ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು

William Dalrymple on India Europe Trade: ಭಾರತ ಮತ್ತು ಯೂರೋಪ್ ನಡುವಿನ ವ್ಯಾಪಾರ ಸಂಬಂಧಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಭಾರತದಿಂದ ಯೂರೋಪ್​ಗೆ ಸಾಕಷ್ಟು ವಸ್ತುಗಳು ರಫ್ತಾಗುತ್ತಿದ್ದವು. ರೋಮ್​ನಿಂದ ವರ್ಷಕ್ಕೆ 250 ಹಡಗುಗಳು ಭಾರತಕ್ಕೆ ಬರುತ್ತಿದ್ದವು. ನೆಲದ ಮಾರ್ಗಕ್ಕಿಂತ ರೆಡ್ ಸೀ ಸಮುದ್ರ ಮಾರ್ಗವನ್ನು ಬಳಸಲಾಗುತ್ತಿತ್ತು ಎಂದು ಬ್ರಿಟನ್ ದೇಶದ ಇತಿಹಾಸಕಾರ ವಿಲಿಯಮ್ ಡ್ಯಾಲ್ರಿಂಪಲ್ ಹೇಳಿದ್ದಾರೆ.

ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು
ವಿಲಿಯಮ್ ಡ್ಯಾಲ್ರಿಂಪಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2023 | 1:13 PM

ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ನಡುವಿನ ಆರ್ಥಿಕ ಕಾರಿಡಾರ್ ಯೋಜನೆಯನ್ನು (IMEEC- India Middle East Europe Economic Corridor) ಕೆಲವರು ಲೇವಡಿ ಮಾಡುವುದಿದೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI) ಅಥವಾ ಸಿಲ್ಕ್ ರೋಡ್ ಪ್ರಾಜೆಕ್ಟ್ ಅನ್ನು ಐತಿಹಾಸಿಕವೆಂದು ಬಣ್ಣಿಸಿ ಮೆಚ್ಚುವವರಿದ್ದಾರೆ. ಆದರೆ, ಬ್ರಿಟನ್ ದೇಶದ ಇತಿಹಾಸಕಾರ ವಿಲಿಯಮ್ ಡ್ಯಾಲ್ರಿಂಪಲ್ (William Dalrymple) ಅವರು ಭಾರತದಿಂದ ಯೂರೋಪ್​ವರೆಗಿನ ವ್ಯಾಪಾರ ಮಾರ್ಗದ ಮಹತ್ವ ಎಷ್ಟೆಂಬುದಕ್ಕೆ ಕೆಲ ಪ್ರಮುಖ ಪುರಾವೆಗಳನ್ನು ಒದಗಿಸಿದ್ದಾರೆ.

ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆಯ ಐಡಿಯಾ ಹೊಸದೇನಲ್ಲ. ಸಾವಿರಾರು ವರ್ಷಗಳ ಹಿಂದೆ ಚೀನೀಯರು ಪಶ್ಚಿಮ ಏಷ್ಯಾ ಮತ್ತು ಯೂರೋಪ್ ಜೊತೆ ವ್ಯಾಪಾರ ವಹಿವಾಟು ನಡೆಸಲು ಬಳಸುತ್ತಿದ್ದ ಮಾರ್ಗವನ್ನು ಸಿಲ್ಕ್ ರೋಡ್ ಎಂದು ಬಣ್ಣಿಸಲಾಗುತ್ತದೆ. ಚೀನಾದ ಈ ಯೋಜನೆಗೆ ಭವ್ಯ ಇತಿಹಾಸ ಇದೆ ಎಂಬ ವಾದ ಇದೆ. ಆದರೆ, ಇತಿಹಾಸಕಾರ ವಿಲಿಯಮ್ ಡ್ಯಾಲ್ರಿಂಪಲ್ ಈ ವಾದವನ್ನು ತಳ್ಳಿಹಾಕಿದ್ದಾರೆ.

