Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಮಣಿಪುರದ ದಂಪತಿ ಮೇಲೆ ಜನರ ಗುಂಪಿನಿಂದ ಹಲ್ಲೆ

ದಿಲ್ಲಿಯ ಸನ್‌ಲೈಟ್‌ ಕಾಲೋನಿಯಲ್ಲಿ ರಾತ್ರಿ ವೇಳೆ ಮಣಿಪುರದ ದಂಪತಿ ಮತ್ತು ಇತರ ಇಬ್ಬರ ಮೇಲೆ ಎಂಟು-ಒಂಬತ್ತು ಜನರ ಗುಂಪೊಂದು ರಸ್ತೆಯಲ್ಲಿ ಹಲ್ಲೆ ನಡೆಸಿದೆ. ಗುರುವಾರ ನಡೆದ ಘಟನೆಯನ್ನು ರಸ್ತೆಯ ಬಾಲ್ಕನಿಯಲ್ಲಿ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ನಾವು ಸತ್ತು ಹೋಗ್ತೀವಿ ಎಂದೇ ಅಂದುಕೊಂಡೆವು ಎಂದು ಸಂತ್ರಸ್ತರು ಪೊಲೀಸ್ ಠಾಣೆ ಮುಂದೆ ಕಣ್ಣೀರು ಹಾಕಿದ್ದಾರೆ.

ದೆಹಲಿಯಲ್ಲಿ ಮಣಿಪುರದ ದಂಪತಿ ಮೇಲೆ ಜನರ ಗುಂಪಿನಿಂದ ಹಲ್ಲೆ
ಮಣಿಪುರ ದಂಪತಿ ಮೇಲೆ ಹಲ್ಲೆ
Follow us
ರಶ್ಮಿ ಕಲ್ಲಕಟ್ಟ
|

Updated on: Dec 02, 2023 | 5:39 PM

ದೆಹಲಿ ಡಿಸೆಂಬರ್ 02 : ಆಗ್ನೇಯ ದೆಹಲಿಯ ಸನ್‌ಲೈಟ್‌ ಕಾಲೋನಿಯಲ್ಲಿ ರಾತ್ರಿ ವೇಳೆ ಮಣಿಪುರದ (Manipur) ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ಎಂಟು-ಒಂಬತ್ತು ಜನರ ಗುಂಪೊಂದು ರಸ್ತೆಯಲ್ಲಿ ಹಲ್ಲೆ ನಡೆಸಿದೆ. ಗುರುವಾರ ನಡೆದ ಘಟನೆಯನ್ನು ರಸ್ತೆಯ ಬಾಲ್ಕನಿಯಲ್ಲಿ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಹಲವಾರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗಿದೆ ಎಂದು ಸನ್‌ಲೈಟ್ ಕಾಲೋನಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಡಿಟಿವಿ ಎಫ್‌ಐಆರ್ ಪ್ರತಿಯನ್ನು ನೋಡಿದ್ದು ಆರೋಪಗಳಲ್ಲಿ ಲೈಂಗಿಕ ದೌರ್ಜನ್ಯವೂ ಸೇರಿದೆ ಎಂದು ವರದಿ ಮಾಡಿದೆ.

ಶುಕ್ರವಾರ ತಡರಾತ್ರಿ ಎಫ್‌ಐಆರ್ ದಾಖಲಿಸಿದ ನಂತರ ದೂರುದಾರರು ಸನ್‌ಲೈಟ್ ಕಾಲೋನಿ ಪೊಲೀಸ್ ಠಾಣೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಆರೋಪಿಗಳ ಮುಖಗಳು ಸ್ಪಷ್ಟವಾಗಿ ಕಂಡುಬರುತ್ತವೆ ಎಂದಿದ್ದಾರೆ. ಮೊಬೈಲ್ ದೃಶ್ಯಗಳಲ್ಲಿ ಒಬ್ಬ ಪುರುಷ, ಅವನ ಹೆಂಡತಿ, ಅವನ ಸಹೋದರಿ ಮತ್ತು ಕುಟುಂಬದ ಸ್ನೇಹಿತ ಈ ನಾಲ್ವರಿಗೆ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತದೆ.

