ಮರು ಪ್ರತಿಷ್ಠಾಪನೆಯಾಗುತ್ತಾ ಘಜ್ನಿ ಕೈಗೆ ಸಿಕ್ಕಿ ತುಂಡಾಗಿದ್ದ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗ?

ಮೊಹಮ್ಮದ್ ಘಜ್ನಿ ಕೆಡವಿದ್ದ ಗುಜರಾತ್​ನ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗದ ಅವಶೇಷಗಳು ತನ್ನ ಬಳಿ ಇದೆ ಎಂದು ಅರ್ಚಕರಾದ ಸೀತಾರಾಮ ಶಾಸ್ತ್ರಿ ಹೇಳಿದ್ದಾರೆ. ಹೀಗಾಗಿ ಈ ಶಿವಲಿಂಗ ದೇವಾಲಯದಲ್ಲಿ ಮರು ಪ್ರತಿಷ್ಠಾಪನೆಯಾಗುತ್ತಾ ಎನ್ನುವ ಕುತೂಹಲ ಮೂಡಿದೆ. ಶಾಸ್ತ್ರಿ ತಾವು ವಿಡಿಯೋವೊಂದನ್ನು ಮಾಡಿದ್ದಾರೆ, ಅದಲ್ಲಿ ಕಳೆದ 21 ವರ್ಷಗಳಿಂದ ಪವಿತ್ರ ಲಿಂಗದ ತುಣುಕುಗಳನ್ನು ಸಂರಕ್ಷಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಮರು ಪ್ರತಿಷ್ಠಾಪನೆಯಾಗುತ್ತಾ ಘಜ್ನಿ ಕೈಗೆ ಸಿಕ್ಕಿ ತುಂಡಾಗಿದ್ದ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗ?
ಸೀತಾರಾಮ್ ಶಾಸ್ತ್ರಿ
Image Credit source: Asianet news

Updated on: Feb 13, 2025 | 10:25 AM

11ನೇ ಶತಮಾನದಲ್ಲಿ ಮೊಹಮ್ಮದ್ ಘಜ್ನಿ ಕೆಡವಿದ್ದ ಗುಜರಾತ್​ನ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗದ ಅವಶೇಷಗಳು ತನ್ನ ಬಳಿ ಇದೆ ಎಂದು ಅರ್ಚಕರಾದ ಸೀತಾರಾಮ ಶಾಸ್ತ್ರಿ ಹೇಳಿದ್ದಾರೆ. ಹೀಗಾಗಿ ಈ ಶಿವಲಿಂಗ ದೇವಾಲಯದಲ್ಲಿ ಮರು ಪ್ರತಿಷ್ಠಾಪನೆಯಾಗುತ್ತಾ ಎನ್ನುವ ಕುತೂಹಲ ಮೂಡಿದೆ.

ಶಾಸ್ತ್ರಿ ತಾವು ವಿಡಿಯೋವೊಂದನ್ನು ಮಾಡಿದ್ದಾರೆ, ಅದಲ್ಲಿ ಕಳೆದ 21 ವರ್ಷಗಳಿಂದ ಪವಿತ್ರ ಲಿಂಗದ ತುಣುಕುಗಳನ್ನು ಸಂರಕ್ಷಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈಗ ಅವುಗಳನ್ನು ಸೋಮನಾಥ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಬಯಸುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಅವರು ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಅವರನ್ನು ಭೇಟಿಯಾಗಿದ್ದಾರೆ. ಅವರು ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಶಿವಲಿಂಗವನ್ನು ನಾನು 21 ವರ್ಷಗಳ ಹಿಂದೆ ಪಡೆದುಕೊಂಡಿದ್ದೆ, ಇದಕ್ಕೂ ಮೊದಲು, ನನ್ನ ಚಿಕ್ಕಪ್ಪ ಅವುಗಳನ್ನು ಇಟ್ಟುಕೊಂಡಿದ್ದರು. ಅವರು ಅವುಗಳನ್ನು ನನಗೆ ಕೊಟ್ಟು ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ ಕನಿಷ್ಠ ಎರಡನ್ನಾದರೂ ಸ್ಥಾಪಿಸಲು ಆದೇಶಿಸಿದರು. ಇದು ಸೋಮನಾಥನ ನಿಜವಾದ ಪ್ರತಿಮೆ. ಇದು 1,000 ವರ್ಷಗಳನ್ನು ಕಳೆದಿದೆ.
ಇದನ್ನು ನನ್ನ ಚಿಕ್ಕಪ್ಪನಿಗೆ ಅವರ ಗುರು ಪ್ರಣವೇಂದ್ರ ಸರಸ್ವತಿ ಜಿ ನೀಡಿದರು. ಅದರ ನಂತರ, ನನ್ನ ಚಿಕ್ಕಪ್ಪ ಇದನ್ನು 60 ವರ್ಷಗಳ ಕಾಲ ಪೂಜಿಸಿದರು.

ಮತ್ತಷ್ಟು ಓದಿ: ಶಿವಲಿಂಗದಲ್ಲಿ ಕೆತ್ತನೆ ಮಾಡಿರುವ ಕಲ್ಲು ನಾಗರದ ತಲೆ ಮೇಲೆ ಬೆಳೆದ ಕೂದಲು; ಪವಾಡ ಕಣ್ತುಂಬಿಕೊಳ್ಳಲು ಬಂದ ಜನ

ಈ ಶಿವಲಿಂಗವನ್ನು ನಾಶಮಾಡಲು ಆಕ್ರಮಣಕಾರರು ಹಲವಾರು ದಾಳಿಗಳನ್ನು ನಡೆಸಿದರು. ದೇವಾಲಯವನ್ನು ಸಹ ಲೂಟಿ ಮಾಡಲಾಯಿತು. ಸೋಮನಾಥ ದೇವಾಲಯವನ್ನು ಪ್ರವೇಶಿಸಲು ಸುಮಾರು 50,000 ಜನರನ್ನು ಕೊಂದನು. ಅವನು ದೇವಾಲಯವನ್ನು ಅಲಂಕರಿಸಿದ ಎಲ್ಲಾ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದನು ಮತ್ತು ಶಿವಲಿಂಗವನ್ನು ನಾಶಪಡಿಸಿದನು.

ಶಿವಲಿಂಗವನ್ನು ನಾಶಪಡಿಸಿದ ಕೂಡಲೇ ಅವುಗಳ ಅವಶೇಷಗಳನ್ನು ತೆಗೆದುಕೊಂಡ ಸಂತರು ಮತ್ತೆ ಪೂಜಿಸಲು ಆರಂಭಿಸಿದ್ದರು. ನಿಜವಾದ ಸೋಮನಾಥ ಶಿವಲಿಂಗವನ್ನು ಸೋಮನಾಥ ದೇವಾಲಯದಲ್ಲಿ ಸ್ಥಾಪಿಸಲಾಗುವುದು; ಇದು ನಮ್ಮ ಸಂಕಲ್ಪ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