ಸಾವಿರ ವರ್ಷಗಳ ಹಿಂದೆ ಏಷ್ಯಾ ಮತ್ತು ಯೂರೋಪ್ ಮಧ್ಯೆ ವ್ಯಾಪಾರ ಎಂದರೆ ಕಣ್ಮುಂದೆ ಬರುವುದು ಚೀನಾ ಅಲ್ಲ ಭಾರತ ಎಂಬುದು ವಿಲಿಯಮ್ ಅನಿಸಿಕೆ. ಮರಳುಭೂಮಿಯ ಹಾದಿಯಲ್ಲಿ ಒಂಟೆಯ ಮೇಲೆ ಚೀನಾದ ರೇಷ್ಮೆ ಮತ್ತು ಮಸಾಲ ಪದಾರ್ಥಗಳನ್ನು ಹೊತ್ತು ಸಾಗುತ್ತಾ ಹೋಗುವುದು ರೋಮ್ಯಾಂಟಿಕ್ ಐಡಿಯಾ ಅಷ್ಟೇ. ಅಂಥದ್ದೊಂದು ಸಿಲ್ಕ್ ರೋಡ್ ಕಳೆದ 20-25 ವರ್ಷಗಳಿಂದ ಜನಪ್ರಿಯವಾಗಿದೆ ಅಷ್ಟೇ. ಆದರೆ, ರೋಮನ್ನರ ಕಾಲದಲ್ಲಿ ಯೂರೋಪ್ ಮತ್ತು ಏಷ್ಯಾ ಮಧ್ಯೆ ನಡೆಯುತ್ತಿದ್ದ ವ್ಯಾಪಾರದಲ್ಲಿ ಭಾರತದ ಪಾತ್ರವೇ ಹೆಚ್ಚಿತ್ತು ಎಂದು ವಿಲಿಯಮ್ ಡ್ಯಾಲ್ರಿಂಪಲ್ ಹೇಳುತ್ತಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಕಾರಿಡಾರ್, ಆಟೊಮೊಬೈಲ್ ನೀತಿ: ರಷ್ಯಾ ಅಧ್ಯಕ್ಷರಿಂದ ನರೇಂದ್ರ ಮೋದಿ ಗುಣಗಾನ

ಇಂಡಿಯಾ ಟುಡೇ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಬ್ರಿಟನ್ ಇತಿಹಾಸಕಾರ, ‘ಸಾವಿರಾರು ವರ್ಷಗಳ ಹಿಂದೆ ಏಷ್ಯಾ ಮತ್ತು ಯೂರೋಪ್ ವ್ಯಾಪಾರ ನೆಲ ಮಾರ್ಗದಿಂದ ಆಗುತ್ತಿದ್ದುದಲ್ಲ, ರೆಡ್ ಸೀ ಮುಖಾಂತರ ಆಗುತ್ತಿತ್ತು. ಅದು ವಿಶ್ವದ ಪ್ರಮುಖ ಆರ್ಥಿಕ ಮಾರ್ಗವಾಗಿತ್ತು’ ಎಂದು ಡ್ಯಾಲ್ರಿಂಪಲ್ ಈ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇಟಲಿ ಬಿಟ್ಟರೆ ಭಾರತದಲ್ಲೇ ಅತಿಹೆಚ್ಚು ರೋಮನ್ ನಾಣ್ಯ ಇರುವುದು; ಇದು ಯಾಕೆ?

