AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಪೆಟ್ರೋಲ್ ಕಾಟ; ಆಗಸ್ಟ್​ನಲ್ಲಿ ಹಣದುಬ್ಬರ ಏರಿಕೆ; ಭಾರತ ಸೇರಿದಂತೆ ಜಾಗತಿಕವಾಗಿ ಏನು ಪರಿಣಾಮ?

US Inflation Rate: ಪೆಟ್ರೋಲ್ ಬೆಲೆ ಅತೀವವಾಗಿ ಹೆಚ್ಚಾದ ಪರಿಣಾಮ ಆಗಸ್ಟ್ ತಿಂಗಳಲ್ಲಿ ಅಮೆರಿಕದಲ್ಲಿ ಹಣದುಬ್ಬರ ಶೇ. 3.7ಕ್ಕೆ ಏರಿದೆ. ಗ್ಯಾಸೋಲಿನ್ ಬೆಲೆ (ಪೆಟ್ರೋಲ್) ಶೇ. 10ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಏರಿಕೆ ಆಗಿದೆ. ಆಹಾರ ಮತ್ತು ದಿನಸಿ ವಸ್ತುಗಳ ಬೆಲೆಗಳು ಶೇ. 0.2 ಮಾತ್ರವೇ ಏರಿರುವುದು. ಹೀಗಾಗಿ, ಅಮೆರಿಕದಲ್ಲಿ ಹಣದುಬ್ಬರ ಏರಿಕೆಯ ಹಿಂದೆ ಗ್ಯಾಸೋಲಿನ್ ಬೆಲೆ ಏರಿಕೆಯ ಪಾತ್ರ ಪ್ರಮುಖವಾಗಿದೆ. ಈ ಬೆಳವಣಿಗೆಯ ಪರಿಣಾಮ ಜಾಗತಿಕವಾಗಿ ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಅಮೆರಿಕಕ್ಕೆ ಪೆಟ್ರೋಲ್ ಕಾಟ; ಆಗಸ್ಟ್​ನಲ್ಲಿ ಹಣದುಬ್ಬರ ಏರಿಕೆ; ಭಾರತ ಸೇರಿದಂತೆ ಜಾಗತಿಕವಾಗಿ ಏನು ಪರಿಣಾಮ?
ಅಮೆರಿಕ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2023 | 11:58 AM

Share

ವಾಷಿಂಗ್ಟನ್, ಸೆಪ್ಟೆಂಬರ್ 14: ಅಮೆರಿಕದಲ್ಲಿ ಹಣದುಬ್ಬರ ಏರಿಕೆ (US Inflation) ಮುಂದುವರಿದಿದೆ. ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 3.7ಕ್ಕೆ ಏರಿದೆ. ಇದು ಒಂದು ವರ್ಷದ ಅವಧಿಯಲ್ಲಿ ಆಗಿರುವ ಹಣದುಬ್ಬರ ಏರಿಕೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿನ ಬೆಲೆಗೆ ಹೋಲಿಸಿದರೆ ಈ ಆಗಸ್ಟ್​ನಲ್ಲಿ ಆಗಿರುವ ಬೆಲೆ ವ್ಯತ್ಯಯ ಇದಾಗಿದೆ. ಕಳೆದ ತಿಂಗಳಾದ ಜುಲೈನಲ್ಲಿ ಹಣದುಬ್ಬರ ಶೇ. 3.2ರಷ್ಟಿತ್ತು. ಆಗಸ್ಟ್​ನಲ್ಲಿ ಹಣದುಬ್ಬರ ಏರಿಕೆಗೆ ಪ್ರಮುಖವಾಗಿ ಕಾರಣವಾಗಿರುವುದು ಗ್ಯಾಸೋಲಿನ್ (Gasoline or Petrol) ಬೆಲೆ ಏರಿಕೆ. ಗ್ಯಾಸೋಲಿನ್ ಎಂಬುದು ಅಮೆರಿಕದಲ್ಲಿ ಪೆಟ್ರೋಲ್​ಗೆ ಬಳಸುವ ಪದ. ಆಗಸ್ಟ್ ತಿಂಗಳಲ್ಲಿ ಗ್ಯಾಸೋಲಿನ್ ಬೆಲೆ ಬರೋಬ್ಬರಿ ಶೇ. 10.6ರಷ್ಟು ಹೆಚ್ಚಾಗಿ ಹೋಗಿದೆ. ಇದು ಅಮೆರಿಕದಲ್ಲಿ ನಿರೀಕ್ಷೆಮೀರಿದ ಮಟ್ಟಕ್ಕೆ ಹಣದುಬ್ಬರ ಏರಿಕೆಗೆ ಎಡೆ ಮಾಡಿಕೊಟ್ಟಿದೆ.

