ಹೈದ್ರಾಬಾದ್ನ ಮಹೇಶ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ( Mahesh Co-Operative Urban Bank ) ಅನ್ನು ಸೈಬರ್ ವಂಚಕರು ಹ್ಯಾಕ್ (Hack) ಮಾಡಿದ್ದು 12.90 ಕೋಟಿ ರೂಗಳನ್ನು ದೇಶದ ವಿವಿಧ ಬ್ಯಾಂಕ್ಗಳ 128 ಖಾತೆಗಳಿಗೆ ವರ್ಗಾಯಿಸಿದ ಘಟನೆ ನಡೆದಿದೆ. ಒಂದೇ ಬ್ಯಾಂಕ್ನ ಮೂರು ಖಾತೆಗಳನ್ನು ಹ್ಯಾಕ್ ಮಾಡಿದ್ದು ಒಂದೇ ದಿನದಲ್ಲಿ 12 ಕೋಟಿಗೂ ಹೆಚ್ಚು ಹಣಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಮಹೇಶ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ನ ಐಟಿ ಹೆಡ್ ಕೆ ಬದ್ರಿನಾಥ್ ಮಾಹಿತಿ ನೀಡಿದ್ದು, ಬ್ಯಾಂಕ್ ಗ್ರಾಹಕರ ಖಾತೆಗಳಲ್ಲಿನ ಹಣ ಸುರಕ್ಷಿತವಾಗಿದೆ. ಹ್ಯಾಕರ್ಸ್ಗಳು ಬ್ಯಾಂಕ್ನ ರೆಮಿಟನ್ಸ್ ಫಂಡ್ (Remittance Funds) (ರವಾನೆ ಮಾಡುವ ಹಣ)ನ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಗಮನಕ್ಕೆ ಬಂದ ತಕ್ಷಣ ಹಣ ವರ್ಗಾವಣೆಯಾಗುವುದನ್ನು ತಡೆಯಲಾಗಿದೆ. ಆದರೂ 12.90 ಕೋಟಿರೂಗಳನ್ನು ವಂಚಕರು ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹಣ ದೋಚಿದ್ದರ ಕುರಿತು ಬ್ಯಾಂಕ್ ಕಡೆಯಿಂದ ಸೈಬರ್ ಕ್ರೈಮ್ ಪೊಲೀಸರಿಗೆ ದುರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಮ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಒಂದು ಖಾತೆಯನ್ನು ಪತ್ತೆ ಮಾಡಲಾಗಿದೆ. ಬ್ಯಾಂಕ್ನಲ್ಲಿ ಎಲ್ಲಾ ರೀತಿಯ ಸುರಕ್ಷತೆಗಳಿವೆ ಆದರೂ ಇದೇ ಮೊದಲ ಬಾರಿಗೆ ಹ್ಯಾಕ್ ಆಗಿದೆ. ಹೇಗೆ ಹ್ಯಾಕ್ ಮಾಡಲಾಗಿದೆ ಎಂದು ತಿಳಿಯಲು ಟೆಕ್ನಿಕಲ್ ಎಕ್ಸ್ಪರ್ಟ್ಸ್ಗಳನ್ನು ನೇಮಕ ಮಾಡಲಾಗಿದೆ ಎಂದು ಬ್ಯಾಂಕ್ನ ಐಟಿ ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯಾ.ಕಾಂ ವರದಿ ಮಾಡಿದೆ.
ಬ್ಯಾಂಕ್ಗೆ ಈಗಾಗಲೇ ಸೈಬರ್ ಕ್ರೈಮ್ ವಿರುದ್ಧ ಇನ್ಸುರೆನ್ಸ್ ಮಾಡಿಸಲಾಗಿದೆ. ಸೈಬರ್ ಕ್ರೈಮ್ ಅಧಿಕಾರಿಗಳೂ ಕೂಡ ತನಿಖೆಯನ್ನು ಆರಂಭಿಸಿದ್ದಾರೆ. ತನಿಖೆಯ ಬಳಿಕ ಹಣ ವರ್ಗಾವಣೆಯಾಗಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಹೇಳಿದ್ದಾರೆ. ಹಣ ದೋಚಿದ ವಂಚಕರು ದೆಹಲಿ, ಬಿಹಾರ್ ಸೇರಿದಂತೆ ಒಟ್ಟು ದೇಶದ ವಿವಿಧ ರಾಜ್ಯಗಳ 128 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ:
ಬೆಂಗಳೂರಲ್ಲಿ ಮನೆ ಮುಂದಿನ ಹೂಕುಂಡಗಳನ್ನೂ ಕದಿಯುತ್ತಿದ್ದಾರೆ! ಕಾರಿನಲ್ಲಿ ಬಂದ ಯುವತಿಯಿಂದ ಕುಕೃತ್ಯ
Published On - 11:58 am, Wed, 26 January 22