AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾಷಾ ಸಂವಹನಕ್ಕೆ G20 ಆ್ಯಪ್; ಟರ್ಕಿಯ ಪ್ರಥಮ ಮಹಿಳೆ ಜತೆ ಕೆಲಸ ಮಾಡಿದ ದೆಹಲಿ ಎಸ್ಐ ಅನುಭವದ ಮಾತು

G20 Summit: ಜಿ 20 ಶೃಂಗಸಭೆ ವೇಳೆ ನನ್ನ ಕರ್ತವ್ಯ ಟರ್ಕಿ ದೇಶದ ಪ್ರಥಮ ಮಹಿಳೆ ಎಮಿನಿ ಎಡೋಗನ್ ಅವರ ಜತೆಗೆ ಆಗಿತ್ತು, ಅವರು ದೆಹಲಿಯಲ್ಲಿ ತಂಗಿದ್ದಾಗ ನಾವು ದೆಹಲಿ ಯಲ್ಲಿನ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಆಗ ಮೇಡಂ ಅವರು ಒಂದು ಬಟ್ಟೆಯನ್ನು ಮುಟ್ಟಿ ಈ ಬಟ್ಟೆ ಯಾವುದು? ಅದನ್ನು ಎಲ್ಲಿ ಎಲ್ಲ ಬಳಸಬಹುದು?ಎಂದ ಕೇಳಿದರು. ನಾನು ಜಿ20 ಆ್ಯಪ್ ನೆರವಿನಿಂದ ಭಾಷೆ ಅನುವಾದ ಮಾಡಿ ಅವರ ಜತೆ ಸಂವಹನ ನಡೆಸಿದೆ ಅಂತಾರೆ ದೆಹಲಿ ಎಸ್ಐ.

TV9 Web
| Edited By: |

Updated on: Sep 23, 2023 | 8:04 PM

Share

ದೆಹಲಿ ಸೆಪ್ಟೆಂಬರ್ 23: ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ (G20 Summit) ಭಾಗವಹಿಸಿದ ವಿದೇಶಿ ಗಣ್ಯರೊಂದಿಗೆ ಸುಲಭವಾಗಿ ಸಂವಹನ ಮಾಡಲು, ಸ್ಥಳದ ವಿವರಗಳನ್ನು  ತಿಳಿದುಕೊಳ್ಳಲು ಮತ್ತು ಜಿ20ಗೆ ಸಂಬಂಧಿಸಿದ ವಿಷಯಗಳನ್ನು ಅರಿಯಲು ನೆರವಾಗುವಂತೆ ಜಿ20 ಆ್ಯಪ್​​ನ್ನು (G20 App)  ಬಿಡುಗಡೆ ಮಾಡಲಾಗಿತ್ತು. ಭಾಷಾ ಸಂವಹನಕ್ಕಾಗಿ ಈಆ್ಯಪ್ ನ್ನು ಹೇಗೆ ಬಳಸಿದೆವು ಎಂಬುದರ ಬಗ್ಗೆ ದೆಹಲಿಯ ಸಬ್ ಇನ್ಸ್​​ಪೆಕ್ಟರ್ ಪ್ರಧಾನಿ ನರೇಂದ್ರ ಮೋದಿ (Narendra Modi) ಜತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ರೀತಿ ತಮ್ಮ ಅನುಭವ ಹಂಚಿಕೊಂಡ ಪೊಲೀಸ್ ಎಸ್ಐ ಹೆಸರು ಪಿಂಕಿ ರಾಣಿ. ಆಕೆಯ ಮಾತುಗಳಲ್ಲೇ ಅವರ ಅನುಭವಗಳನ್ನು ಕೇಳೋಣ.