ಗ್ಯಾಸೋಲಿನ್ ಬೆಲೆ ಮಾತ್ರವೇ ಅಮೆರಿಕ ಪಾಲಿಗೆ ವಿಲನ್ ಅಗಿರುವುದು. ಭಾರತದ ಹಣದುಬ್ಬರ ಎತ್ತರದಲ್ಲಿರಲು ಕಾರಣವಾಗಿರುವ ಆಹಾರವಸ್ತುಗಳ ಬೆಲೆ ಅಮೆರಿಕದಲ್ಲಿ ಅಷ್ಟೇನೂ ಕಾಡಿಲ್ಲ. ಅಲ್ಲಿ ಆಹಾರ ಬೆಲೆ ಕೇವಲ ಶೇ. 0.2 ಮಾತ್ರವೇ ಏರಿದೆ. ಇನ್ನು, ದಿನಸಿ ವಸ್ತುಗಳ ಬೆಲೆ ಏರಿಕೆಯೂ ಶೇ. 0.2 ಮಾತ್ರವೇ ಇದೆ. ಕಳೆದ ವರ್ಷ (2022ರ ಜೂನ್) ಅಮೆರಿಕದಲ್ಲಿ ಹಣದುಬ್ಬರ ಶೇ. 9ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿತ್ತು. ಕಳೆದ ಒಂದು ವರ್ಷದಿಂದ ಅಲ್ಲಿನ ಹಣದುಬ್ಬರ ಪ್ರಮಾಣ ಸಾಕಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಆಹಾರವಸ್ತುಗಳ ಬೆಲೆ ಇಳಿಕೆಯ ಎಫೆಕ್ಟ್; ಭಾರತದ ರೀಟೇಲ್ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 6.83ಕ್ಕೆ ಇಳಿಕೆ

ಅಮೆರಿಕದ ಹಣದುಬ್ಬರದ ಪರಿಣಾಮಗಳೇನು?

ಅಮೆರಿಕದಲ್ಲಿ ಶೀತವಾದರೆ ಬೇರೆ ದೇಶಗಳಿಗೆ ನೆಗಡಿ ಆಗುತ್ತದೆ ಎನ್ನುವ ಮಾತಿನಂತೆ, ವಿಶ್ವದ ದೊಡ್ಡಣ್ಣನ ಮನೆಯಲ್ಲಿ ನಡೆಯುವ ವಿದ್ಯಮಾನ ಬೇರೆ ದೇಶಗಳ ಮೇಲೆ ಪರಿಣಾಮ ಬೀರುವುದು ನಿಜ. ಈಗ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾದರೆ ಬೇರೆ ಕಡೆ ಆಗುವ ಪರಿಣಾಮಗಳೇನು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಬಹುದು.

ಬಡ್ಡಿ ದರ ಇಳಿಮುಖ ಇಲ್ಲ

ಹಣದುಬ್ಬರ ಹೆಚ್ಚಿದ್ದರೆ ಬ್ಯಾಂಕ್​ನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇಲ್ಲ. ಕೆಲವೊಮ್ಮೆ ಬಡ್ಡಿದರ ಹೆಚ್ಚು ಮಾಡಬಹುದು. ಸದ್ಯ ಅಮೆರಿಕ ಮುಂದಿನ ಕೆಲ ತಿಂಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಕಡಿಮೆಯಾದರೂ, ದರ ಇಳಿಸುವ ಸಾಧ್ಯತೆಯೂ ಇಲ್ಲ.

ಇದನ್ನೂ ಓದಿ: ಟೆಸ್ಲಾ ಸಂಸ್ಥೆಗೆ ಈ ವರ್ಷ ಭಾರತದಿಂದ 15,000 ಕೋಟಿ ರೂನಷ್ಟು ಮೌಲ್ಯದ ವಾಹನ ಬಿಡಿಭಾಗಗಳು ಸರಬರಾಜಾಗಲಿವೆ: ಸಚಿವ ಗೋಯಲ್

ಹೆಚ್ಚಿನ ಬ್ಯಾಂಕ್ ಬಡ್ಡಿದರದಿಂದಾಗಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಹಿಂಜರಿಯಬಹುದು. ಇದರಿಂದ ಚಿನ್ನದ ಬೆಲೆ ಸಾಧಾರಣ ಮಟ್ಟದಲ್ಲಿ ಇರಬಹುದು. ಚಿನ್ನವನ್ನು ಖರೀದಿಸಲು ಬಯಸುವ ಭಾರತೀಯರಿಗೆ ಇದು ಶುಭ ಕಾಲ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