ದೆಹಲಿ ಅಕ್ಟೋಬರ್ 27: ಹರ್ಯಾಣದ (Haryana) 19 ವರ್ಷದ ಯುವಕನ ವಿರುದ್ಧ ಇಂಟರ್‌ಪೋಲ್ ಕ್ರಿಮಿನಲ್ ಸಂಚು ಮತ್ತು ಹಲವು ಕೊಲೆ ಯತ್ನದ ಆರೋಪ ಹೊರಿಸಿದೆ. ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ ಯೋಗೇಶ್ ಕಾದಿಯನ್ (Yogesh Kadian) ಅವರು ಪ್ರತಿಸ್ಪರ್ಧಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ನ್ನು ಮುಗಿಸುವ ಆರೋಪವನ್ನು ಎದುರಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಯುಎಸ್‌ನಲ್ಲಿರುವ ಬಬಿನ್ಹಾ ಗ್ಯಾಂಗ್‌ನ ಭಾಗವಾಗಿರುವ ಕಾದಿಯನ್‌ನನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲಿ ಪರಿಣಿತ ಎಂದು ಪರಿಗಣಿಸಲಾಗಿದೆ. ಆತ 17 ವರ್ಷದವನಾಗಿದ್ದಾಗ ನಕಲಿ ಪಾಸ್‌ಪೋರ್ಟ್‌ನಲ್ಲಿ ಬಳಸಿ ಅಮೆರಿಕಕ್ಕೆ ಪರಾರಿಯಾಗಿದ್ದ.
ಇಂಟರ್‌ಪೋಲ್ ತನ್ನ ನೋಟಿಸ್‌ನಲ್ಲಿ “ಕ್ರಿಮಿನಲ್ ಪಿತೂರಿ, ಕೊಲೆಯ ಯತ್ನ, ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು ಮತ್ತು ನಿಷೇಧಿತ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಸ್ವಾಧೀನ ಮತ್ತು ಬಳಕೆ” ಆರೋಪ ಮಾಡಿದೆ. ಮೂಲಗಳ ಪ್ರಕಾರ ಈತ ಬಾಂಬಿಹಾ ಗ್ಯಾಂಗ್ ಮತ್ತು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ. ಖಲಿಸ್ತಾನಿ ಸಂಪರ್ಕದ ತನಿಖೆಗಾಗಿ, ಅವರ ಮನೆ ಮತ್ತು ಭಾರತದಲ್ಲಿ ತಿಳಿದಿರುವ ಅಡಗುತಾಣಗಳ ಮೇಲೆ ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಳಿ ನಡೆಸಿತ್ತು.
ಈ ಗ್ಯಾಂಗ್‌ಸ್ಟರ್ ಬಗ್ಗೆ ಮಾಹಿತಿ ನೀಡಿದವರಿಗೆ ₹ 1.5 ಲಕ್ಷ ಬಹುಮಾನವನ್ನೂ ನೀಡಲಾಗಿದ್ದು, ಇಂಟರ್‌ಪೋಲ್ ಕಾದಿಯಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ರೆಡ್ ಕಾರ್ನರ್ ನೋಟಿಸ್ ಎನ್ನುವುದು ಇಂಟರ್‌ಪೋಲ್‌ನ ಸದಸ್ಯ ರಾಷ್ಟ್ರಗಳ ಕಾನೂನು ಜಾರಿ ಅಧಿಕಾರಿಗಳಿಗೆ ಹಸ್ತಾಂತರ, ಶರಣಾಗತಿ ಅಥವಾ ಅಂತಹುದೇ ಕಾನೂನು ಪ್ರಕ್ರಿಯೆ ನಡೆಯುವವರೆಗೆ ವ್ಯಕ್ತಿಯನ್ನು ಹುಡುಕಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ವಿನಂತಿಯಾಗಿದೆ.
ಈ ಹಿಂದೆ, ವಿದೇಶದಲ್ಲಿ ನೆಲೆಸಿದ್ದಾನೆ ಎಂದು ನಂಬಲಾದ ಗ್ಯಾಂಗ್‌ಸ್ಟರ್ ಹಿಮಾಂಶು ಅಲಿಯಾಸ್ ಭಾವು ವಿರುದ್ಧ ಇಂಟರ್‌ಪೋಲ್ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ರೆಡ್ ನೋಟಿಸ್ ಜಾರಿ ಮಾಡಿತ್ತು. ಅವರು ಪ್ರಸ್ತುತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ತೊಡೆದುಹಾಕಲು ಮತ್ತು ಯುಎಸ್ ಮತ್ತು ಕೆನಡಾದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಪ್ರಸ್ತುತ ಅಹಮದಾಬಾದ್ ಜೈಲಿನಲ್ಲಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಬಿಷ್ಣೋಯ್ ಕೂಡ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಪ್ರಶ್ನೆಗಾಗಿ ನಗದು: ನೈತಿಕ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದ ಮಹುವಾ ಮೊಯಿತ್ರಾ
ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖ್ದೂಲ್ ಸಿಂಗ್ ಹತ್ಯೆಯ ಹೊಣೆಗಾರಿಕೆಯನ್ನು ಅವರು ಇತ್ತೀಚೆಗೆ ವಹಿಸಿಕೊಂಡಾಗ ಮತ್ತೊಮ್ಮೆ ಸುದ್ದಿ ಮಾಡಿದರು. ಸುಖ ದುನೆಕೆ ಎಂದೂ ಕರೆಯಲ್ಪಡುವ ಸುಖ್ದೂಲ್, ಕೆನಡಾದಲ್ಲಿ ಗುಂಪು ಹಿಂಸಾಚಾರದಲ್ಲಿ ಹತ್ಯೆಯಾಗಿದ್ದ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