ಇವತ್ತು‌ ಚುನಾವಣೆಗಳು ಪಾರದರ್ಶಕವಾಗಿಲ್ಲ; ಅಧಿಕಾರಿಗಳು ಚುನಾವಣೆ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು -ಶಾಸಕ ಲಿಂಗೇಶ್

ಸರ್ಕಾರಿ ಅಧಿಕಾರಿಗಳು ಚುನಾವಣೆಯಲ್ಲಿ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು. ಆಸ್ತಿ ಉಳಿಸಿಕೊಳ್ಳಲು ನೇರವಾಗಿ ಚುನಾವಣೆಗೆ ಬರುತ್ತಾರೆ. ನಿವೃತ್ತಿ ಆದ ಬಳಿಕ ಐದು ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು. ಚುನಾವಣೆ ಬಳಿಕ ಒಂದು ಧರ್ಮದ ಮತಗಳು ಬೇಡ ಎಂದು ಹೇಳ್ತಾರೆ.

ಇವತ್ತು‌ ಚುನಾವಣೆಗಳು ಪಾರದರ್ಶಕವಾಗಿಲ್ಲ; ಅಧಿಕಾರಿಗಳು ಚುನಾವಣೆ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು -ಶಾಸಕ ಲಿಂಗೇಶ್
ಬೇಲೂರು ಶಾಸಕ ಲಿಂಗೇಶ್
Follow us
TV9 Web
| Updated By: ಆಯೇಷಾ ಬಾನು

Updated on:Mar 29, 2022 | 7:24 PM

ಬೆಂಗಳೂರು: ಚುನಾವಣಾ ಸುಧಾರಣೆಗಳ‌ ಕುರಿತು ಬೇಲೂರು ಶಾಸಕ ಲಿಂಗೇಶ್ ಚರ್ಚೆ ನಡೆಸಿದ್ದಾರೆ. ಇವತ್ತು‌ ಚುನಾವಣೆಗಳು ಪಾರದರ್ಶಕವಾಗಿಲ್ಲ. ಹಣದ ಮೇಲೆಯೇ ಚುನಾವಣೆ ನಡೆಯುತ್ತಿವೆ ಇದಕ್ಕೆ ಬ್ರೇಕ್ ಹಾಕಬೇಕು. ನಮ್ಮ ಕ್ಷೇತ್ರದಲ್ಲಿ ಈಗಲೇ ಚುನಾವಣೆ ಶುರುವಾಗಿದೆ. ಒಬ್ಬ ಹೆಲಿಕಾಪ್ಟರ್ನಲ್ಲಿ ಬಂದು ಹೂವು ಹಾಕ್ತಾನೆ ಇನ್ನೊಬ್ಬ ದೇವಸ್ಥಾನಕ್ಕೆ 5 ಲಕ್ಷ ಕೊಡ್ತಾನೆ. ನಾವು ಎಲ್ಲಿಗೆ ಹೋಗ್ತಿದ್ದೇವೆ? ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ವಿಧಾನಸಭೆಯಲ್ಲಿ ಲಿಂಗೇಶ್ ಒತ್ತಾಯ ಮಾಡಿದ್ದಾರೆ.

