ಇಂಫಾಲ ಡಿಸೆಂಬರ್ 04: ಮಣಿಪುರದ (Manipur) ತೆಂಗನೌಪಾಲ್ (Tengnoupal) ಜಿಲ್ಲೆಯಲ್ಲಿ ಸೋಮವಾರ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 13 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ಲೀತು ಗ್ರಾಮದಲ್ಲಿ ಈ ಘಟನೆ ನಡೆದಿದೆ. “ಮ್ಯಾನ್ಮಾರ್‌ಗೆ ತೆರಳುತ್ತಿದ್ದ ಉಗ್ರಗಾಮಿಗಳ ಗುಂಪನ್ನು ಪ್ರದೇಶದಲ್ಲಿ ಪ್ರಬಲವಾಗಿರುವ ಮತ್ತೊಂದು ಗುಂಪಿನ ಬಂಡುಕೋರರು ಹೊಂಚು ಹಾಕಿದ್ದಾರೆ” ಎಂದು ತೆಂಗನೌಪಾಲ್ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಇದುವರೆಗೆ 13 ಶವಗಳನ್ನು ವಶಪಡಿಸಿಕೊಂಡಿವೆ, ಅವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ ಆದರೆ ಅವರು ಸ್ಥಳೀಯರಲ್ಲ ಎಂದು ಅವರು ಹೇಳಿದರು. ತೆಂಗ್ನೌಪಾಲ್ ಜಿಲ್ಲೆ ಮ್ಯಾನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ತೆಂಗನೌಪಾಲ್ ಜಿಲ್ಲೆಯ ಸೈಬೋಲ್ ಬಳಿಯ ಲೀಥು ಗ್ರಾಮದಲ್ಲಿ ಎರಡು ಗುಂಪುಗಳ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ಮಧ್ಯಾಹ್ನದ ಸುಮಾರಿಗೆ ಮಾಹಿತಿ ಸಿಕ್ಕಿದೆ
“ಹತ್ತಿರದ ಭದ್ರತಾ ಪಡೆಗಳು ಈ ಸ್ಥಳದಿಂದ ಸುಮಾರು 10 ಕಿಮೀ ದೂರದಲ್ಲಿವೆ. ನಮ್ಮ ಪಡೆಗಳು ಸ್ಥಳಕ್ಕಾಗಮಿಸಿ ಸ್ಥಳವನ್ನು ತಲುಪಿದಾಗ, ಅವರು ಲೀಥು ಗ್ರಾಮದಲ್ಲಿ 13 ಶವಗಳನ್ನು ಕಂಡುಕೊಂಡರು. ಪಡೆಗಳಿಗೆ ಮೃತದೇಹಗಳ ಪಕ್ಕದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲ. ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಅವರು ಈ ವಿಷಯವನ್ನು ತನಿಖೆ ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ದೆಹಲಿಯಲ್ಲಿ ಮಣಿಪುರದ ದಂಪತಿ ಮೇಲೆ ಜನರ ಗುಂಪಿನಿಂದ ಹಲ್ಲೆ
ಮೃತರು ಲೀಥು ಪ್ರದೇಶದವರಲ್ಲ, ಬಹುಶಃ ಬೇರೆ ಸ್ಥಳದಿಂದ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೃಹತ್” ಗುಂಡಿನ ಚಕಮಕಿಯಿಂದಾಗಿ ಮೃತ ದೇಹದ ಮೇಲೆ ಹಲವಾರು ಗುಂಡಿನ ಗಾಯಗಳಿವೆ. ಶವಗಳ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲ ಎಂದು ರಾಜ್ಯ ರಾಜಧಾನಿ ಇಂಫಾಲ್‌ನ ಅಧಿಕಾರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. “ಅವರುಸತ್ತ ನಂತರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ಸಾಧ್ಯತೆಯಿದೆ. ಸತ್ತವರು ಅಥವಾ ಉಗ್ರಗಾಮಿ ಗುಂಪುಗಳನ್ನು ತಕ್ಷಣವೇ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಆ ಅಧಿಕಾರಿ ಹೇಳಿದ್ದಾರೆ.
ಈಶಾನ್ಯ ರಾಜ್ಯವು ಮೇ 3 ರಿಂದ ಜನಾಂಗೀಯ ಹಿಂಸಾಚಾರದಿಂದ ನಲುಗಿ ಹೋಗಿದೆ. ಈ ಹಿಂಸಾಚಾರ 180 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಸುಮಾರು 50,000 ಮಂದಿಯನ್ನು ನಿರಾಶ್ರಿತರನ್ನಾಗಿ ಮಾಡಿದೆ.
ಗಡಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಇಂಟರ್ನೆಟ್ ಅನ್ನು ಮರುಸ್ಥಾಪಿಸಿದ ಕೇವಲ ಒಂದು ದಿನದ ನಂತರ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಕೇಂದ್ರ ಸರ್ಕಾರ ಮತ್ತು ಮಣಿಪುರ ಸರ್ಕಾರವು ರಾಜ್ಯದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫೋರ್ಸ್ (UNLF) ನೊಂದಿಗೆ ನವದೆಹಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ದಿನಗಳ ನಂತರ ಇಂಟರ್ನೆಟ್ ಮರುಸ್ಥಾಪಿಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Mon, 4 December 23