಗೆ ಪ್ಯಾನ್ ಕಾರ್ಡ್ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ
ಬ್ಯಾಂಕಿಂಗ್ ವ್ಯವಹಾರ ಸೇರಿ ಹಲವು ಕಾರ್ಯಗಳಿಗೆ ಪಾನ್ ಕಾರ್ಡ್ ಅತ್ಯಗತ್ಯವಾಗಿದ್ದು ಪ್ರತಿಯೊಬ್ಬ ನಾಗರಿಕ ಇದನ್ನು ಹೊಂದುವುದು ಸೂಕ್ತವಾಗಿದೆ. ಪಾನ್ ಸಂಖ್ಯೆಯನ್ನು ಆನ್ಲೈನ್ ಮೂಲಕವೂ ಪಡೆಯಬಹುದು.
ದೆಹಲಿ: ಪ್ಯಾನ್ ಕಾರ್ಡ್ ದಿನೇದಿನೆ ಅತ್ಯವಶ್ಯವಾಗುತ್ತಿದೆ. ಬ್ಯಾಂಕಿಂಗ್ ವ್ಯವಹಾರ, ಟ್ಯಾಕ್ಸ್ ತುಂಬುವುದು ಸೇರಿ ದಿನನಿತ್ಯದ ವ್ಯವಹಾರಗಳಿಗೆ ಈ ಶಾಶ್ವತ ಖಾತೆ ಸಂಖ್ಯೆಯ ಕಾರ್ಡ್ (PAN CARD) ಬೇಕೇಬೇಕು. ಬ್ಯಾಂಕ್ಗಳಲ್ಲಿ 50 ಸಾವಿರ ರೂಪಾಯಿಗೂ ಹೆಚ್ಚಿನ ವ್ಯವಹಾರ ಮಾಡಲು ಈ ಪ್ಯಾನ್ ಸಂಖ್ಯೆ ಬೇಕೇಬೇಕು. ಹೀಗಾಗಿ ಪ್ರತಿಯೊಬ್ಬರೂ ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಈಗ ನೀವು ಪ್ಯಾನ್ ಕಾರ್ಡ್ ಪಡೆಯಲು ಸಂಬಂಧಪಟ್ಟ ಕೇಂದ್ರಗಳಿಗೆ ಹೋಗಬೇಕು ಎಂದೇನೂ ಇಲ್ಲ. ಆನ್ಲೈನ್ ಮೂಲಕ, ಆಧಾರ್ ನಂಬರ್ ಬಳಸಿ ಇ-ಪ್ಯಾನ್ ಪಡೆಯಬಹುದು. ಹೀಗೆ ಇ-ಪ್ಯಾನ್ ಪಡೆಯಲು ನವು ನಿಮ್ಮ ಆಧಾರ್ ಕಾರ್ಡ್ ನಂಬರ್ ನೀಡಿದರೆ ಸಾಕು. ಯಾವುದೇ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ.
ಆನ್ಲೈನ್ ಮೂಲಕ ಪ್ಯಾನ್ ಕಾರ್ಡ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ (e-filing) ವೆಬ್ಸೈಟ್ www.incometaxindiaefiling.gov.in. ಗೆ ಭೇಟಿ ನೀಡಿ.
- ಹೋಂ ಪೇಜ್ನಲ್ಲಿರುವ ಕ್ವಿಕ್ ಲಿಂಕ್ ಸೆಕ್ಷನ್ (Quick Links)ಗೆ ಹೋಗಿ Instant PAN through Aadhaar ಎಂಬಲ್ಲಿ ಕ್ಲಿಕ್ ಮಾಡಿ.
- ನಂತರ Get New PAN ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ನೀವು ಇನ್ಸ್ಟಂಟ್ ಪ್ಯಾನ್ ರಿಕ್ವೆಸ್ಟ್ ವೆಬ್ಪೇಜ್ಗೆ ಹೋಗುತ್ತೀರಿ.
- ಅಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು captcha code ನಮೂದಿಸುವ ಮೂಲಕ ದೃಢೀಕರಿಸಿ
- ನಂತರ ಒಟಿಪಿಗಾಗಿ ಕ್ಲಿಕ್ ಮಾಡಿ. ಆಗ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ
- ಅಲ್ಲಿ ಕಾಣಿಸುತ್ತಿರುವ ಬಾಕ್ಸ್ನಲ್ಲಿ ಒಟಿಪಿ ನಮೂದಿಸಿ ಬಳಿಕ Validate Aadhaar OTP ಎಂಬಲ್ಲಿ ಕ್ಲಿಕ್ ಮಾಡಿ. ಕಂಟಿನ್ಯೂ ಮಾಡಿ.
- ಆಗ ಪ್ಯಾನ್ ರಿಕ್ವೆಸ್ಟ್ ಸಲ್ಲಿಕೆಯ ಪೇಜ್ಗೆ ಮರುನಿರ್ದೇಶನ ಆಗುತ್ತದೆ. ಅಲ್ಲಿ ಕೂಡ ಆಧಾರ್ ನಂಬರ್ ನಮೂದಿಸಿ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ.
- ಅದಾದ ಬಳಿಕ ಪ್ಯಾನ್ ರಿಕ್ವೆಸ್ಟ್ ಸಲ್ಲಿಸಿ
- ಇಷ್ಟೆಲ್ಲ ಆದ ಮೇಲೆ ದಾಖಲಾತಿ ಸಂಖ್ಯೆ ಸಿಗುತ್ತದೆ
ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇ-ಫೈಲಿಂಗ್ ವೆಬ್ಸೈಟ್ಗೆ ಹೋಗಿ Instant PAN through Aadhaar ಎಂಬಲ್ಲಿ ಕ್ಲಿಕ್ ಮಾಡಿ. ನಂತರ Check Status / Download PAN ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು captcha code ಹಾಕಿ. ನಂತರ ಪಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವು ಮತ್ತೆ ವಿಸ್ತರಣೆ: ಜೂನ್ 30ರವರೆಗೆ ಅವಕಾಶ
ಲಿಂಕ್ ಆಗದ ಆಧಾರ್-ಪಾನ್ ಕಾರ್ಡ್ಗಳು; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫನ್ನಿ ಪೋಸ್ಟ್ಗಳು