ಅಪ್ರಾಪ್ತ ಬಾಲಕಿ ಮೇಲೆ ತಂದೆ ಮತ್ತು ಗೆಳೆಯನಿಂದ ಪದೇ ಪದೇ ಅತ್ಯಾಚಾರ, 3 ಬಾರಿ ಗರ್ಭಪಾತ

ತಂದೆಯೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ(Rape)ವೆಸಗಿರುವ ಅಮಾನವೀಯ ಘಟನೆ ಹರಿದ್ವಾರದ ಕಂಖಾಲ್​ ಪ್ರದೇಶದಲ್ಲಿ ನಡೆದಿದೆ. 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ 60 ವರ್ಷದ ತಂದೆಯನ್ನು ಬಂಧಿಸಲಾಗಿದೆ. ಗರ್ಭಪಾತದ ಮಾತ್ರೆಗಳನ್ನು ನೀಡಿದ ಬಳಿಕ ಆಕೆಯ ಆರೋಗ್ಯ ತೀವ್ರ ಹದಗೆಟ್ಟಿತ್ತು ಆಗ ಮಾಹಿತಿ ಬೆಳಕಿಗೆ ಬಂದಿದೆ. ಕೇವಲ ತಂದೆ ಮಾತ್ರವಲ್ಲ ಆಕೆಯ ಗೆಳೆಯ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಅಪ್ರಾಪ್ತ ಬಾಲಕಿ ಮೇಲೆ ತಂದೆ ಮತ್ತು ಗೆಳೆಯನಿಂದ ಪದೇ ಪದೇ ಅತ್ಯಾಚಾರ, 3 ಬಾರಿ ಗರ್ಭಪಾತ
ಕ್ರೈಂ

Updated on: Oct 10, 2025 | 12:11 PM

ಹರಿದ್ವಾರ, ಅಕ್ಟೋಬರ್ 10: ತಂದೆಯೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ(Rape)ವೆಸಗಿರುವ ಅಮಾನವೀಯ ಘಟನೆ ಹರಿದ್ವಾರದ ಕಂಖಾಲ್​ ಪ್ರದೇಶದಲ್ಲಿ ನಡೆದಿದೆ. 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ 60 ವರ್ಷದ ತಂದೆಯನ್ನು ಬಂಧಿಸಲಾಗಿದೆ. ಗರ್ಭಪಾತದ ಮಾತ್ರೆಗಳನ್ನು ನೀಡಿದ ಬಳಿಕ ಆಕೆಯ ಆರೋಗ್ಯ ತೀವ್ರ ಹದಗೆಟ್ಟಿತ್ತು ಆಗ ಮಾಹಿತಿ ಬೆಳಕಿಗೆ ಬಂದಿದೆ. ಕೇವಲ ತಂದೆ ಮಾತ್ರವಲ್ಲ ಆಕೆಯ ಗೆಳೆಯ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಗೆಳೆಯ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದ, ಇದರ ಪರಿಣಾಮವಾಗಿ ಎರಡು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು ಎಂಬುದು ತಿಳಿದುಬಂದಿದೆ. ತಂದೆ ಮತ್ತು ಗೆಳೆಯ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಜಾಗರಣ್ ವರದಿಯ ಪ್ರಕಾರ, ಅಕ್ಟೋಬರ್ 7 ರಂದು ಸಂತ್ರಸ್ತೆಯ ಅಕ್ಕ ಕಂಖಾಲ್ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ಪೊಲೀಸರ ಗಮನಕ್ಕೆ ಬಂದಿತು. ಮಂಗಳವಾರ ತನ್ನ ತಂಗಿಯ ಸ್ಥಿತಿ ಹದಗೆಟ್ಟ ನಂತರ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಅವರು ವರದಿ ಮಾಡಿದ್ದಾರೆ. ಬಾಲಕಿಗೆ ಗರ್ಭಪಾತ ಔಷಧ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದರು ಮತ್ತು ಆಕೆಯ ಸ್ಥಿತಿ ಗಂಭೀರವಾಗಿದ್ದ ಕಾರಣ, ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಯಿತು.

ಮತ್ತಷ್ಟು ಓದಿ: ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಒಮ್ಮೆ ಆರೋಗ್ಯ ಸ್ಥಿರವಾದ ಬಳಿಕ ಆಕೆ ಪೊಲೀಸರ ಬಳಿ ಭಯಾನಕ ವಿಚಾರಗಳನ್ನು ಬಹಿರಂಗಪಡಿಸಿದ್ದಾಳೆ. ಅವಳ ಸ್ವಂತ ತಂದೆಯೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ, ಮತ್ತು ಆಕೆ ಗರ್ಭಿಣಿ ಎಂದು ತಿಳಿದಾಗ, ಅದನ್ನು ಅಂತ್ಯಗೊಳಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಹೇಳಿದ್ದಾಳೆ.

ಎಸ್‌ಎಸ್‌ಪಿ ಪ್ರಮೇಂದ್ರ ದೋಬಾಲ್ ಅವರ ಆದೇಶದ ಮೇರೆಗೆ, ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ತ್ವರಿತವಾಗಿ ದಾಖಲಿಸಲಾಯಿತು.

ಪ್ರಿಯಾಂಶ್ ಹಲವಾರು ವರ್ಷಗಳಿಂದ ಸಂತ್ರಸ್ತೆಯ ತಂದೆಯೊಂದಿಗೆ ಕೆಲಸ ಮಾಡುತ್ತಿದ್ದ ಇವರ ಮನೆಯ ಹತ್ತಿರದಲ್ಲೇ ವಾಸಿಸುತ್ತಿದ್ದ ಎಂದು ಎಸ್‌ಪಿ ಸಿಟಿ ಪಂಕಜ್ ಗೈರೋಲಾ ಬಹಿರಂಗಪಡಿಸಿದ್ದಾರೆ. ತಂದೆಗೆ ತನ್ನ ಮಗಳು ಮತ್ತು ಪ್ರಿಯಾಂಶ್ ನಡುವಿನ ಪ್ರಣಯ ಸಂಬಂಧದ ಬಗ್ಗೆ ತಿಳಿದಿತ್ತು ಮತ್ತು ಆಕೆಯ ಹಿಂದಿನ ಗರ್ಭಧಾರಣೆಯ ಬಗ್ಗೆಯೂ ತಿಳಿದಿತ್ತು. ಮಗಳನ್ನು ರಕ್ಷಿಸುವ ಬದಲು, ತಂದೆ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಂಡು ತಾನೂ ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:09 pm, Fri, 10 October 25