ಗುಪ್ಕರ್ ಕೂಟದ ವಿರುದ್ಧ ಅಮಿತ್ ಶಾಹ ಯಾಕೆ ಕೆಂಡವಾಗಿದ್ದಾರೆ?

|

Updated on: Nov 21, 2020 | 9:18 PM

ಇಷ್ಟು ದಿನ ತಣ್ಣಗಿದ್ದ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಮತ್ತೆ ರಾಜಕೀಯದ ಗಾಳಿ ಬೀಸುತ್ತಿದೆ. ಗುಪ್ಕರ್ ಮೈತ್ರಿಕೂಟಕ್ಕೆ ಪಾಕಿಸ್ತಾನದ ಗೆಳೆತನ ಮಾಡುವ ಆಸೆಯಿದೆಯೆಂದು ಗೃಹ ಸಚಿವ ಅಮಿತ್ ಶಾಹ ಹೇಳಿದ್ದು,  ಭಯೋತ್ಪಾದನೆಯನ್ನು ಮರಳಿ ತರುವ ಯತ್ನದಲ್ಲಿ ಈ ಕೂಟ ಮಗ್ನವಾಗಿದೆಯೆಂದು ಎಂದಿದ್ದಾರೆ. ವಿಶೇಷ ಸ್ಥಾನಮಾನದ ರದ್ದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು 2019ರ ಅಗಸ್ಟ್ 5ರಂದು ಕೇಂದ್ರ ಸರ್ಕಾರ ಹಿಂಪಡೆಯಿತು. ರಾಜ್ಯದ ಸ್ಥಾನಮಾನ ರದ್ದುಗೊಳಿಸಿ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪುನರ್​ವಿಂಗಡಿಸಿತು. ಇದರಿಂದ ಕೇಂದ್ರ ಸರ್ಕಾರ […]

ಗುಪ್ಕರ್ ಕೂಟದ ವಿರುದ್ಧ ಅಮಿತ್ ಶಾಹ ಯಾಕೆ ಕೆಂಡವಾಗಿದ್ದಾರೆ?
Follow us on

ಇಷ್ಟು ದಿನ ತಣ್ಣಗಿದ್ದ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಮತ್ತೆ ರಾಜಕೀಯದ ಗಾಳಿ ಬೀಸುತ್ತಿದೆ. ಗುಪ್ಕರ್ ಮೈತ್ರಿಕೂಟಕ್ಕೆ ಪಾಕಿಸ್ತಾನದ ಗೆಳೆತನ ಮಾಡುವ ಆಸೆಯಿದೆಯೆಂದು ಗೃಹ ಸಚಿವ ಅಮಿತ್ ಶಾಹ ಹೇಳಿದ್ದು,  ಭಯೋತ್ಪಾದನೆಯನ್ನು ಮರಳಿ ತರುವ ಯತ್ನದಲ್ಲಿ ಈ ಕೂಟ ಮಗ್ನವಾಗಿದೆಯೆಂದು ಎಂದಿದ್ದಾರೆ.

ವಿಶೇಷ ಸ್ಥಾನಮಾನದ ರದ್ದು

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು 2019ರ ಅಗಸ್ಟ್ 5ರಂದು ಕೇಂದ್ರ ಸರ್ಕಾರ ಹಿಂಪಡೆಯಿತು. ರಾಜ್ಯದ ಸ್ಥಾನಮಾನ ರದ್ದುಗೊಳಿಸಿ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪುನರ್​ವಿಂಗಡಿಸಿತು. ಇದರಿಂದ ಕೇಂದ್ರ ಸರ್ಕಾರ ಕಣಿವೆ ರಾಜ್ಯದ ಆಂತರಿಕ ವಿಷಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು.

ಏನಿದು ಗುಪ್ಕರ್ ಕೂಟ?

