ದೆಹಲಿ ಆರ್ಮಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ಹರ್ಜೋತ್​ ಸಿಂಗ್​; ಸಹಾಯ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ

| Updated By: Lakshmi Hegde

Updated on: Mar 29, 2022 | 7:18 PM

ತಮ್ಮ ಮಗ ಬದುಕುಳಿದು ಬಂದಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಹರ್ಜೋತ್​ ಸಿಂಗ್ ತಂದೆ ಕೇಸರ್​ ಸಿಂಗ್​, ನನ್ನ ಪುತ್ರನಿಗೆ ಇನ್ನೊಂದು ಅವಕಾಶ ಸಿಕ್ಕಿದೆ. ಖಂಡಿತವಾಗಿಯೂ ಉಕ್ರೇನ್​ಗೆ ಮತ್ತೆ ಓದುವುದಕ್ಕೋಸ್ಕರ ಹೋಗುತ್ತಾನೆ ಎಂದಿದ್ದಾರೆ.

ದೆಹಲಿ ಆರ್ಮಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ಹರ್ಜೋತ್​ ಸಿಂಗ್​; ಸಹಾಯ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ
ಹರ್ಜೋತ್​ ಸಿಂಗ್​
Follow us on

ಉಕ್ರೇನ್​ನ ಕೀವ್​ನಲ್ಲಿ ರಷ್ಯಾ ಸೈನಿಕರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಭಾರತದ ವಿದ್ಯಾರ್ಥಿ ಹರ್ಜೋತ್​ ಸಿಂಗ್​ ಇದೀಗ ಚೇತರಿಸಿಕೊಂಡಿದ್ದು, ದೆಹಲಿಯ ಸೇನಾ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ. ನನ್ನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆದರೆ ಮುಂದೆಯೂ ಸ್ವಲ್ಪ ಚಿಕಿತ್ಸೆಯ ಅಗತ್ಯವಿದ್ದು, ಕೇಂದ್ರ ಸರ್ಕಾರ ನನಗೆ ಸಹಾಯ ಮಾಡಬೇಕು ಎಂದು ಹರ್ಜೋತ್​ ಸಿಂಗ್​ ಹೇಳಿದ್ದಾರೆ. ನನ್ನ ಕೈ ಮತ್ತು ಕಾಲು ಪಾದಗಳು ಸರಿಯಾಗಲು ಇನ್ನೂ ಒಂದು ವರ್ಷ ಚಿಕಿತ್ಸೆ ಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ನನ್ನ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ತಂದೆಗೂ ನಿವೃತ್ತಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸಹಾಯ ಮಾಡಬೇಕು ಎಂದು ಅವರು ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.

ತಮ್ಮ ಮಗ ಬದುಕುಳಿದು ಬಂದಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಹರ್ಜೋತ್​ ಸಿಂಗ್ ತಂದೆ ಕೇಸರ್​ ಸಿಂಗ್​, ನನ್ನ ಪುತ್ರನಿಗೆ ಇನ್ನೊಂದು ಅವಕಾಶ ಸಿಕ್ಕಿದೆ. ಖಂಡಿತವಾಗಿಯೂ ಉಕ್ರೇನ್​ಗೆ ಮತ್ತೆ ಓದುವುದಕ್ಕೋಸ್ಕರ ಹೋಗುತ್ತಾನೆ. ಮೊದಲು ನನ್ನ ಪುತ್ರ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು. ಬಳಿಕ ಮುಂದೇನು ಎಂದು ಯೋಚಿಸಲಿ. ಯಾವುದೇ ದೇಶವೂ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಈಗ ನಡೆಯುತ್ತಿರುವ ಯುದ್ಧ ಅಹಂಕಾರಗಳ ನಡುವೆ ನಡೆಯುತ್ತಿದೆ ಹೊರತು ಎರಡು ದೇಶಗಳ ಮಧ್ಯೆ ಅಲ್ಲ ಎಂದು ಹೇಳಿದ್ದಾರೆ. ಹರ್ಜೋತ್​ ಸಿಂಗ್​​ರನ್ನು ಕೀವ್​​ನಿಂದ ಆಂಬುಲೆನ್ಸ್​ ಮೂಲಕ ಪೋಲ್ಯಾಂಡ್​ಗೆ ಕರೆತಂದು ಅಲ್ಲಿಂದ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿತ್ತು.

ಇದನ್ನೂ ಓದಿ: ಇವತ್ತು‌ ಚುನಾವಣೆಗಳು ಪಾರದರ್ಶಕವಾಗಿಲ್ಲ; ಸರ್ಕಾರಿ ಅಧಿಕಾರಿಗಳು ಚುನಾವಣೆಯಲ್ಲಿ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು -ಶಾಸಕ ಲಿಂಗೇಶ್