Haryana Exit Poll 2024: ಹರ್ಯಾಣದಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ: ಎಕ್ಸಿಟ್ ಪೋಲ್

|

Updated on: Oct 05, 2024 | 7:58 PM

ಹರ್ಯಾಣದ 90 ಸ್ಥಾನಗಳಿಗೆ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಬಹುಮತಕ್ಕೆ 46 ಸ್ಥಾನಗಳು ಬೇಕಿದೆ. ಹರ್ಯಾಣ ವಿಧಾನಸಭಾ ಚುನಾವಣೆಯ ಮತದಾನ ಸಂಜೆ 6 ಗಂಟೆ ಸುಮಾರಿಗೆ ಮುಕ್ತಾಯವಾದ ಕೆಲವೇ ಹೊತ್ತಿನಲ್ಲಿ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗಿದೆ.

Haryana Exit Poll 2024: ಹರ್ಯಾಣದಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ: ಎಕ್ಸಿಟ್ ಪೋಲ್
ಕಾಂಗ್ರೆಸ್
Follow us on

ದೆಹಲಿ ಅಕ್ಟೋಬರ್ 05: ಶನಿವಾರ ಬಿಡುಗಡೆಯಾದ ಆರಂಭಿಕ ಎಕ್ಸಿಟ್ ಪೋಲ್‌ಗಳು ಹರ್ಯಾಣದಲ್ಲಿ (Haryana) ಕಾಂಗ್ರೆಸ್ ಪಕ್ಷವು (Congress)O ಸುಮಾರು 57 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಅದೇ ವೇಳೆ ಬಿಜೆಪಿ 14 ಸ್ಥಾನಗಳನ್ನು, ಐಎನ್‌ಎಲ್‌ಡಿ 4 ಸ್ಥಾನಗಳನ್ನು ಮತ್ತು ಇತರರು ಸುಮಾರು 15 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಹೇಳಿವೆ. ಮ್ಯಾಟ್ರಿಜ್ ಪ್ರಕಾರ, ಕಾಂಗ್ರೆಸ್ 55-62, ಬಿಜೆಪಿ 18-24, ಐಎನ್‌ಎಲ್‌ಡಿ 3-6, ಜೆಜೆಪಿ 0-3 ಮತ್ತು ಇತರರು 2-5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಅದೇ ವೇಳೆ ಕಾಂಗ್ರೆಸ್ 49-61 ಸ್ಥಾನ, ಬಿಜೆಪಿ 20-32, ಐಎನ್‌ಎಲ್‌ಡಿ 2-3, ಜೆಜೆಪಿ 0-1 ಮತ್ತು ಇತರರು 3-5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಪೀಪಲ್ಸ್ ಪಲ್ಸ್ ಭವಿಷ್ಯ ನುಡಿದಿದೆ.

ಕಾಂಗ್ರೆಸ್ 50-64, ಬಿಜೆಪಿ 22-32 ಮತ್ತು ಇತರರು 2-8 ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಧ್ರುವ್ ರಿಸರ್ಚ್ ಭವಿಷ್ಯ ನುಡಿದಿದೆ. ದೈನಿಕ್ ಭಾಸ್ಕರ್, ಕಾಂಗ್ರೆಸ್ 44-54, ಬಿಜೆಪಿ 15-29, ಜೆಜೆಪಿ 0-1, ಐಎನ್‌ಎಲ್‌ಡಿ 1-5, ಎಎಪಿ 0-1 ಮತ್ತು ಇತರ 4-9 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.

