Chandigarh Municipal Corporation Election ಚಂಡೀಗಢ ಮುನ್ಸಿಪಲ್ ಚುನಾವಣೆಯಲ್ಲಿ 14 ಸೀಟುಗಳನ್ನು ಗೆದ್ದು ಭರ್ಜರಿ ಗೆಲುವು ಸಾಧಿಸಿದ ಎಎಪಿ

Chandigarh Municipal Corporation Election 2021 Results ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಚ್ಚರಿಯ  ಮುನ್ನಡೆ ಸಾಧಿಸುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಇದು ಕೇಜ್ರಿವಾಲ್ ಅವರ ಆಡಳಿತ ಮಾದರಿಗೆ ಸಿಕ್ಕ ಗೆಲುವು ಎಂದು ಹೇಳಿದ್ದಾರೆ.

Chandigarh Municipal Corporation Election ಚಂಡೀಗಢ ಮುನ್ಸಿಪಲ್ ಚುನಾವಣೆಯಲ್ಲಿ 14 ಸೀಟುಗಳನ್ನು ಗೆದ್ದು ಭರ್ಜರಿ ಗೆಲುವು ಸಾಧಿಸಿದ ಎಎಪಿ
ಚಂಡೀಗಢ ಮುನ್ಸಿಪಲ್ ಚುನಾವಣೆಯಲ್ಲಿ ಆಪ್ ಗೆಲುವು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 27, 2021 | 4:05 PM

ಚಂಡೀಗಢ: ರಾಜ್ಯ ಚುನಾವಣಾ ಆಯೋಗವು (State Election Commission) ಬಿಡುಗಡೆ ಮಾಡಿದ ಫಲಿತಾಂಶಗಳ ಪ್ರಕಾರ  35 ಸದಸ್ಯರ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ(Chandigarh Municipal Corporation Elections) ಆಮ್ ಆದ್ಮಿ ಪಕ್ಷ (AAP) 14 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 12, ಕಾಂಗ್ರೆಸ್ 8 ಮತ್ತು ಶಿರೋಮಣಿ ಅಕಾಲಿದಳ ಒಂದು ಸ್ಥಾನ ಗೆದ್ದಿದೆ. ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಅವರು “ಜನರು ವರ್ಷಗಳಿಂದ ಬದಲಾವಣೆಗಾಗಿ ಹಂಬಲಿಸುತ್ತಿದ್ದಾಗ ಕೇಜ್ರಿವಾಲ್ ಅವರ ಆಡಳಿತದ ಮಾದರಿಯ ವಿಜಯ ಇದಾಗಿದೆ” ಎಂದು ಹೇಳಿದರು. ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆ ಒಂಬತ್ತು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬೆಳಗ್ಗೆ 9 ಗಂಟೆಗೆ ಮತ ಎಣಿಕೆ ಆರಂಭವಾಯಿತು.  ಡಿಸೆಂಬರ್ 24 ರಂದು ನಡೆದ ಮತದಾನದ ಶೇಕಡಾವಾರು ಈ ವರ್ಷ ಶೇಕಡಾ 60.45 ರಷ್ಟು ಆಗಿತ್ತು. ಸಾಂಪ್ರದಾಯಿಕವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಪುರಸಭೆ ಚುನಾವಣೆ – ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿತ್ತು. ಆದರೆ ಈ ಬಾರಿ ಆಮ್ ಆದ್ಮಿ ಪಕ್ಷದ ಪ್ರವೇಶದಿಂದ ತ್ರಿಕೋನ ಸ್ಪರ್ಧೆ ನಡೆದಿತ್ತು . ಎಎಪಿಯ ಗೆಲುವು ಪಂಜಾಬ್‌ನಲ್ಲಿ ಬರಲಿರುವ ಬದಲಾವಣೆಯ ಸಂಕೇತ: ಕೇಜ್ರಿವಾಲ್ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ಆಪ್ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೋಮವಾರ, ‘ಆಮ್ ಆದ್ಮಿ ಪಕ್ಷದ ಈ ಗೆಲುವು ಪಂಜಾಬ್‌ನಲ್ಲಿ ಮುಂಬರುವ ಬದಲಾವಣೆಯ ಸಂಕೇತವಾಗಿದೆ’ ಎಂದು ಹೇಳಿದರು. ಇಂದು ರಾಜ್ಯದ ಜನತೆ ‘ಭ್ರಷ್ಟ ರಾಜಕಾರಣವನ್ನು ತಿರಸ್ಕರಿಸಿ ಎಎಪಿಯ ಪ್ರಾಮಾಣಿಕ ರಾಜಕಾರಣವನ್ನು ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು. ಕೇಜ್ರಿವಾಲ್ ಅವರು ವಿಜೇತ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು.

ಕೇಜ್ರಿವಾಲ್ ಅವರ ಆಡಳಿತ ಮಾದರಿಗೆ ಸಿಕ್ಕ ಗೆಲುವು ಎಂದ ರಾಘವ್ ಚಡ್ಡಾ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಚ್ಚರಿಯ  ಮುನ್ನಡೆ ಸಾಧಿಸುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಇದು ಕೇಜ್ರಿವಾಲ್ ಅವರ ಆಡಳಿತ ಮಾದರಿಗೆ ಸಿಕ್ಕ ಗೆಲುವು ಎಂದು ಹೇಳಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಚಡ್ಡಾ , “ಕಳೆದ 12-13 ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸ್ಥಾನಗಳನ್ನು ವಶಪಡಿಸಿಕೊಂಡಿಸಿತ್ತು. ಆದರೆ, ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿದ್ದಾರೆ.

ಚಡ್ಡಾ ಅವರು ಪ್ರಸ್ತುತ ಚಂಡೀಗಢದಲ್ಲಿ ಎಎಪಿ ನಾಯಕರೊಂದಿಗೆ ಇದ್ದಾರೆ ಮತ್ತು ಎಎಪಿ ಚುನಾವಣೆಯಲ್ಲಿ ಮುನ್ನಡೆ ಸಾಧಿಸುತ್ತಿರುವುದರಿಂದ ಪ್ರಸ್ತುತ ಪ್ರವೃತ್ತಿಗಳಿಂದ ಉತ್ಸುಕನಾಗಿದ್ದೇನೆ ಎಂದು ಹೇಳಿದರು. ಬಿಜೆಪಿಯ ಕೇಂದ್ರವೆಂದು ಪರಿಗಣಿಸಲಾದ ಕ್ಷೇತ್ರಗಳಲ್ಲಿ ಪಕ್ಷ ಮುನ್ನಡೆ ಸಾಧಿಸಿರುವ ಕುರಿತು ಮಾತನಾಡಿದ ಅವರು, ಕೇಜ್ರಿವಾಲ್ ಮಾದರಿ ಆಡಳಿತಕ್ಕೆ ಇದು ಸ್ಪಷ್ಟ ಗೆಲುವು. ಚಂಡೀಗಢದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಮತ್ತು ಪಂಜಾಬ್‌ನ ಜನರು ಸಹ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ:  ರಾತ್ರಿ ಕರ್ಫ್ಯೂ ವಿಧಿಸಿ ಬೆಳಗ್ಗೆ ರ್ಯಾಲಿ ನಡೆಸುತ್ತಿರುವ ಯೋಗಿ ಆದಿತ್ಯನಾಥ ವಿರುದ್ಧ ವರುಣ್ ಗಾಂಧಿ ವಾಗ್ದಾಳಿ