- Kannada News Photo gallery miracle in kalaburagi hair grow on the head of the stone carved in Shivalinga kannada news
ಶಿವಲಿಂಗದಲ್ಲಿ ಕೆತ್ತನೆ ಮಾಡಿರುವ ಕಲ್ಲು ನಾಗರದ ತಲೆ ಮೇಲೆ ಬೆಳೆದ ಕೂದಲು; ಪವಾಡ ಕಣ್ತುಂಬಿಕೊಳ್ಳಲು ಬಂದ ಜನ
ಶಿವಲಿಂಗದಲ್ಲಿ ಕೆತ್ತನೆ ಮಾಡಿರುವ ಕಲ್ಲು ನಾಗರದ ತಲೆ ಮೇಲೆ ಕೂದಲು ಬೆಳೆದ ವಿಚಿತ್ರ, ವಿಸ್ಮಯಕಾರಿ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಸ್ಮಯ ಕಾಣಲು ಜನ ಸಾಗರವೇ ಹರಿದು ಬರುತ್ತಿದ್ದು ಇದು ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿದೆ.
Updated on:Oct 07, 2024 | 2:26 PM

ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಪುಟ್ಟ ಶಿವಲಿಂಗವನ್ನ ನೋಡೋಕೆ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಧಾವಿಸುತ್ತಿದ್ದಾರೆ. ಕೇವಲ ಒಂದೇ ಒಂದು ವರ್ಷದ ಹಿಂದಷ್ಟೇ ಈ ಶಿವಲಿಂಗವನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಈಗ ಈ ಶಿವಲಿಂಗ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ಈ ಶಿವಲಿಂಗ ಕೆತ್ತನೆಯ ವೇಳೆ ಸರ್ಪದ ಆಕೃತಿ ಸಹ ಕೆತ್ತಲಾಗಿದೆ. ಈ ಕಲ್ಲಿನ ಸರ್ಪದ ತಲೆ ಮೇಲೆ ಇದೀಗ ಕೂದಲು ಬೆಳೆದಿರುವುದೇ ಜನರ ವಿಸ್ಮಯಕ್ಕೆ ಕಾರಣವಾಗಿದೆ. ಈ ದೃಶ್ಯ ಕಣ್ಮುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.

ಕಡಣಿ ಗ್ರಾಮದ ಹೊರ ಭಾಗದಲ್ಲಿ ಈ ಭಾಗದ ಜನಪ್ರಿಯ ಸ್ವಾಮೀಜಿ ಹವಾ ಮಲ್ಲಿನಾಥ ಮುತ್ಯಾ ಅವರು ಒಂದು ವರ್ಷದ ಹಿಂದೆ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿದ್ದರು. ಈ ಶಿವಲಿಂಗದಲ್ಲಿನ ಸರ್ಪದ ತಲೆ ಮೇಲೆ ಇದೀಗ ಕೂದಲು ಬೆಳೆದಿರುವುದನ್ನು ಕಂಡು ಜನ ಪವಾಡ ಎಂದು ವಿಸ್ಮಯರಾಗುತ್ತಿದ್ದಾರೆ.

ಈ ಪವಾಡ ಕಾಣಲು ಕಡಣಿ ಗ್ರಾಮದ ಮಹಿಳೆ, ಮಕ್ಕಳು ಹಿರಿಯರೆನ್ನದೇ ಜನ ಸಾಗರವೇ ಹರಿದು ಬರುತ್ತಿದೆ. ಇಲ್ಲಿ ಪೂಜೆ ಪುನಸ್ಕಾರಗಳು ಮತ್ತಷ್ಟು ಹೆಚ್ಚಾಗಿವೆ. ಇದು ಹವಾ ಮಲ್ಲಿನಾಥ ಮುತ್ಯಾ ಪವಾಡ ಎಂದು ಜನ ಕೊಂಡಾಡುತ್ತಿದ್ದಾರೆ.

ಈ ಶಿವಲಿಂಗದ ದರ್ಶನ ಪಡೆದ ಎಲ್ಲರೂ ಹೇಳೋದು ಇದೊಂದು ಪವಾಡ ಅಂತ. ಆದ್ರೆ ವಿಜ್ಞಾನ ಲೋಕ ಇದನ್ನು ನಂಬಲು ಸಿದ್ದವಿಲ್ಲ. ಇದು ಪಾಚಿ ಇರಬಹುದು. ಇಲ್ಲವೇ ಕಲ್ಲಿನಲ್ಲಿ ಕಾಣಸಿಗುವ ಎಳೆ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆದ್ರೆ ಜನ ಮಾತ್ರ ಇದು ಹವಾ ಮಲ್ಲಿನಾಥ ಮುತ್ಯಾ ಅವರ ಪವಾಡ ಎಂದೇ ನಂಬಿದ್ದಾರೆ.
Published On - 2:18 pm, Mon, 7 October 24



