ಜಿ20 ಶೃಂಗಸಭೆ ಯಶಸ್ಸಿನ ಬಗ್ಗೆ ಜಿಮ್ ಓ’ನೀಲ್ ಮೆಚ್ಚುಗೆ; ಮೋದಿ ಗ್ಲೋಬಲ್ ಸೌತ್ ಚಾಂಪಿಯನ್ ಎಂದ ಬ್ರಿಟನ್ ಅರ್ಥಶಾಸ್ತ್ರಜ್ಞ

ಜಾಗತಿಕ ಸಮಸ್ಯೆಗಳಿಗೆ ನಿಜವಾದ ಪರಿಹಾರಗಳನ್ನು ನೀಡುವ ವ್ಯಾಪ್ತಿ ಮತ್ತು ನ್ಯಾಯಸಮ್ಮತತೆಯನ್ನು ಹೊಂದಿರುವ ಏಕೈಕ ಒಕ್ಕೂಟ ಜಿ20 ಎಂಬುದನ್ನು ನವದೆಹಲಿಯಲ್ಲಿ ಒಕ್ಕೂಟದ ನಾಯಕರು ಮಾಡಿರುವ ಘೋಷಣೆಯು ಮತ್ತಷ್ಟು ದೃಢೀಕರಿಸಿದೆ. ಈ ಮಟ್ಟಕ್ಕೆ ಸವಾಲುಗಳನ್ನು ನಿಭಾಯಿಸುವ ವಿಶ್ವಾಸಾರ್ಹತೆ ಅಥವಾ ಸಾಮರ್ಥ್ಯವನ್ನು ಬ್ರಿಕ್ಸ್ ಅಥವಾ ಜಿ7 ಒಕ್ಕೂಟ ಕೂಡ ಹೊಂದಿಲ್ಲ ಎಂದು ಬ್ರಿಟನ್ ಅರ್ಥಶಾಸ್ತ್ರಜ್ಞ ಓ'ನೀಲ್ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಜಿ20 ಶೃಂಗಸಭೆ ಯಶಸ್ಸಿನ ಬಗ್ಗೆ ಜಿಮ್ ಓ'ನೀಲ್ ಮೆಚ್ಚುಗೆ; ಮೋದಿ ಗ್ಲೋಬಲ್ ಸೌತ್ ಚಾಂಪಿಯನ್ ಎಂದ ಬ್ರಿಟನ್ ಅರ್ಥಶಾಸ್ತ್ರಜ್ಞ
ಜಿ20 ಶೃಂಗಸಭೆ ಯಶಸ್ಸಿನ ಬಗ್ಗೆ ಜಿಮ್ ಓ'ನೀಲ್ ಮೆಚ್ಚುಗೆ; ಮೋದಿ ಗ್ಲೋಬಲ್ ಸೌತ್ ಚಾಂಪಿಯನ್ ಎಂದ ಬ್ರಿಟನ್ ಅರ್ಥಶಾಸ್ತ್ರಜ್ಞ
Follow us
Ganapathi Sharma
|

