ಅಹಮದಾಬಾದ್: ರಾಜಕೀಯದಲ್ಲಿರುವವರು ಏನೇ ತಪ್ಪು ಮಾಡಿದ್ರೂ ಅವರಿಗೆ ಶಿಕ್ಷೆ ಸಿಗೋದು ಬಹಳ ಕಮ್ಮಿ ಇದು ಎಲ್ಲಾ ಜನರಿಗೆ ಗೊತ್ತಿರುವ ವಿಷಯ. ಅಧಿಕಾರ ಬಳಸಿ ತಾವು ಮಾಡಿದ ಎಷ್ಟೂ ಕೆಟ್ಟ ಕೆಲಸಗಳನ್ನು ರಾಜಕಾರಣಿಗಳು ಮುಚ್ಚಿ ಹಾಕಿದ್ದಾರೆ.
ಸಚಿವರ ಮಗನ ಬಂಧಿಸಿದ್ದ ಗುಜರಾತ್ನ ಲೇಡಿ ಸಿಂಗಂ ಸುನಿತಾ ಯಾದವ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗುಜರಾತ್ನ ಆರೋಗ್ಯ ಸಚಿವ ಕುಮಾರ್ ಕನಾನಿಯ ಮಗನನ್ನು ಮಹಿಳಾ ಕಾನ್ಸ್ಟೇಬಲ್ ಸುನೀತಾ ಯಾದವ್ ಬಂಧಿಸಿದ್ದರು. ಬಳಿಕ ಸುನಿತಾ ಯಾದವ್ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಜನಾಕ್ರೋಶ ಕೂಡ ವ್ಯಕ್ತವಾಗಿತ್ತು. ಆದರೆ ಈಗ ಅವರು ತಮ್ಮ ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದಾರೆ.
ನಾನು ಲೇಡಿ ಸಿಂಹ ಅಲ್ಲ. ನಾನು ಜನರನ್ನು ರಕ್ಷಿಸುವ ಅಧಿಕಾರಿ. ನಾನು ನನ್ನ ಕರ್ತವ್ಯವನ್ನು ಮಾತ್ರ ಮಾಡಿದ್ದೇನೆ. ಇದನ್ನು ಮಾಡದ ನಂತರ ಅನೇಕ ಪೊಲೀಸರು ನನ್ನನ್ನು ಲೇಡಿ ಸಿಗಂ ಎಂದು ಕರೆಯುತ್ತಿದ್ದರು. ಅವರು ಕರೆ ಮಾಡಿದಾಗ ನನಗೆ ಸಂತೋಷವಾಗಿತ್ತು. ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೆ, ಆದರೆ ಅಧಿಕಾರಿಗಳಿಂದ ಬೆಂಬಲ ಸಿಗಲಿಲ್ಲ. ಹಾಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಸುನಿತಾ ಯಾದವ್ ತಿಳಿಸಿದ್ದಾರೆ. ಅಲ್ಲದೆ ಐಪಿಎಸ್ ಅಧಿಕಾರಿಯಾಗಿ ಹಿಂದಿರುಗುವುದಾಗಿ ಹೇಳಿದ್ದಾರೆ.