ಪ್ರಾಚೀನ ಕಾಲದಲ್ಲಿ ಭಾರತೀಯರು ಮತ್ತು ರೋಮನ್ನರ ಮಧ್ಯೆ ಸಾಕಷ್ಟು ವ್ಯಾಪಾರ ಸಂಪರ್ಕ ಇತ್ತು. ಆದರೆ, ಭಾರತವೇ ಅತಿಹೆಚ್ಚು ರಫ್ತು ಮಾಡುತ್ತಿದ್ದುದು. ಬ್ಯಾಲನ್ಸ್ ಆಫ್ ಟ್ರೇಡ್ ಭಾರತದ ಪರವಾಗಿತ್ತು. ಯೂರೋಪ್ ಜೊತೆಗಿನ ವ್ಯಾಪಾರದಿಂದ ಭಾರತ ಸಾಕಷ್ಟು ಲಾಭ ಮಾಡುತ್ತಿತ್ತು. ಭಾರತದ ಹರಳುಗಳು, ಮಸಾಲಪದಾರ್ಥಗಳು, ಆನೆದಂತಗಳಿಗೆ ಯೂರೋಪ್​ನಲ್ಲಿ ಸಾಕಷ್ಟು ಬೇಡಿಕೆ ಇತ್ತು. ರೋಮನ್ ವೈನ್, ಆಲಿವ್ ಎಣ್ಣೆಯನ್ನು ಭಾರತೀಯರು ಇಷ್ಟಪಡುತ್ತಿದ್ದರು. ಆದರೆ, ವ್ಯಾಪಾರದಲ್ಲಿ ಭಾರತೀಯರ ವಸ್ತುಗಳೇ ಅತಿಹೆಚ್ಚು ಮಾರಾಟವಾಗುತ್ತಿದ್ದುದು. ಹೀಗಾಗಿ, ಭಾರತದಲ್ಲಿ ಲಕ್ಷಾಂತರ ರೋಮನ್ ನಾಣ್ಯಗಳನ್ನು ಈಗ ಕಾಣಬಹುದು. ಇಟಲಿ ಬಿಟ್ಟರೆ ಬೇರಾವ ದೇಶದಲ್ಲಿ ಭಾರತದಲ್ಲಿ ಸಿಕ್ಕಿರುವಷ್ಟು ರೋಮನ್ ನಾಣ್ಯಗಳು ಸಿಕ್ಕಿಲ್ಲ ಎಂದು ಸ್ಕಾಟ್ಲೆಂಡ್ ಮೂಲದ 68 ವರ್ಷದ ಇತಿಹಾಸಕಾರ ವಿಲಿಯಮ್ ಡ್ಯಾಲ್ರಿಂಪಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಸೂಪರ್ ಹಿಟ್ ಎನಿಸಿರುವುದು ಯಾಕೆ? ಐತಿಹಾಸಿಕ ಎನಿಸಿದ ನಿರ್ಧಾರಗಳ್ಯಾವುವು?

ಒಂದು ವರ್ಷಕ್ಕೆ 250 ರೋಮನ್ ಹಡಗುಗಳು ಭಾರತಕ್ಕೆ ಹೋಗುತ್ತಿದ್ದವು

ಒಂದನೇ ಶತಮಾನದಲ್ಲಿದ್ದ ರೋಮನ್ ಭೂಗೋಳತಜ್ಞ ಮತ್ತು ಆರ್ಥಿಕ ತಜ್ಞ ಪ್ಲೈನಿ ಅವರು ಬರೆದಿರುವ ದಾಖಲೆ ಪ್ರಕಾರ ರೋಮ್​ನಿಂದ ಒಂದು ವರ್ಷದಲ್ಲಿ 250 ಸರಕು ಹಡಗುಗಳು ಭಾರತಕ್ಕೆ ಹೋಗುತ್ತಿದ್ದವಂತೆ. ಗುಜರಾತ್​ನ ಭರುಚ್ ಮತ್ತು ಕೇರಳದ ಕೊಚ್ಚಿ ಬಂದರುಗಳಿಗೆ ಈ ಹಡಗುಗಳು ಹೋಗುತ್ತಿದ್ದವಂತೆ. ಪ್ಲೈನಿ ಅವರು ಈ ಬಗ್ಗೆ ಬರೆದಿರುವ ಸಂಗತಿಯನ್ನು ವಿಲಿಯಮ್ ಡ್ಯಾಲ್ರಿಂಪಲ್ ಪ್ರಸ್ತಾಪಿಸಿ ಭಾರತ ಹಾಗೂ ಯೂರೋಪ್ ನಡುವಿನ ವ್ಯಾಪಾರ ಸಂಬಂಧದ ಐತಿಹಾಸಿಕತೆಯ ಮಹತ್ವವನ್ನು ಒತ್ತಿಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್