Updated on: Sep 14, 2023 | 11:04 PM

ನವದೆಹಲಿ, ಸೆಪ್ಟೆಂಬರ್ 14: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ(G20 Summit) ಯಶಸ್ಸಿನ ಬಗ್ಗೆ ಬ್ರಿಟನ್ ಅರ್ಥಶಾಸ್ತ್ರಜ್ಞ, ಬ್ರಿಕ್ ಒಕ್ಕೂಟ (ಈಗ ಬ್ರಿಕ್ಸ್ ಆಗಿದೆ) ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜಿಮ್ ಓ’ನೀಲ್ (Jim O’Neill) ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪ್ರಾಜೆಕ್ಟ್ ಸಿಂಡಿಕೇಟ್’ ತಾಣದಲ್ಲಿ ಲೇಖನವೊಂದನ್ನು ಬರೆದಿರುವ ಅವರು, ಜಿ20 ಶೃಂಗಸಭೆಯ ಯಶಸ್ಸಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಸಮಸ್ಯೆಗಳಿಗೆ ನಿಜವಾದ ಪರಿಹಾರಗಳನ್ನು ನೀಡುವ ವ್ಯಾಪ್ತಿ ಮತ್ತು ನ್ಯಾಯಸಮ್ಮತತೆಯನ್ನು ಹೊಂದಿರುವ ಏಕೈಕ ಒಕ್ಕೂಟ ಜಿ20 ಎಂಬುದನ್ನು ನವದೆಹಲಿಯಲ್ಲಿ ಒಕ್ಕೂಟದ ನಾಯಕರು ಮಾಡಿರುವ ಘೋಷಣೆಯು ಮತ್ತಷ್ಟು ದೃಢೀಕರಿಸಿದೆ. ಈ ಮಟ್ಟಕ್ಕೆ ಸವಾಲುಗಳನ್ನು ನಿಭಾಯಿಸುವ ವಿಶ್ವಾಸಾರ್ಹತೆ ಅಥವಾ ಸಾಮರ್ಥ್ಯವನ್ನು ಬ್ರಿಕ್ಸ್ ಅಥವಾ ಜಿ7 ಒಕ್ಕೂಟ ಕೂಡ ಹೊಂದಿಲ್ಲ ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಉಕ್ರೇನ್​ ಯುದ್ಧ, ಹವಾಮಾನ ಬದಲಾವಣೆ ಇತ್ಯಾದಿ ವಿಚಾರಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಆರು ಹೊಸ ಸದಸ್ಯರನ್ನು ಸೇರಿಸಿಕೊಂಡ ಹೊಸ ಬ್ರಿಕ್ಸ್‌ಗೆ ಭಾರತ-ಚೀನಾ ಒಗ್ಗಟ್ಟಿನ ಕೊರತೆಯು ಒಂದು ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಓ’ನೀಲ್, ಜಿ 0 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಅವರ ಅನುಪಸ್ಥಿತಿಯು ಉಭಯ ದೇಶಗಳ ನಡುವಿನ ವಿಭಜನೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. ಜಿ7 ಮತ್ತು ಹೊಸ ವಿಸ್ತರಿತ ಬ್ರಿಕ್ಸ್​​​ನಂತಹ ಪರ್ಯಾಯ ಗುಂಪುಗಳು ಜಿ20 ಜತೆ ಹೋಲಿಸಿದರೆ ಸೈಡ್‌ಶೋಗಳಂತೆ ಕಾಣುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿಯೇ ಸ್ಪಷ್ಟ ವಿಜೇತ, ದೂರದೃಷ್ಟಿಯ ರಾಜಕಾರಣಿ ಎಂದ ಓ’ನೀಲ್

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಧಿಕ್ಕರಿಸುವ ಸಲುವಾಗಿ ಷಿ ಜಿನ್​ಪಿಂಗ್ ಶೃಂಗಸಭೆಯಿಂದ ಹೊರಗುಳಿದಿದ್ದಾರೆ ಎಂದು ಹಲವರು ಊಹಿಸುತ್ತಾರೆ. ಯಾವುದೇ ಉದ್ದೇಶವಿರಲಿ, ಅವರ ನಿರ್ಧಾರವು ಇತ್ತೀಚಿನ ಬ್ರಿಕ್ಸ್ ಸಭೆಯ ಮಹತ್ವವನ್ನು ದುರ್ಬಲಗೊಳಿಸುವ ಪರಿಣಾಮವನ್ನು ಬೀರಿದೆ ಎಂದು ಓ’ನೀಲ್ ಹೇಳಿದ್ದಾರೆ. ಇದನ್ನು ಅನೇಕರು ಚೀನಾದ ವಿಜಯವೆಂದು ಪರಿಗಣಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಏನೇ ಇದ್ದರೂ, ಜಿ20 ಸಭೆಯ ಯಶಸ್ಸು ಮೋದಿಯನ್ನು ಈ ಶೃಂಗಸಭೆಯ ಋತುವಿನಲ್ಲಿ ಸ್ಪಷ್ಟ ವಿಜೇತರನ್ನಾಗಿ ಮಾಡಿದೆ. ಗ್ರಹಿಕೆಗಳು ಮುಖ್ಯ, ಮತ್ತು ಇದೀಗ ಅವರು ಷಿ ಜಿನ್​ಪಿಂಗ್​ಗಿಂತಲೂ ದೂರದೃಷ್ಟಿಯ ರಾಜಕಾರಣಿಯಂತೆ ಕಾಣುತ್ತಾರೆ ಎಂದು ಅವರು ಹೇಳಿದರು.