ಸರ್ಕಾರಿ ಅಧಿಕಾರಿಗಳು ಚುನಾವಣೆಯಲ್ಲಿ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು. ಆಸ್ತಿ ಉಳಿಸಿಕೊಳ್ಳಲು ನೇರವಾಗಿ ಚುನಾವಣೆಗೆ ಬರುತ್ತಾರೆ. ನಿವೃತ್ತಿ ಆದ ಬಳಿಕ ಐದು ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು. ಚುನಾವಣೆ ಬಳಿಕ ಒಂದು ಧರ್ಮದ ಮತಗಳು ಬೇಡ ಎಂದು ಹೇಳ್ತಾರೆ. ಇದು ಪ್ರಜಾಪ್ರಭುತ್ವ ಸಂವಿಧಾನ ವಿರೋಧಿ ಎಂದು ಹೇಳಿಕೆ ಕೊಟ್ಟರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಒಂದು ಪಕ್ಷ ಮುಸ್ಲಿಮರನ್ನು ಓಲೈಕೆ ಮಾಡುತ್ತದೆ. ಮತ್ತೊಂದು ಪಕ್ಷ ಮುಸ್ಲಿಂ ಮತ ನಮಗೆ ಬೇಡ ಎಂದು ಹೇಳ್ತಾರೆ. ನಾನು ಮುಂದಿನ ಚುನಾವಣೆಗೆ ನಿಲ್ಲಬೇಕಾ ಬೇಡ್ವಾ ಅನ್ನೋ ಭಯ ಶುರುವಾಗುತ್ತದೆ. ಭ್ರಷ್ಟಾಚಾರ ವ್ಯವಸ್ಥೆ ಭಯ ಶುರು ಮಾಡಿಸಿದೆ. ನಾನು ಶಾಸಕರ ಅನುದಾನದಲ್ಲಿ ಎರಡು ಲಕ್ಷ ದೇವಸ್ಥಾನಕ್ಕೆ ಕೊಟ್ಟರೆ ನಾಲ್ಕು ಲಕ್ಷ ಖರ್ಚು ಮಾಡಿ ಜಾತ್ರೆ ಸಂದರ್ಭದಲ್ಲಿ ಹೆಲಿಕಾಪ್ಟರ್ ನಲ್ಲಿ ಹೂವು ಹಾಕ್ತಿದ್ದಾರೆ. ಅವರು ಮುಂದಿನ ಚುನಾವಣೆಯ ಅಭ್ಯರ್ಥಿ ಆಗಬೇಕು ಎಂದು ಓಡಾಡುತ್ತಿದ್ದಾರೆ.

ಹಣ, ಹೆಂಡ ಕೊಡಬೇಕು. ಹೆಂಡ ಅಂದ್ರೆ ಬ್ರಾಂಡ್ ಇರೋದೇ ಕೊಡಬೇಕು. ಈ ವ್ಯವಸ್ಥೆ ಸರಿಪಡಿಸದಿದ್ರೆ ದೇಶದ ಭವಿಷ್ಯಕ್ಕೆ ಮಾರಕ. ಸುಧಾರಣೆ ಎಲ್ಲಾ ರಂಗದಲ್ಲೂ ಆಗಿದೆ. ಅದೇ ರೀತಿ ರಾಜಕೀಯದಲ್ಲೂ ಅನೇಕ ಸುಧಾರಣೆಗಳನ್ನು ನೋಡಿದ್ದೇವೆ. ಚುನಾವಣಾ ಆಯೋಗದ ಅಧ್ಯಕ್ಷರು ಚೆನ್ನಾಗಿ ಅಧಿಕಾರ ಮಾಡ್ತಾ ಬಂದ್ರು. ಹಿಂದೆ ಅಬಕಾರಿ ಲಾಬಿ ಇತ್ತು, ಇವಾಗ ಇರುವುದು ರಿಯಲ್ ಎಸ್ಟೇಟ್ ಲಾಬಿ. ಬೆಂಗಳೂರು ಸುತ್ತಮುತ್ತಲೂ ಇರುವವರೇ ರಾಜ್ಯದ ಸುತ್ತಮುತ್ತ ಹೋಗಿ ಅವರ ಜಾತಿಯವರು ಇರುವ ಕಡೆ ಟಿಕೆಟ್ ಗಿಟ್ಟಿಸಿಕೊಳ್ಳುವುದನ್ನು ನೋಡಿದ್ದೇವೆ. ನಿವೃತ್ತಿ ಅಧಿಕಾರಿಗಳ ಲಾಬಿ ಮತ್ತೆ ಶುರುವಾಗಿದೆ.

