ಪ್ರಧಾನಿ ಮೋದಿ ಬಗ್ಗೆ ಕೆಟ್ಟ ಪದ ಬಳಸಿದ ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್

ಹರ್ಯಾಣ  ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನ್ ಅವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಅವರ ಭಾಷೆ 'ಮೊಹಬ್ಬತ್ ಕಿ ದುಕಾನ್' ಅನ್ನು ತೋರಿಸುತ್ತದೆಯೇ ಎಂದು ಕೇಳಿದ್ದಾರೆ. ಹರ್ಯಾಣದ ಕಾಂಗ್ರೆಸ್ ಅಧ್ಯಕ್ಷ ಅವರು ಪ್ರಧಾನಿ ಮತ್ತು ಸಿಎಂಗೆ ಅತ್ಯಂತ ಅಕ್ಷಮ್ಯ, ಕೆಟ್ಟ ಭಾಷೆಯನ್ನು ಬಳಸಿದ್ದಾರೆ. ಕಾಂಗ್ರೆಸ್ ಅವರನ್ನು ವಜಾ ಮಾಡುತ್ತದೆಯೇ? ಇದು ಮೊಹಬ್ಬತ್ ಕಿ ದುಕಾನ್ ಆಗಿದೆಯೇ? ಇಲ್ಲ ಇದು ಕಾಂಗ್ರೆಸ್ ಕೆ ಗಾಲಿ ಗಲೌಜ್ ಕಾ ಸಾಮಾನ್ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಕೆಟ್ಟ ಪದ ಬಳಸಿದ ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್
ಉದಯ್ ಭಾನ್
Follow us
|

Updated on: Sep 23, 2023 | 7:02 PM

ದೆಹಲಿ ಸೆಪ್ಟೆಂಬರ್ 23: ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ (Danish Ali) ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ (Ramesh Bidhuri) ವಾಗ್ದಾಳಿ ನಡೆಸಿದ ಪ್ರಕರಣದ ಬೆನ್ನಲ್ಲೇ ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರು ಪ್ರಧಾನಿ ಮೋದಿ (PM Modi) ಮತ್ತು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ ಬಗ್ಗೆ  ಕೆಟ್ಟ ಪದಗಳನ್ನು ಬಳಸಿದ ವಿಡಿಯೊ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಬಗ್ಗೆ ಪ್ರಶ್ನಿಸಿದ ಬಿಜೆಪಿ ನಾಯಕರು ಇದೇನಾ ಮೊಹಬ್ಬತ್ ಕಿ ದುಕಾನ್ ಎಂದು ಕೇಳಿದ್ದಾರೆ. ಉದಯ್ ಭಾನ್ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ. ಬಿಧುರಿ ಅವರನ್ನೂ ಪಕ್ಷದಿಂದ ವಜಾಗೊಳಿಸಬೇಕು ಎಂದು ಶುಕ್ರವಾರ ಕಾಂಗ್ರೆಸ್ ಒತ್ತಾಯಿಸಿತ್ತು.

ಉದಯ್ ಭಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ನಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. “ನಾನು ಹೇಳಿದ್ದು ತಪ್ಪೇ? ನಾನು ನಿಂದನೀಯ ಪದಗಳನ್ನು ಬಳಸಿದ್ದೇನೆಯೇ? ನಾನು ಸತ್ಯವನ್ನು ಮಾತ್ರ ಹೇಳಿದ್ದೇನೆ. ಏನಾದರೂ ತಪ್ಪು ಹೇಳಿದ್ದರೆ ಕ್ಷಮೆ ಕೇಳುತ್ತಿದ್ದೆ.ಬಿಜೆಪಿ ತಮ್ಮ ಸಂಸದರು ಮತ್ತು ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಈ ಹಿಂದೆ 20-30 ರ ್ಯಾಲಿಗಳಲ್ಲಿ ಇದೇ ರೀತಿ ಹೇಳಿದ್ದೇನೆ. ನಾನು ಏನಾದರೂ ತಪ್ಪು ಹೇಳಿದ್ದರೆ ಅವರು ನ್ಯಾಯಾಲಯಕ್ಕೆ ಹೋಗಬಹುದು ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಮುಸ್ಲಿಂ ಸಂಸದರನ್ನು ನಿಂದಿಸಿದ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸಂಸತ್ತನ್ನು ತ್ಯಜಿಸುವ ಬಗ್ಗೆ ಯೋಚಿಸಬಹುದು ಎಂದು ಬಿಎಸ್ ಪಿ ಸಂಸದರು ಹೇಳಿದ ನಂತರ ರಾಹುಲ್ ಗಾಂಧಿ ಶುಕ್ರವಾರ ಡ್ಯಾನಿಶ್ ಅವರನ್ನು ಭೇಟಿಯಾದರು. ‘ನಫ್ರತ್ ಕಿ ಬಜಾರ್ ಮೇ ಮೊಹಬ್ಬತ್ ಕಿ ದುಕಾನ್’ ಎಂದು ಡ್ಯಾನಿಶ್ ಭೇಟಿಯ ನಂತರ ರಾಹುಲ್ ಗಾಂಧಿ ಹೇಳಿದ್ದಾರೆ.

