SBI Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಮುಖ ಹುದ್ದೆಗಳ ನೇಮಕಾತಿ ಪ್ರಕಟ
SBI Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
SBI Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ ಎನಿಟೈಮ್ ಚಾನೆಲ್ (CMF-AC), ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್ ಎನಿಟೈಮ್ ಚಾನೆಲ್ (CMS-AC) ಮತ್ತು ಸಪೋರ್ಟ್ ಆಫೀಸರ್ – ಎನಿಟೈಮ್ ಚಾನೆಲ್‌ಗಳು (SO-AC) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು: ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ ಎನಿಟೈಮ್ ಚಾನೆಲ್ (CMF-AC) – 503 ಹುದ್ದೆಗಳು ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್ ಎನಿಟೈಮ್ ಚಾನೆಲ್ (CMS-AC) – 130 ಹುದ್ದೆಗಳು ಸಪೋರ್ಟ್ ಆಫೀಸರ್ – ಎನಿಟೈಮ್ ಚಾನೆಲ್‌ಗಳು (SO-AC) – 8 ಹುದ್ದೆಗಳು
ಅರ್ಹತಾ ಮಾನದಂಡಗಳು: ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಸಂಬಂಧಿತ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವೇತನ: ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ ಎನಿಟೈಮ್ ಚಾನೆಲ್ (CMF-AC) – ರೂ.36,000/- ಪ್ರತಿ ತಿಂಗಳು ವರದಿ ಮಾಡುವ ಪ್ರಾಧಿಕಾರ :- ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್ (CMS). ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್ ಎನಿಟೈಮ್ ಚಾನೆಲ್ (CMS-AC) – ರೂ.41,000/- ಪ್ರತಿ ತಿಂಗಳು ವರದಿ ಮಾಡುವ ಪ್ರಾಧಿಕಾರ :- AGM (AC) ನೆಟ್‌ವರ್ಕ್. ಸಪೋರ್ಟ್ ಆಫೀಸರ್- ಎನಿಟೈಮ್ ಚಾನೆಲ್‌ಗಳು (SO-AC) – ರೂ.41,000/- ಪ್ರತಿ ತಿಂಗಳು ವರದಿ ಮಾಡುವ ಪ್ರಾಧಿಕಾರ :- AGM (AC) ನೆಟ್‌ವರ್ಕ್
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 60 ವರ್ಷಗಳಾಗಿರಬೇಕು.
ಪ್ರಮುಖ ದಿನಾಂಕಗಳು: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಮೇ 18, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 07, 2022
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:45 pm, Wed, 18 May 22