‘ಗ್ಲೋಬಲ್ ಸೌತ್​ನಲ್ಲಿ ಮೋದಿ ಚಾಂಪಿಯನ್’

ಸೆಪ್ಟೆಂಬರ್ 9-10 ರಂದು ನಡೆದ ಜಿ20 ಶೃಂಗಸಭೆಯು ಆಫ್ರಿಕನ್ ಒಕ್ಕೂಟವನ್ನು ತನ್ನೊಡನೆ ನಿರ್ಣಯ ತೆಗೆದುಕೊಳ್ಳುವ ಮೂಲಕ ಮತ್ತೊಂದು ಸೂಕ್ಷ್ಮ ಹೆಜ್ಜೆಯನ್ನು ಮುಂದಿಟ್ಟಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಗತಿಯು ಮೋದಿಗೆ ಸ್ಪಷ್ಟವಾದ ರಾಜತಾಂತ್ರಿಕ ವಿಜಯವನ್ನು ನೀಡುತ್ತದೆ. ಇದು ಗ್ಲೋಬಲ್ ಸೌತ್ ಚಾಂಪಿಯನ್ ಆಗಿ ಅವರ ಇಮೇಜ್ ಅನ್ನು ವೃದ್ಧಿಸಲು ಅನುವು ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡುವ ಮಟ್ಟಕ್ಕೆ ಜಿ20 ಶೃಂಗಸಭೆ ತಲುಪಿರಲಾರದು. ಆದರೆ ಸ್ಪಷ್ಟ ಸಂದೇಶ ಕಳುಹಿಸುವಷ್ಟು ದೃಢವಾಗಿ ಅಂತೂ ಇತ್ತು ಎಂದು ಅವರು ವಿಶ್ಲೇಷಿಸಿದ್ದಾರೆ. ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳನ್ನು ಉಲ್ಲಂಘಿಸಲು ಬಯಸುವ ಇತರರಿಗೆ ಸ್ಪಷ್ಟ ಸಂದೇಶವನ್ನಂತೂ ಜಿ20 ಶೃಂಗಸಭೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು

ಹವಾಮಾನ ಬದಲಾವಣೆ, ಪರಿಷ್ಕೃತ ವಿಶ್ವಬ್ಯಾಂಕ್‌ನ ಅಗತ್ಯತೆ, ಸಾಂಕ್ರಾಮಿಕ ರೋಗ ನಿಯಂತ್ರಣ, ಆರ್ಥಿಕ ಸ್ಥಿರತೆ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಇತರ ವಿಷಯಗಳಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ನವದೆಹಲಿಯ ಜಿ20 ಘೋಷಣೆಯು ಬಲವಾದ ಸಂಘಟಿತ ಪ್ರಯತ್ನದಲ್ಲಿ ಮೊದಲ ಹೆಜ್ಜೆಯಾಗಿರಬಹುದು. ಈ ಕಾರ್ಯಸೂಚಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಅನುಪಸ್ಥಿತಿಯಲ್ಲಿ ಒಪ್ಪಿಗೆ ನೀಡಲಾಗಿದೆ. ಭಾಗವಹಿಸಿದ ರಷ್ಯಾ ಮತ್ತು ಚೀನಾದ ಪ್ರತಿನಿಧಿಗಳು ಆಯಾ ಸರ್ಕಾರಗಳೊಂದಿಗೆ ಅದನ್ನು ಚರ್ಚಿಸದೆ ಯಾವುದಕ್ಕೂ ಸಹಿ ಹಾಕುತ್ತಿರಲಿಲ್ಲ ಎಂದೂ ಓ’ನೀಲ್ ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