ಹರ್ಯಾಣ  ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನ್ ಅವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಅವರ ಭಾಷೆ ‘ಮೊಹಬ್ಬತ್ ಕಿ ದುಕಾನ್’ ಅನ್ನು ತೋರಿಸುತ್ತದೆಯೇ ಎಂದು ಕೇಳಿದ್ದಾರೆ. ಹರ್ಯಾಣದ ಕಾಂಗ್ರೆಸ್ ಅಧ್ಯಕ್ಷ ಅವರು ಪ್ರಧಾನಿ ಮತ್ತು ಸಿಎಂಗೆ ಅತ್ಯಂತ ಅಕ್ಷಮ್ಯ, ಕೆಟ್ಟ ಭಾಷೆಯನ್ನು ಬಳಸಿದ್ದಾರೆ. ಕಾಂಗ್ರೆಸ್ ಅವರನ್ನು ವಜಾ ಮಾಡುತ್ತದೆಯೇ? ಇದು ಮೊಹಬ್ಬತ್ ಕಿ ದುಕಾನ್ ಆಗಿದೆಯೇ? ಇಲ್ಲ ಇದು ಕಾಂಗ್ರೆಸ್ ಕೆ ಗಾಲಿ ಗಲೌಜ್ ಕಾ ಸಾಮಾನ್ ಎಂದು ಹೇಳಿದ್ದಾರೆ.

“ಮೋದಿ ಸಮಾಜವನ್ನು ನಿಂದಿಸುವುದರಿಂದ ಹಿಡಿದು ಇಲ್ಲಿಯವರೆಗೆ, ರಾಹುಲ್ ಗಾಂಧಿಯವರು ಈ ಭಾಷೆ ಮತ್ತು ನಡವಳಿಕೆಯನ್ನು ಮಾತ್ರ ಪ್ರೋತ್ಸಾಹಿಸಿದ್ದಾರೆ! ರಾಹುಲ್ ಗಾಂಧಿ, ಖರ್ಗೆ ಜಿ ಮತ್ತು ಸೋನಿಯಾ ಜಿ ಅವರು ಸಹ ಕೆಟ್ಟ ನಿಂದನೆಗಳನ್ನು ಬಳಸಿದ್ದಾರೆ. ಜನರನ್ನು ಕೂಡಾ ಕಾಂಗ್ರೆಸ್ ರಾಕ್ಷಸ್ ಎಂದು ಹೇಳಿದ್ದು ಇದು ಅವರ ನಿಜ ಸ್ವಭಾವವನ್ನು ತೋರಿಸುತ್ತದೆ ಎಂದು ಪೂನಾವಾಲಾ ಬರೆದಿದ್ದಾರೆ.