ನನ್ನ ಹೆಸರು ಪಿಂಕಿ ರಾಣಿ. ನಾನು ಹರ್ಯಾಣದ ಒಂದು ಪುಟ್ಟ ಹಳ್ಳಿ ಗೋಚಿ ಮೂಲದವಳು. ಈಗ ದೆಹಲಿ ಪೊಲೀಸ್ ಮುಖರ್ಜಿ ನಗರ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದೇನೆ. ಜಿ 20 ಶೃಂಗಸಭೆ ವೇಳೆ ನನ್ನ ಕರ್ತವ್ಯ ಟರ್ಕಿ ದೇಶದ ಪ್ರಥಮ ಮಹಿಳೆ ಎಮಿನಿ ಎಡೋಗನ್ ಅವರ ಜತೆಗೆ ಆಗಿತ್ತು.  ಅವರು ದೆಹಲಿಯಲ್ಲಿ ತಂಗಿದ್ದಾಗ ನಾವು ದೆಹಲಿ ಯಲ್ಲಿನ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಆಗ ಮೇಡಂ ಅವರು ಒಂದು ಬಟ್ಟೆಯನ್ನು ಮುಟ್ಟಿ ಈ ಬಟ್ಟೆ ಯಾವುದು? ಅದನ್ನು ಎಲ್ಲಿ ಎಲ್ಲ ಬಳಸಬಹುದು? ಎಂದ ಕೇಳಿದರು.

ಆಕೆ ಕೇಳಿದ್ದು ಟರ್ಕಿ ಭಾಷೆಯಲ್ಲಿ. ಸರ್, ನನಗೆ ಟರ್ಕಿ ಭಾಷೆ ಬರುವುದಿಲ್ಲ , ಮೇಡಂಗೆ ಹಿಂದಿ ಭಾಷೆ ಬರುವುದಿಲ್ಲ. ಆಗ ನಾನು ಜಿ 20 ಆ್ಯಪ್ ಸಹಾಯ ಪಡೆದೆ. ನಾವು ಅದನ್ನು ಬಳಸಿಕೊಂಡು ಭಾಷೆ ಅನುವಾದ ಮಾಡಿದೆವು. ಆಮೇಲೆ ಅಂಗಡಿಯವನಲ್ಲಿ ಮೇಡಂಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಸಿದೆವು.

ಆಕೆಯ ಅನುಭವದ ಮಾತುಗಳನ್ನು ಕೇಳಿ ಖುಷಿಪಟ್ಟ ಮೋದಿ, ನಿಮ್ಮ ಆ್ಯಪ್ ಅನುವಾದದಿಂದ ಅವರು ತೃಪ್ತರಾಗಿದ್ದರೆ? ಆ ಆ್ಯಪ್ ಅನುವಾದದಿಂದ ಅವರಿಗೆ ಅರ್ಥ ವಾಗುತ್ತಿತ್ತೇ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಜಿ20ಗೆ ಹೇಗೆ ನಡೆದಿತ್ತು ತಯಾರಿ? ಎಡಬದಿಯ ಸ್ಟೇರಿಂಗ್​​ನಲ್ಲಿ ಚಾಲನೆ ಬಗ್ಗೆ ಮೋದಿ ಜತೆ ಅನುಭವ ಹಂಚಿಕೊಂಡ ಸಿಆರ್​​ಪಿಎಫ್ ಚಾಲಕ

ಅದಕ್ಕೆ ಉತ್ತರಿಸಿದ ಪಿಂಕಿ, ಮೇಡಂ ಏನು ಕೇಳುತ್ತಿದ್ದರೋ ನಾನು ಅದರ ಅನುವಾದ ಆ್ಯಪ್​​ನಿಂದ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ನಿಮಗೆ ಇದಕ್ಕಿಂತ ಮೊದಲು ಯಾವುದಾದರೂ ವಿದೇಶಿಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತೇ? ಎಂದು ಪ್ರಧಾನಿ ಮೋದಿ ಕೇಳಿದಾಗ,  ಇಲ್ಲ ಸರ್, ಇದು ನನ್ನ ಮೊದಲ ಅನುಭವ. ನಾನು ಅವರನ್ನು ತುಂಬಾ ಪ್ರಭಾವಿತಗೊಳಿಸಿದೆ ಎಂದು ಹೇಳಿದ್ದಾರೆ.

ಅಭಿನಂದನೆಗಳು ನಿಮಗೆ. ನೀವು ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿದ್ದೀರಿ. ನಮ್ಮಲ್ಲಿರುವ ತಂತ್ರಜ್ಞಾನ ಸಾಮರ್ಥ್ಯದಿಂದ ನಾವು ಜಗತ್ತಿನ ಮೇಲೆಪ್ರಭಾವ ಬೀರಬಹುದು ಎಂದು ಮೋದಿ ಖುಷಿ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