ಐಎಎಸ್, ಐಪಿಎಸ್ ಅಧಿಕಾರಿಗಳು ನಿವೃತ್ತಿಯಾದ ತಕ್ಷಣ ತಮ್ಮ ಆಸ್ತಿ ಉಳಿಸಿಕೊಳ್ಳಲು ಈ ರೀತಿ ಚುನಾವಣೆಯಲ್ಲಿ ಭಾಗಿಯಾಗುತ್ತಾರೆ. ಚುನಾವಣೆಯನ್ನು ಒಂದು ಬಾರಿ ಗೆದ್ರೆ ನಮ್ಮ ಆಸ್ತಿಪಾಸ್ತಿ ಉಳಿಸಿಕೊಳ್ಳಬಹುದು ಎಂಬ ಭ್ರಮೆ ಇದೆ. 10 ವರ್ಷ ಸರ್ವಿಸ್ ಮಾಡಿ ಕೋಟಿ ಗಟ್ಟಲೆ ಹಣ ಸಂಪಾದನೆ ಮಾಡಿ, ವಾಲಂಟರಿ ಸರ್ವಿಸ್ ಬಿಡುವುದು. ಯಾವುದೋ ಒಂದು ಪಕ್ಷ ಕಾಯ್ತಾ ಇರುತ್ತದೆ ಅಲ್ಲಿ ಹೋಗಿ ಟಿಕೆಟ್ ಪಡೆಯುವುದು. ಇದರಲ್ಲಿ ಸುಧಾರಣೆ ಮಾಡ್ಬೇಕು ಅಂದ್ರೆ ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಲು ನಿವೃತ್ತಿಯಾಗಿ ಕನಿಷ್ಠ 5 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ತರಬೇಕು. ಭ್ರಷ್ಟಾಚಾರದಿಂದ ಕೂಡಿಟ್ಟ ಹಣ ಈ ರೀತಿ ಬಳಕೆಯಾಗುತ್ತದೆ ಎಂದಿದ್ದಾರೆ.

ಮೇಕೆ ಬಡವರಿದ್ದಂತೆ, ಹಂದಿ ಶ್ರೀಮಂತರಿದ್ದಂತೆ ಎಂದ ಶಾಸಕ K.R.ರಮೇಶ್ ಕುಮಾರ್​ ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಬಗ್ಗೆ ಚರ್ಚೆ ಮುಂದುವರಿದಿದೆ. ಬಡವರು, ಶ್ರೀಮಂತರ ಬಗ್ಗೆ ಕೆ.ಆರ್.ರಮೇಶ್ ಕುಮಾರ್​ ಮಾತನಾಡಿದ್ದಾರೆ. ಚುನಾವಣೆಗಳಲ್ಲಿ ಕ್ಯೂನಲ್ಲಿ ನಿಂತು ಮತ ಹಾಕುವವರು ಬಡವರು. ಶ್ರೀಮಂತರು ಬಹಳಷ್ಟು ಜನ ಮತಗಟ್ಟೆಯತ್ತ ಬರುವುದೇ ಇಲ್ಲ. ಅಧಿಕಾರದಲ್ಲಿದ್ದಾಗ ನೋಡಲು ಬಂದರೆ ಗನ್​ಮ್ಯಾನ್​ ತಡೀತಾನೆ. ಮತ್ತೊಬ್ಬ ನಿಮ್ಮನ್ನು ಚುನಾವಣೆಯಲ್ಲಿ ವಿರೋಧ ಮಾಡಿರುತ್ತಾನೆ. ವಿರೋಧ ಮಾಡಿದವನು ಯಾವುದೇ ವರ್ಗಾವಣೆಗೆ ಬಂದಿರುತ್ತಾನೆ. ಅವನನ್ನ ಗನ್​ಮ್ಯಾನ್​ ನೇರವಾಗಿ ಡೈನಿಂಗ್ ಹಾಲ್​ಗೆ ಕರೆತರ್ತಾನೆ. ಸ್ಪೀಕರ್​ ಆದರೂ ಅಷ್ಟೇ, ಕೆ.ಆರ್.ರಮೇಶ್ ಕುಮಾರ್ ಅಷ್ಟೇ. ಬಡವ ಬಂದ್ರೆ ಅವನಿಗೆ ನಾಚಿಕೆ, ಸ್ವಾಭಿಮಾನ ಹೆಚ್ಚಾಗಿರುತ್ತದೆ. ಮೇಕೆ ಹುಲ್ಲು ತಿನ್ನುತ್ತೆ, ಹಂದಿ ಏನು ಮೇಯುತ್ತೆ ಎಂದು ಗೊತ್ತಲ್ವಾ? ಮೇಕೆ ಹುಲ್ಲು ಮೇಯುತ್ತೆದೆ, ಮೇಕೆ ಬಡವರಿದ್ದಂತೆ. ಹಂದಿ ಶ್ರೀಮಂತರಿದ್ದಂತೆ ಎಂದು ಶಾಸಕ K.R.ರಮೇಶ್ ಕುಮಾರ್​ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. RBI ಗವರ್ನರ್​ ಒಬ್ಬ ಲೋನ್ ರಿಸ್ಟ್ರಕ್ಚರ್​ ಮಾಡುವಾಗ ಹೇಳ್ತಾನೆ, ಹಂದಿಗೆ ಲಿಪ್​ಸ್ಟಿಕ್​ ಬಳಿದರೆ ಯುವರಾಣಿ ಆಗಿಬಿಡುತ್ತಾ ಅಂತಾನೆ. 23 ಸಾವಿರ ಕೋಟಿ ರೂ. ಸಾಲ ಕೊಟ್ಟು ಏನಾಯ್ತು ಗೊತ್ತಲ್ವಾ? ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್​ ಹೇಳಿದ್ರು.

