ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದ ಪುಣೆ ವಿಮಾನ ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ; 192 ಪ್ರಯಾಣಿಕರು ಸೇಫ್

ಟೇಕ್-ಆಫ್ ಆದ ಬೆನ್ನಲ್ಲೇ ವಿಮಾನದ ಲ್ಯಾಂಡಿಂಗ್ ಗೇರ್ (ಚಕ್ರಗಳು) ಒಳಕ್ಕೆ ಹೋಗಲು ವಿಫಲವಾದ ಹಿನ್ನೆಲೆಯಲ್ಲಿ, ಪುಣೆಯಿಂದ ಗುವಾಹಟಿಗೆ ಹೊರಟಿದ್ದ ಇಂಡಿಗೋ ವಿಮಾನ ಪುಣೆ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ವಾಪಸಾಗಿದೆ. ಆ ವಿಮಾನದಲ್ಲಿದ್ದ 192 ಪ್ರಯಾಣಿಕರು ಮತ್ತು ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುವಾಹಟಿಗೆ ಹೊರಟಿದ್ದ 6E 0623 ಸಂಖ್ಯೆಯ ವಿಮಾನವು ಟೇಕ್-ಆಫ್ ಆದ ತಕ್ಷಣ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಚಕ್ರಗಳು ಒಳಗೆ ಹೋಗಲು ವಿಫಲವಾದವು.

ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದ ಪುಣೆ ವಿಮಾನ ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ; 192 ಪ್ರಯಾಣಿಕರು ಸೇಫ್
Indigo (7)

Updated on: Nov 15, 2026 | 1:33 PM

ನವದೆಹಲಿ, ನವೆಂಬರ್ 15: ಟೇಕ್-ಆಫ್ ಆದ ನಂತರ ವಿಮಾನದ ಲ್ಯಾಂಡಿಂಗ್ ಗೇರ್ ಸಮಸ್ಯೆಯ ಹಿನ್ನೆಲೆಯಲ್ಲಿ, ಗುವಾಹಟಿಗೆ ಹೊರಟಿದ್ದ ಇಂಡಿಗೋ ವಿಮಾನವು ತುರ್ತು ಪರಿಸ್ಥಿತಿಯಲ್ಲಿ ಪುಣೆ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದ ಘಟನೆ ನಡೆದಿದೆ. ತಾಂತ್ರಿಕ ದೋಷ ಕಂಡುಬಂದ ತಕ್ಷಣವೇ 6E 0623 (VT-IZE) ಸಂಖ್ಯೆಯ ವಿಮಾನದ ಪೈಲಟ್ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುಣೆ ವಿಮಾನ ನಿಲ್ದಾಣದಲ್ಲಿ ‘ಸಂಪೂರ್ಣ ತುರ್ತು ಪರಿಸ್ಥಿತಿ’ ಘೋಷಿಸಲಾಗಿತ್ತು.

ತುರ್ತು ಶಿಷ್ಟಾಚಾರದ ಭಾಗವಾಗಿ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ದಳಗಳು, ಆ್ಯಂಬುಲೆನ್ಸ್‌ಗಳು ಮತ್ತು ತುರ್ತು ಸ್ಪಂದನಾ ತಂಡಗಳನ್ನು ತಕ್ಷಣವೇ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಒಟ್ಟು 192 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತಿದ್ದ ಈ ವಿಮಾನವು, ಕೆಳಗಿರುವ ತಾಂತ್ರಿಕ ತಂಡಕ್ಕೆ ಲ್ಯಾಂಡಿಂಗ್ ಗೇರ್ ಸ್ಥಿತಿಯನ್ನು ಪರಿಶೀಲಿಸಲು ಅನುವಾಗುವಂತೆ ರನ್‌ವೇ ಮೇಲೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿತು.

Loading...

ಇದನ್ನೂ ಓದಿ: ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳು ಉಳಿವಿಗಾಗಿ ಹೆಣಗಾಡುತ್ತಿರುವುದೇಕೆ? ಪ್ರಾದೇಶಿಕ ವಾಯುಯಾನದ ಸವಾಲುಗಳು

ಭೂಸ್ಪರ್ಶ ಮಾಡುವ ಮುನ್ನ, ಕೆಳಗಿರುವ ತಾಂತ್ರಿಕ ತಂಡವು ಚಕ್ರಗಳ ಸ್ಥಿತಿಯನ್ನು ಕಣ್ಣಾರೆ ಪರಿಶೀಲಿಸಲು ಅನುಕೂಲವಾಗುವಂತೆ ಪೈಲಟ್ ವಿಮಾನವನ್ನು ರನ್‌ವೇ ಮೇಲೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿದರು.

ಸುರಕ್ಷಿತ ಲ್ಯಾಂಡಿಂಗ್:

ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್ ಮತ್ತು ತುರ್ತು ರಕ್ಷಣಾ ಪಡೆಗಳ ಕಟ್ಟೆಚ್ಚರದ ನಡುವೆ ಪೈಲಟ್ ವಿಮಾನವನ್ನು ಅತ್ಯಂತ ಚಾಣಾಕ್ಷತನದಿಂದ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಬಳಿಕ ಏರೋಬ್ರಿಡ್ಜ್ ಮೂಲಕ ಎಲ್ಲಾ 192 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಪರ್ಯಾಯ ವಿಮಾನದ ವ್ಯವಸ್ಥೆ:

ತುರ್ತು ಲ್ಯಾಂಡಿಂಗ್ ನಂತರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆಯು ಅಗತ್ಯ ನೆರವು ಒದಗಿಸಿದ್ದು, ಅವರನ್ನು ಗುವಾಹಟಿಗೆ ತಲುಪಿಸಲು ಬೆಂಗಳೂರಿನಿಂದ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ. ತಾಂತ್ರಿಕ ದೋಷಕ್ಕೆ ನಿಖರ ಕಾರಣ ತಿಳಿಯಲು ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು: ವಿಮಾನ ಪ್ರಯಾಣಕ್ಕಿಂತ ಇದು ಲಾಭದಾಯಕವೇ?

ಏರೋಬ್ರಿಡ್ಜ್ ಬಳಸಿ ಎಲ್ಲಾ 192 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ವಿಮಾನ ನಿಲ್ದಾಣದಲ್ಲಿ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂಪಡೆಯಲಾಯಿತು.

ಬೆಂಗಳೂರಿನಿಂದ ಪರ್ಯಾಯ ವಿಮಾನ:

ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನವಾದ ಗುವಾಹಟಿಗೆ ಕರೆದೊಯ್ಯಲು ಇಂಡಿಗೋ ಸಂಸ್ಥೆಯು ಬೆಂಗಳೂರಿನಿಂದ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Sun, 15 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us