PM CARES Fundಗೆ Google Pay ಮೂಲಕ ಹರಿದು ಬಂದ ದೇಣಿಗೆ ಮೊತ್ತ ಎಷ್ಟು?
ಕೊರೊನಾ ವಿರುದ್ಧದ ಸಮರದಲ್ಲಿ ಭಾರತವು ನಿರಂತರವಾಗಿ ಹೋರಾಡುತ್ತಿದೆ. ಈ ಸಮರಕ್ಕೆ ಬೇಕಾದ ಅಗತ್ಯ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ, ಸಾರ್ವಜನಿಕರೂ ಸಹ ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಲು ಪ್ರಧಾನಿ ಮೋದಿ ಕಳೆದ ಮಾರ್ಚ್ನಲ್ಲಿ PM CARES Fundಎಂಬ ಹೆಸರಿನಲ್ಲಿ ನಿಧಿಯೊಂದನ್ನ ಹುಟ್ಟುಹಾಕಿದರು. ದೇಶದ ಜನತೆಗೆ ಈ ನಿಧಿಗೆ ಮುಕ್ತವಾಗಿ ದೇಣಿಗೆ ನೀಡಲು ಪ್ರೋತ್ಸಾಹಿಸಿದ್ದರು. ಅಂತೆಯೇ, ಭಾರತೀಯರು ಸಹ ಭಾರಿ ಪ್ರಮಾಣದಲ್ಲಿ PM CARES Fundಗೆ ದೇಣಿಗೆ ನೀಡಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ Google […]
ಕೊರೊನಾ ವಿರುದ್ಧದ ಸಮರದಲ್ಲಿ ಭಾರತವು ನಿರಂತರವಾಗಿ ಹೋರಾಡುತ್ತಿದೆ. ಈ ಸಮರಕ್ಕೆ ಬೇಕಾದ ಅಗತ್ಯ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ, ಸಾರ್ವಜನಿಕರೂ ಸಹ ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಲು ಪ್ರಧಾನಿ ಮೋದಿ ಕಳೆದ ಮಾರ್ಚ್ನಲ್ಲಿ PM CARES Fundಎಂಬ ಹೆಸರಿನಲ್ಲಿ ನಿಧಿಯೊಂದನ್ನ ಹುಟ್ಟುಹಾಕಿದರು. ದೇಶದ ಜನತೆಗೆ ಈ ನಿಧಿಗೆ ಮುಕ್ತವಾಗಿ ದೇಣಿಗೆ ನೀಡಲು ಪ್ರೋತ್ಸಾಹಿಸಿದ್ದರು.
ಅಂತೆಯೇ, ಭಾರತೀಯರು ಸಹ ಭಾರಿ ಪ್ರಮಾಣದಲ್ಲಿ PM CARES Fundಗೆ ದೇಣಿಗೆ ನೀಡಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ Google Pay ಌಪ್ ಮೂಲಕ ಬರೋಬ್ಬರಿ 124 ಕೋಟಿ ರೂಪಾಯಿ ಪ್ರಧಾನಿಯ PM CARES Fundಗೆ ಸಂದಾಯವಾಗಿದೆ. ಈ ಮಾಹಿತಿಯನ್ನು ಖುದ್ದು ಗೂಗಲ್ ಸಂಸ್ಥೆಯು ತನ್ನ Google for India 2020 ಕಾರ್ಯಕ್ರಮದ ವೇಳೆ ತಿಳಿಸಿದೆ. ಸುಮಾರು 22 ಲಕ್ಷ ಡಿಜಿಟಲ್ ವಹಿವಾಟುಗಳನ್ನ ನಡೆಸಿ, ಬಳಕೆದಾರರು ಈ ಮೊತ್ತವನ್ನು ಸಂದಾಯ ಮಾಡಿದ್ದಾರೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.
Published On - 5:14 pm, Thu, 16 July 20