ಇನ್ನು ವಿಧಾನಸಭೆಯಲ್ಲಿ ಚುನಾವಣಾ ಸುಧಾರಣೆ ಕುರಿತ ಚರ್ಚೆ ವೇಳೆ TV9 ಚರ್ಚಾ ಕಾರ್ಯಕ್ರಮದ ಬಗ್ಗೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಪ್ರಸ್ತಾಪ ಮಾಡಿದ್ದಾರೆ.

ಸರ್ವಜ್ಞನ ವಚನ ಹೇಳಿದ ಗೋವಿಂದ ಕಾರಜೋಳ ಇನ್ನು ಇದೇ ವೇಳೆ ಸಚಿವ ಗೋವಿಂದ ಕಾರಜೋಳ ಚರ್ಚೆ ನಡೆಸಿದ್ದು ಸಭಾಧ್ಯಕ್ಷರೇ ನಿಮ್ಮನ್ನು ನೋಡಿದಾಗ ಒಂದು ಸರ್ವಜ್ಞನ ವಚನ ನೆನಪಾಯ್ತು. ಬಸವ ಪೀಠವೂ ಎದ್ದು, ಬಸತ್ ನಾಣ್ಯವು ಹುಟ್ಟಿ, ಬಸವಣ್ಣ ಮುದ್ರೆ ಮೆರೆದಾವ್, ವಸುದೇವಗೆ ವಚವಾಗದಿರುವುದೇ ಈ ಧರೆ. ಸರ್ವಜ್ಞ 15ನೇ ಶತಮಾನದಲ್ಲಿ ಹೇಳಿರುವ ವಚನವಿದು. ಇದರ ಅರ್ಥ ಏನೆಂದರೆ, ಇಂದಲ್ಲಾ ನಾಳೆ ಬಸವಣ್ಣ ಆಡಳಿತ ಬಂದೇ ಬರುತ್ತದೆ. ಸುಧಾರಣೆ ಆಗೇ ಆಗುತ್ತದೆ ಎಂಬ ಅರ್ಥ ಇದೆ. ಸಭಾಧ್ಯಕ್ಷರೇ ನೀವು ಚುನಾವಣಾ ಸುಧಾರಣೆ ಬಗ್ಗೆ ಮಾಡಿದ ಭಾಷಣ ಈ ವಚನಕ್ಕೆ ಹೋಲುತ್ತದೆ. ತಮ್ಮ ಆಸೆ ಈಡೇರುತ್ತದೆ, ಸದ್ಯದ ವ್ಯವಸ್ಥೆ ಶಾಶ್ವತ ಅಲ್ಲ. ಅಂಥ ದಿನಗಳು ಬೇಗ ಬರಲಿ ಎಂದು ಪ್ರಾರ್ಥನೆ ಮಾಡುವೆ ಎಂದು ಹೇಳಿದ್ರು.

ಇದನ್ನೂ ಓದಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೃಷಿ ಸಚಿವ ಬಿ ಸಿ ಪಾಟೀಲರನ್ನು ಸದನದಲ್ಲಿ ಫಜೀತಿಗೊಳಪಡಿಸಿದ ಪ್ರಸಂಗ

Published On - 7:11 pm, Tue, 29 March 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