ಇದನ್ನೂ ಓದಿ:  ಬಿಎಸ್​​ಪಿ ಸಂಸದ ಡ್ಯಾನಿಶ್ ಅಲಿಯನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಡ್ಯಾನಿಶ್ ಅಲಿ ಕೂಡ ಲೋಕಸಭೆಯಲ್ಲಿ ಅಸಭ್ಯ ಹೇಳಿಕೆ ನೀಡಿದ್ದಾರೆ: ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಸ್ಪೀಕರ್ ಅವರ ಸಮ್ಮುಖದಲ್ಲಿ ಸದನದೊಳಗೆ ಏನಾಯಿತು ಎಂಬುದನ್ನು ಖಂಡಿಸಿ ಹಲವಾರು ಸಂಸದರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದರಿಂದ ಡ್ಯಾನಿಶ್ ಅಲಿ ವಿರುದ್ಧ ಬಿಧುರಿ ಅವರ ಪದಗಳ ಆಯ್ಕೆ ಪ್ರಮುಖ ರಾಜಕೀಯ ಗದ್ದಲವಾಯಿತು. ಓಂ ಬಿರ್ಲಾ ಅವರು ಬಿಧುರಿಗೆ ಎಚ್ಚರಿಕೆ ನೀಡಿ ಆ ಪದಗಳನ್ನು ಕಡತದಿಂದ ತೆಗೆದು ಹಾಕಿದರೂ ಅವರು ವಿಡಿಯೊ ಈಗಾಗಲೇ ಪ್ರಸಾರವಾಗಿರುವುದರಿಂದ ಪದಗಳನ್ನು ತೆಗೆದುಹಾಕುವುದಷ್ಟೇ ಸಾಲದು ಎಂದು ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ಚೌಧರಿ ಹೇಳಿದ್ದಾರೆ.

ಶುಕ್ರವಾರ ಬಿಜೆಪಿ ಬಿಧುರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆದರೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಇಡೀ ಘಟನೆಗೆ ಟ್ವಿಸ್ಟ್ ನೀಡಿದ್ದಾರೆ. ಡ್ಯಾನಿಶ್ ಅಲಿ ಅವರ ಅಸಭ್ಯ ಹೇಳಿಕೆ ಮತ್ತು ನಡವಳಿಕೆಯನ್ನು ಲೋಕಸಭೆ ಸ್ಪೀಕರ್ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. “ಲೋಕಸಭೆಯ ನಿಯಮಗಳ ಪ್ರಕಾರ, ತನಗೆ ನಿಗದಿಪಡಿಸಿದ ಸಮಯದಲ್ಲಿ ಇನ್ನೊಬ್ಬ ಸಂಸದರನ್ನು ಅಡ್ಡಿಪಡಿಸುವುದು, ಕುಳಿತುಕೊಂಡು ಮಾತನಾಡುವುದು ಮತ್ತು ರನ್ನಿಂಗ್ ಕಾಮೆಂಟರಿ ನೀಡುವುದು ಸಹ ಶಿಕ್ಷೆಗೆ ಅರ್ಹವಾಗಿದೆ” ಎಂದು ದುಬೆ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿದ್ದು ಕಹಿ ಸತ್ಯ: ಬಿಎಸ್​​ಪಿ ನಾಯಕಿ ಮಾಯಾವತಿ

ಉದಯ್ ಭಾನ್ ಕೋಪದಿಂದ ಮಾತನಾಡಲಿಲ್ಲ, ನಗುತ್ತಿದ್ದರು: ಬಿಜೆಪಿಯ ಸುಧಾಂಶು ತ್ರಿವೇದಿ

ಪ್ರಧಾನಿಗೆ ಅವರು ಬಳಸಿರುವ ಭಾಷೆ ದೇಶದ ರಾಜಕೀಯವನ್ನು ವ್ಯಾಖ್ಯಾನಿಸುತ್ತದ. ಅದು ಅತ್ಯಂತ ಕೀಳುಮಟ್ಟದ್ದು ಅದೂ ಕಳೆದ 9.5 ವರ್ಷಗಳಲ್ಲಿ ಒಂದೇ ಒಂದು ರಜೆ ತೆಗೆದುಕೊಳ್ಳದ ಪ್ರಧಾನಿಗೆ. ಕಾಂಗ್ರೆಸ್ ಈ ಹಿಂದೆ ಪ್ರಧಾನಿ ಮೋದಿಯವರಿಗೆ, ಅವರ ದಿವಂಗತ ತಂದೆ, ತಾಯಿ, ಅವರ ಹಿಂದಿನ ವೃತ್ತಿ, ಅವರ ಜಾತಿ ಹೇಗೆ ಏನೇನು ಹೇಳಿರಲಿಲ್ಲ. ಆದರೆ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷರು ಇಂದು ಬೀದಿಯ ಭಾಷೆ ಬಳಸಿದ್ದಾರೆ.ಅವರು ನಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅವರು ಕೋಪದಿಂದ ಮಾತನಾಡಿಲ್ಲ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