ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಬಳಿ ನಡೆದಿದ್ದ ಶೂಟೌಟ್ ಘಟನೆ ಮಾಸುವ ಮೊದಲೇ ಈ ರೀತಿಯ ಮತ್ತೊಂದು ಘಟನೆಗೆ ದೆಹಲಿ ಸಾಕ್ಷಿಯಾಗಿದೆ. ದಕ್ಷಿಣ ದೆಹಲಿಯ ಶಾಹೀನ್ಬಾಗ್ ಸಿಎಎ ಪ್ರತಿಭಟನಾಕರರ ಮೇಲೆ ಬಂಧೂಕಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ.
ಗುಂಡಿನ ದಾಳಿಗೆ ಬಿಜೆಪಿ ಕಾರಣ:
ದಕ್ಷಿಣ ದೆಹಲಿಯ ಶಾಹೀನ್ಬಾಗ್ನಲ್ಲಿ ಸಿಎಎ ಪ್ರತಿಭಟನಾಕರರ ಮೇಲೆ ನಡೆದಿರುವ ಗುಂಡಿನ ದಾಳಿ ರಾಜಕೀಯ ತಿರುವು ಪಡೆದಿದೆ. ದೆಹಲಿ ಚುನಾವಣೆಗೆ ಕೌಂಟ್ಡೌನ್ ಶುರುವಾಗಿರುವಾಗ್ಲೇ ಈ ರೀತಿ ಘಟನೆಗಳು ಮರುಕಳಿಸಲು ಬಿಜೆಪಿ ಕಾರಣ ಅಂತಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದು, ಬಿಜೆಪಿ ಕೂಡ ತಿರುಗೇಟು ನೀಡಿದೆ.
ಕೇಜ್ರಿವಾಲ್ ಬಿರಿಯಾನಿ ಕೊಡುತ್ತಿದ್ದಾರೆ:
ದಕ್ಷಿಣ ದೆಹಲಿಯ ಶಾಹೀನ್ಬಾಗ್ನಲ್ಲಿ ‘ಸಿಎಎ’ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಬಿರಿಯಾನಿ ಕೊಡುತ್ತಿದೆ ಅಂತಾ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಹಾಗೇ ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ದೇಶವನ್ನ ವಿಭಜಿಸುತ್ತಿದ್ದಾರೆ ಅಂತಲೂ ಯೋಗಿ ಆರೋಪ ಮಾಡಿದ್ದಾರೆ.
ಭಾರತ ಮೂಲದವರ ರಕ್ಷಣೆಗೆ ಪ್ರಯತ್ನ:
‘ಕೊರೊನಾ’ ವೈರಸ್ ಹಬ್ಬಿರುವ ಚೀನಾದ ವುಹಾನ್ ಪ್ರಾಂತ್ಯದಿಂದ ಭಾರತೀಯರನ್ನ ಕರೆತರುವ ಕಾರ್ಯ ಆರಂಭ ಆಗಿದೆ. ಆದರೆ ಕೊರೊನಾ ವೈರಸ್ ತಗುಲಿರುವ ಲಕ್ಷಣ ಇರುವವರನ್ನ ವಿಶೇಷ ವಿಮಾನ ಹತ್ತದಂತೆ ತಡೆಯೊಡ್ಡಿರುವ ಚೀನಾ ಅಧಿಕಾರಿಗಳು, ರೋಗ ಲಕ್ಷಣ ಇರುವವರನ್ನ ತಪಾಸಣೆ ನಡೆಸುತ್ತಿದ್ದಾರೆ.
Published On - 7:25 am, Sun, 2 February 20