“ನನ್ನ ಹೆಂಡತಿ ಮತ್ತು ನಾನು ಮತ್ತು ನನ್ನ ಸಹೋದರಿ ರಾತ್ರಿ 11 ಗಂಟೆಗೆ ಊಟದ ನಂತರ ಸ್ನೇಹಿತನನ್ನು ಮನೆಗೆ ಬಿಡುತ್ತಿದ್ದಾಗ ಇಬ್ಬರು ಪುರುಷರು ಮತ್ತು ಮಹಿಳೆ ನಮ್ಮ ಬಳಿಗೆ ಬಂದರು, ಅವರ ಮೊಬೈಲ್ ಬ್ಯಾಟರಿ ಡೆಡ್ ಆಗಿದೆ. ಮುನಿರ್ಕಾಗೆ (ದಕ್ಷಿಣ ದೆಹಲಿಯಲ್ಲಿ) ಕ್ಯಾಬ್ ಬುಕ್ ಮಾಡಲು ಅವರಿಗೆ ಸಹಾಯ ಬೇಕು ಎಂದು ಹೇಳಿದರು.

“ನಾವು ಸಹಾಯ ಮಾಡಲು ಒಪ್ಪಿಕೊಂಡೆವು. ಕ್ಯಾಬ್ ಬುಕ್ ಮಾಡುವಾಗ, ಸಹಾಯ ಕೇಳಿದ ವ್ಯಕ್ತಿ ನನ್ನ ಹೆಂಡತಿ ಮತ್ತು ಸಹೋದರಿಯ ವಿರುದ್ಧ ಅಸಭ್ಯ ಮಾತುಗಳನ್ನಾಡಿದ್ದಾರೆ. ನಾವು ಅವರ ವರ್ತನೆಯನ್ನು ವಿರೋಧಿಸಿದಾಗ ಅವರು ರೊಚ್ಚಿಗೆದ್ದರು.ಅವರ ಎಂಟು-ಒಂಬತ್ತು ಸ್ನೇಹಿತರನ್ನು ಕರೆದು ನಮಗೆ ಹೊಡೆಯಲು ಪ್ರಾರಂಭಿಸಿದರು ಎಂದು ಸಂತ್ರಸ್ತರು ಹೇಳಿದ್ದಾರೆ.

ಇದನ್ನೂ ಓದಿ: ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಯುಎನ್‌ಎಲ್‌ಎಫ್: ಅಮಿತ್ ಶಾ

ಆ ಜನರ ಗುಂಪು ನನ್ನ ಕೂದಲನ್ನು ಎಳೆದುಕೊಂಡು, ನೆಲದ ಮೇಲೆ ಒದ್ದು ತನ್ನನ್ನು ಎಳೆಯಲು ಪ್ರಯತ್ನಿಸಿದೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ. “ನಾನು ಸತ್ತೆ ಎಂದು ನಾನು ಭಾವಿಸಿದೆ, ನಾವೆಲ್ಲರೂ ಸತ್ತು ಹೋಗುತ್ತಿದ್ದೆವು ಆದರೆ ಅವರು ಹೊಡೆಯುವುದನ್ನು ನಿಲ್ಲಿಸಲಿಲ್ಲ,ಯಾರೂ ಅವರನ್ನು ತಡೆಯಲಿಲ್ಲ” ಎಂದು ಮಹಿಳೆ ಹೇಳಿದ್ದಾರೆ.

ಅವರು ಕ್ಯಾಬ್ ಕಾಯ್ದಿರಿಸಲು ಸಹಾಯ ಕೇಳಿದಾಗ ನಾವು ನಡೆದುಕೊಂಡು ಹೋಗುತ್ತಿದ್ದೆವು. ನೋಡಿ ಅವರು ನಮ್ಮ ಜತೆ ಮಾಡಿದ್ದು ಎಂದು ಮಹಿಳೆ ಪೊಲೀಸ್ ಠಾಣೆಯ ಮುಂದೆ ಕಣ್ಣೀರಾಗಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