ಜಮ್ಮು ಕಾಶ್ಮೀರದ ಏಳು ಪ್ರಾದೇಶಿಕ ಪಕ್ಷಗಳ ಒಕ್ಕೂಟವೇ ಗುಪ್ಕರ್ ಕೂಟ. ವಿಶೇಷ ಸ್ಥಾನಮಾನ ಹಿಂಪಡೆವ ಒಂದು ದಿನ ಮೊದಲು, ಅಂದರೆ 2019 ರಲ್ಲಿ ಗುಪ್ಕರ್ ಕೂಟದ ರಚನೆಯಾಯಿತು. ಆದರೆ, ಅಧಿಕೃತ ಘೋಷಣೆಯಾದದ್ದು ಈ ವರ್ಷದ ಅಗಸ್ಟ್ 22ರಂದು. ಗುಪ್ಕರ್ ಭವನದಲ್ಲಿ ಸಭೆ ನಡೆದ ಕಾರಣ ಇದು ಗುಪ್ಕರ್ ಕೂಟ ಎಂದೇ ಹೆಸರು ಹೆಸರಾಗಿದೆ. ಜಮ್ಮು ಕಾಶ್ಮೀರಕ್ಕೆ ಮರಳಿ ಪ್ರತ್ಯೇಕ ಸ್ಥಾನಮಾನ ಲಭಿಸುವವರೆಗೂ ಹೋರಾಡುವುದು ಈ ಕೂಟದ ಉದ್ದೇಶ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಈ ಮೈತ್ರಿಕೂಟದ ಮುಖ್ಯಸ್ಥರಾಗಿದ್ದಾರೆ. ಬಿಜೆಪಿಯ ವಿರುದ್ಧ ಜನರನ್ನು ಒಗ್ಗೂಡಿಸುವುದೂ ತನ್ನ ಉದ್ದೇಶವೆಂದು ಗುಪ್ಕರ್ ಕೂಟದ ನಾಯಕರು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ 370ನೇ ಕಲಮಿನಲ್ಲಿ ಇರೋದಾದ್ರೂ ಏನು?

ಕಲಮ್ ನಂಬರ್ 370, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಹೊಂದುವ ಸ್ವಾತಂತ್ರ್ಯ ಒದಗಿಸಿತ್ತು! ಅಲ್ಲದೇ ಹಲವು ವಿಷಯಗಳಲ್ಲಿ ವಿಶೇಷ ಸೌಲಭ್ಯ ಸಹ ನೀಡಿತ್ತು. 370ನೇ ಕಲಮಿನ ಭಾಗವಾದ 35A ಇತರ ರಾಜ್ಯದ ನಾಗರಿಕರು ಕಣಿವೆ ರಾಜ್ಯದಲ್ಲಿ ಆಸ್ತಿ ಖರೀದಿಸಲು ನಿರ್ಬಂಧ ಹೇರಿತ್ತು. ಅಷ್ಟು ಮಾತ್ರವಲ್ಲದೆ ಕೇಂದ್ರ ಸರ್ಕಾರದ ಆದೇಶಗಳು, ಸಂವೈಧಾನಿಕ ಕಟ್ಟಳೆಗಳು ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ.

ಟೀಕೆ ಹಿಂದೆ ಚುನಾವಣೆಯ ನೆರಳು!

ಅಮಿತ್ ಶಾ ಟೀಕೆ ಮತ್ತೆ ಕಾಶ್ಮೀರದಲ್ಲಿ ತಲ್ಲಣ ಮೂಡಿಸಿದೆ. 2021ರಲ್ಲಿ ಜಮ್ಮು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಲಡಾಕ್​ ಅನ್ನು ಬೇರ್ಪಡಿಸಿ ಕೇಂದ್ರಾಡಿಳಿತ ಪ್ರದೇಶ ಮಾಡಿರಿವುದರಿಂದಮ ಅದರ ನಾಲ್ಲು ವಿಧಾನ ಸಭಾ ಕ್ಷೇತ್ರಗಳು ಕಡಿಮೆಯಾಗಿಎ ಜಮ್ಮು ಮತ್ತು ಕಾಶ್ಮೀರದ 107ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆದರೆ ಗುಪ್ಕರ್ ಕೂಟ ಕಾಶ್ಮೀರಕ್ಕೆ ಮರಳಿ ವಿಶೇಷ ಸ್ಥಾನಮಾನ ದೊರೆಯದವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದೆ. ಅಮಿತ್ ಶಾಹ ಕಣ್ಣು ಕಣಿವೆ ರಾಜ್ಯದ ಮೇಲೆ ಬಿದ್ದಿರುವುದಂತೂ ಸತ್ಯ. ಇದೇ ಕಾರಣಕ್ಕೆ ಪದೇ ಪದೇ ಗುಪ್ಕರ್ ಕೂಟವನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ.

ಆದರೆ ಚುನಾವಣೆಗಳನ್ನು ಭಯೋತ್ಪಾದಕರು ಹುಟ್ಟಿಸುತ್ತಿರುವ ಆತಂಕದ ನೆರಳಿನಲ್ಲಿ ನಡೆಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಲಿದೆ. ಮತದಾನದ ಪ್ರಮಾಣ ಹೆಚ್ಚಿಸಲು ಕಾಶ್ಮೀರದಾದ್ಯಂತ ಭದ್ರತೆಯನ್ನು ಬಿಗಿಗೊಳಿಸುವುದು ಸುಲಭದ ಕೆಲಸವಲ್ಲ. ಪರಿಸ್ಥಿಯನ್ನು ಭಾರತ ಸರ್ಕಾರ ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಕಾದು ನೋಡಬೇಕು.