AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ ಘರ್ ಜಲ್​​​ನಿಂದಾಗಿ ಅತಿಸಾರದಿಂದಾಗುವ 4 ಲಕ್ಷ ಸಾವುಗಳನ್ನು ತಪ್ಪಿಸಬಹುದು: ವಿಶ್ವ ಆರೋಗ್ಯ ಸಂಸ್ಥೆ ವರದಿ

‘ಹರ್ ಘರ್ ಜಲ್’ ವರದಿಯು ಅತಿಸಾರ ರೋಗಗಳ ಮೇಲೆ ಕೇಂದ್ರೀಕರಿಸುತ್ತದೆ. ನೀರು, ನೈರ್ಮಲ್ಯ ಮತ್ತು ನೈರ್ಮಲ್ಯ ಸಮಸ್ಯೆಗಳಿಂದ ಅತಿಸಾರ ರೋಗ ಬರುತ್ತದೆ

ಹರ್ ಘರ್ ಜಲ್​​​ನಿಂದಾಗಿ ಅತಿಸಾರದಿಂದಾಗುವ 4 ಲಕ್ಷ ಸಾವುಗಳನ್ನು ತಪ್ಪಿಸಬಹುದು: ವಿಶ್ವ ಆರೋಗ್ಯ ಸಂಸ್ಥೆ ವರದಿ
ಹರ್ ಘರ್ ಜಲ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 10, 2023 | 12:52 PM

ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಉಳಿತಾಯದ ಮೇಲೆ ‘ಹರ್ ಘರ್ ಜಲ್’ (Har Ghar Jal) ಕಾರ್ಯಕ್ರಮದ ಪ್ರಯೋಜನಗಳನ್ನು ಹೈಲೈಟ್ ಮಾಡಿದೆ. ‘ಹರ್ ಘರ್ ಜಲ್’ ಕುರಿತ ಈ ವರದಿ ಪ್ರಕಾರ ದೇಶದ ಎಲ್ಲಾ ಮನೆಗಳಿಗೆ ಸುರಕ್ಷಿತವಾಗಿ ನಿರ್ವಹಿಸಲಾದ ಕುಡಿಯುವ ನೀರನ್ನು ಖಾತ್ರಿಪಡಿಸಿಕೊಳ್ಳುವುದರಿಂದ ಅತಿಸಾರ ರೋಗಗಳಿಂದ ಉಂಟಾಗುವ ಸುಮಾರು ನಾಲ್ಕು ಲಕ್ಷ ಸಾವುಗಳನ್ನು ತಪ್ಪಿಸಬಹುದು. ಅಷ್ಟೇ ಅಲ್ಲ ಈ ಕಾಯಿಲೆಗಳಿಗೆ ಸಂಬಂಧಿಸಿದಂತೆ 14 ಮಿಲಿಯನ್ Disability Adjusted Life ತಡೆಯಬಹುದು ಎಂದು ಅಂದಾಜಿಸಿದೆ.

Disability Adjusted Life ಅಥವಾ DALY-ಜೀವನದ ಗುಣಮಟ್ಟವನ್ನು ಅಳೆಯಲು ವಿಶ್ವ ಆರೋಗ್ಯ ಉಪಯೋಗಿಸುವ ಅಂಕಿ ಅಂಶ. ಈ ಸಾಧನೆಯು ಕೇವಲ 101 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಅಂದಾಜು ವೆಚ್ಚ ಉಳಿತಾಯಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Jal Jeevan Mission: ಗುಜರಾತ್ ಶೇ 100 ಹರ್ ಘರ್ ಜಲ್ ರಾಜ್ಯ: ಸಚಿವ ಹರ್ಷ ಸಂಘವಿ ಘೋಷಣೆ

‘ಹರ್ ಘರ್ ಜಲ್’ ವರದಿಯು ಅತಿಸಾರ ರೋಗಗಳ ಮೇಲೆ ಕೇಂದ್ರೀಕರಿಸುತ್ತದೆ. ನೀರು, ನೈರ್ಮಲ್ಯ ಮತ್ತು ನೈರ್ಮಲ್ಯ ಸಮಸ್ಯೆಗಳಿಂದ ಅತಿಸಾರ ರೋಗ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಡಾ. ರಿಚರ್ಡ್ ಜಾನ್ಸ್ಟನ್ ಮತ್ತು ಡಾ. ಸೋಫಿ ಬೋಯ್ಸನ್ ಅವರು ‘ಜಲ್ ಜೀವನ್ ಮಿಷನ್‌ನ ಆರೋಗ್ಯ ಪರಿಣಾಮ’ ಎಂಬ ವರದಿಯನ್ನು ಮಂಡನೆ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