Gujarat: ಸಾಲದ ವಿಚಾರಕ್ಕೆ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆ, ಇಬ್ಬರ ಬಂಧನ

|

Updated on: Feb 06, 2023 | 10:17 AM

ಬ್ಯಾಂಕ್ ಸಿಬ್ಬಂದಿ ಮೇಲೆ ಗ್ರಾಹಕರೊಬ್ಬರು ಹಲ್ಲೆ ನಡೆಸಿರುವ ಘಟನೆ ಗುಜರಾತ್​ನ ನಾಡಿಯಾಡ್​ನಲ್ಲಿ ನಡೆದಿದೆ. ಸಾಲದ ವಿಚಾರಕ್ಕೆ ವಾಗ್ವಾದ ನಡೆದು ಬ್ಯಾಂಕ್ ಸಿಬ್ಬಂದಿಗೆ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Gujarat: ಸಾಲದ ವಿಚಾರಕ್ಕೆ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆ, ಇಬ್ಬರ ಬಂಧನ
ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆ
Follow us on

ಬ್ಯಾಂಕ್ ಸಿಬ್ಬಂದಿ ಮೇಲೆ ಗ್ರಾಹಕರೊಬ್ಬರು ಹಲ್ಲೆ ನಡೆಸಿರುವ ಘಟನೆ ಗುಜರಾತ್​ನ ನಾಡಿಯಾಡ್​ನಲ್ಲಿ ನಡೆದಿದೆ. ಸಾಲದ ವಿಚಾರಕ್ಕೆ ವಾಗ್ವಾದ ನಡೆದು ಬ್ಯಾಂಕ್ ಸಿಬ್ಬಂದಿಗೆ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಆಫ್ ಇಂಡಿಯಾ ನಾಡಿಯಾಡ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ನಾಡಿಯಾಡ್-ಕಪದ್ವಾಂಜ್ ಶಾಖೆಯಲ್ಲಿ ಅಧಿಕಾರಿಯಾಗಿರುವ ಮನೀಶ್ ಧಂಗರ್ ಅವರನ್ನು ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಹಕರು ಥಳಿಸಿದ್ದಾರೆ. ಗೃಹ ಸಾಲದ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಗ್ರಾಹಕ ಸಮರ್ಥ್ ಬ್ರಹ್ಮಭಟ್ ತನ್ನಗೆ 2-3 ಬಾರಿ ಕಪಾಳಕ್ಕೆ ಹೊಡೆದು, ಒದ್ದಿರುವುದಾಗಿ ಪೊಲೀಸ್ ದೂರಿನಲ್ಲಿ ಮನೀಶ್ ಧಂಗರ್ ಆರೋಪಿಸಿದ್ದಾರೆ. ಇತರ ಬ್ಯಾಂಕ್ ಉದ್ಯೋಗಿಗಳು ಸಮರ್ಥನನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಯ ಜೊತೆಗಿದ್ದ ಅವನ ಸ್ನೇಹಿತ ಪಾರ್ಥ್ ಕೂಡ ನನಗೆ ಒದ್ದಿರುವುದಾಗಿ ಎಂದು ಧಂಗರ್ ಪೊಲೀಸರಿಗೆ ತಿಳಿಸಿದ್ದಾರೆ.

ಈ ಘಟನೆ ಶುಕ್ರವಾರ (ಫೆಬ್ರವರಿ 3) ನಡೆದಿದ್ದು, ನಾಡಿಯಾಡ್ ಟೌನ್ ಪೊಲೀಸ್ ಠಾಣೆಯಲ್ಲಿ ಎಸ್‌ಸಿ-ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಎನ್‌ಐ ವರದಿ ತಿಳಿಸಿದೆ. ಧಂಗರ್ ಪ್ರಕಾರ, ಸಮರ್ಥ್ ತನ್ನ ಮನೆ ವಿಮಾ ಪಾಲಿಸಿಯ ಪ್ರತಿಯನ್ನು ಸಲ್ಲಿಸಲು ಪದೇ ಪದೇ ಕರೆ ಮಾಡಿದ್ದರಿಂದ ಸಿಬ್ಬಂದಿ ಮೇಲೆ ಕೋಪಗೊಂಡಿದ್ದರು ಎನ್ನಲಾಗಿದೆ.

ಮತ್ತಷ್ಟು ಓದಿ: ಕಾರ್ಪೊರೇಷನ್ ಬ್ಯಾಂಕ್​ ATMನಲ್ಲಿ ಜ್ಯೋತಿ ಉದಯ್​ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ

ಬ್ಯಾಂಕ್‌ನಿಂದ ಸಾಲ ಪಡೆದಿರುವ ಆರೋಪಿ ಸಮರ್ಥ್ ತನ್ನ ಮನೆ ವಿಮಾ ಪಾಲಿಸಿಯ ಪ್ರತಿಯನ್ನು ಪ್ರಸ್ತುತಪಡಿಸಲು ನಿರಂತರವಾಗಿ ಕೇಳಿದ್ದರಿಂದ ಅಸಮಾಧಾನಗೊಂಡಿದ್ದ, ವಿಮಾ ಪಾಲಿಸಿಯನ್ನು ಸಲ್ಲಿಸುವುದಿಲ್ಲ ಎಂದು ಫೋನ್ ಮೂಲಕ ಬೆದರಿಕೆ ಹಾಕಿದ್ದ ಎಂದು ಧಂಗರ್ ತಿಳಿಸಿದ್ದಾರೆ.

ಗ್ರಾಹಕರಲ್ಲಿ ಒಬ್ಬರು ಬ್ಯಾಂಕ್‌ನಿಂದ ಗೃಹ ಸಾಲವನ್ನು ತೆಗೆದುಕೊಂಡಿದ್ದಾರೆ ಮತ್ತು ಲೆಕ್ಕಪರಿಶೋಧನೆಯ ಸಮಯದಲ್ಲಿ, ಗ್ರಾಹಕರು ತಮ್ಮ ಮನೆ ವಿಮಾ ಪಾಲಿಸಿಯನ್ನು ಸಲ್ಲಿಸದಿರುವುದು ಕಂಡುಬಂದಿದೆ. ನಾಡಿಯಾಡ್ ಟೌನ್ ಪೊಲೀಸ್ ಠಾಣೆಯಲ್ಲಿ SC-ST (ದೌರ್ಜನ್ಯ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:17 am, Mon, 6 February 23