ಚುನಾವಣಾ ಸಮೀಕ್ಷೆ ಬಿಜೆಪಿ ಕಾಂಗ್ರೆಸ್ ಜೆಜೆಪಿ ಐಎನ್‌ಎಲ್‌ಡಿ ಎಎಪಿ ಇತರೆ
ದೈನಿಕ್ ಭಾಸ್ಕರ್ 15-19 44-54 0-1 1-5 0-1 4-9
ಧ್ರುವ್ ರಿಸರ್ಚ್ 22-32 50-64 0 0 0 2-8
ಪಿ- ಮಾರ್ಕ್ಯು 27-35 51-61 0 3-6 0 0
ಪೀಪಲ್ಸ್ ಪಲ್ಸ್ 20-32 49-61 0-1 2-3 0 3-5
ರಿಪಬ್ಲಿಕ್ ಭಾರತ್- ಮ್ಯಾಟ್ರಿಜ್ 18-24 55-62 0-3 3-6 0 2-5
ಎನ್​​ಡಿಟಿವಿ ಪೋಲ್ ಆಫ್ ಪೋಲ್ಸ್ 25 55 1 3 0 6

ಹರ್ಯಾಣದ 90 ಸ್ಥಾನಗಳಿಗೆ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಬಹುಮತಕ್ಕೆ 46 ಸ್ಥಾನಗಳು ಬೇಕಿದೆ.
ಹರ್ಯಾಣ ವಿಧಾನಸಭಾ ಚುನಾವಣೆಯ ಮತದಾನ ಸಂಜೆ 6 ಗಂಟೆ ಸುಮಾರಿಗೆ ಮುಕ್ತಾಯವಾದ ಕೆಲವೇ ಹೊತ್ತಿನಲ್ಲಿ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 8 ರಂದು ಚುನಾವಣಾ ಆಯೋಗವು ಅಧಿಕೃತವಾಗಿ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ರಾಜಕೀಯ ಭೂದೃಶ್ಯ ಹೇಗಿರಬಹುದು ಎಂಬುದಕ್ಕೆ ಎಕ್ಸಿಟ್ ಪೋಲ್ ಫಲಿತಾಂಶಗಳು ಸೂಚನೆ ನೀಡುತ್ತವೆ.

ಮತದಾರರಲ್ಲಿ ಸೈನಿಕರು, ಕುಸ್ತಿಪಟುಗಳು ಮತ್ತು ರೈತರು ಪ್ರಾಬಲ್ಯ ಹೊಂದಿರುವ ಹರ್ಯಾಣ ಲೋಕಸಭೆ ಚುನಾವಣೆಯ ನಂತರ ಚುನಾವಣೆಗೆ ಹೋಗುವ ಮೊದಲ ರಾಜ್ಯವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಲಾ ಐದು ಸ್ಥಾನಗಳನ್ನು ಗೆದ್ದಿವೆ.

2 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹತೆ ಹೊಂದಿದ್ದು, ಹರ್ಯಾಣ ಚುನಾವಣೆಯು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ವಿನೇಶ್ ಫೋಗಟ್, JJP ಯ ದುಶ್ಯಂತ್ ಚೌತಾಲಾ ಮತ್ತು 1,027 ಇತರ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

ಇದನ್ನೂ ಓದಿ: ಮತ ಎಣಿಕೆಗೂ ಮೊದಲೇ ಜಮ್ಮು ಕಾಶ್ಮೀರದಲ್ಲಿ 5 ಶಾಸಕರ ನಾಮನಿರ್ದೇಶನ; ಪ್ರತಿಪಕ್ಷಗಳ ಆಕ್ರೋಶ

ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ, ಆದರೆ ಕಾಂಗ್ರೆಸ್ 10 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ.

ಹರ್ಯಾಣ ಚುನಾವಣೆಯಲ್ಲಿ 101 ಮಹಿಳೆಯರು ಮತ್ತು 464 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,031 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ, ಪ್ರಮುಖ ಸ್ಪರ್ಧಾತ್ಮಕ ಪಕ್ಷಗಳೆಂದರೆ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಐಎನ್‌ಎಲ್‌ಡಿ-ಬಿಎಸ್‌ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷದ ಮೈತ್ರಿಗಳು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 pm, Sat, 5 October 24