ನಾಳೆ ಹರ್ಯಾಣ ಸಚಿವ ಸಂಪುಟ ವಿಸ್ತರಣೆ; ಸಂಜೆ 4ಕ್ಕೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ

| Updated By: Lakshmi Hegde

Updated on: Dec 27, 2021 | 4:31 PM

2019ರ ಚುನಾವಣೆ ಫಲಿತಾಂಶ ಅಕ್ಟೋಬರ್​ 24ರಂದು ಹೊರಬಿದ್ದಿತ್ತು. ಅದಾದ ಬಳಿಕ ನವೆಂಬರ್​ನಲ್ಲಿ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ನೇತೃತ್ವದ ಸಂಪುಟ ರಚನೆಯಾಗಿತ್ತು.

ನಾಳೆ ಹರ್ಯಾಣ ಸಚಿವ ಸಂಪುಟ ವಿಸ್ತರಣೆ; ಸಂಜೆ 4ಕ್ಕೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ
ಮನೋಹರ್​ ಲಾಲ್​ ಖಟ್ಟರ್​
Follow us on

ನಾಳೆ ಹರ್ಯಾಣ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. 2019ರಲ್ಲಿ ನಡೆದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಲ್ಲಿ ಆಡಳಿತ ನಡೆಸುತ್ತಿದೆ. 2019ರಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ಕ್ಯಾಬಿನೆಟ್​ ರಚನೆಯಾಗಿದ್ದು, ಬಿಟ್ಟರೆ ನಂತರ ಅದರ ವಿಸ್ತರಣೆ ಆಗಿರಲೇ ಇಲ್ಲ. ನಾಳೆ ಅಂದರೆ ಡಿಸೆಂಬರ್​ 28ರಂದು ಹರ್ಯಾಣ ಸಂಪುಟ ವಿಸ್ತರಣೆಯಾಗಲಿದೆ. ನೂತನ ಸಚಿವರು ನಾಳೆ ಸಂಜೆ 4ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಉಪಸ್ಥಿತರಿರುವರು ಎಂದು ಹೇಳಲಾಗಿದೆ.

2019ರ ಚುನಾವಣೆ ಫಲಿತಾಂಶ ಅಕ್ಟೋಬರ್​ 24ರಂದು ಹೊರಬಿದ್ದಿತ್ತು. ಅದಾದ ಬಳಿಕ ನವೆಂಬರ್​ನಲ್ಲಿ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ನೇತೃತ್ವದ ಸಂಪುಟ ರಚನೆಯಾಗಿತ್ತು.  ಅಂದು ಒಟ್ಟು 10 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅದರಲ್ಲಿ ಎಂಟು ಮಂದಿ ಬಿಜೆಪಿಯವರಾಗಿದ್ದರೆ, ಒಬ್ಬರು ಜನನಾಯಕ ಜನತಾ ಪಾರ್ಟಿಯವರು. ಒಬ್ಬರು ಸ್ವತಂತ್ರ್ಯವಾಗಿ ಗೆದ್ದವರಾಗಿದ್ದರು.

ಇದನ್ನೂ ಓದಿ: ಕೊವಿಡ್​ನಿಂದ ಮೃತರಾದವರ ಕುಟುಂಬಗಳಿಗೆ ಒಂದೂವರೆ ಲಕ್ಷ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್

Published On - 4:20 pm, Mon, 27 December 21