AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಸೂಪರ್ ಹಿಟ್ ಎನಿಸಿರುವುದು ಯಾಕೆ? ಐತಿಹಾಸಿಕ ಎನಿಸಿದ ನಿರ್ಧಾರಗಳ್ಯಾವುವು?

New Delhi G20 Milestones: ಈ ವರ್ಷದ ಜಿ20 ಸಭೆಯ ಹಲವು ಕಾರಣಗಳಿಗೆ ಜಗತ್ತಿನ ಗಮನ ಸೆಳೆದಿದೆ. ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಗಳ ಗುಂಪೆನಿಸಿದ ಜಿ20 ಭಾರತದ ಅಧ್ಯಕ್ಷತೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಮುಟ್ಟಿದೆ. ಆಫ್ರಿಕನ್ ಯೂನಿಯನ್ ಅನ್ನು ಗುಂಪಿಗೆ ಸೇರಿಸಿಕೊಂಡಿದ್ದು, ಜಾಗತಿಕ ಜೈವಿಕ ಇಂಧನಗಳ ಮೈತ್ರಿಕೂಟ ರಚಿಸಿದ್ದು, ಭಾರತ ಮಧ್ಯಪ್ರಾಚ್ಯ ಮತ್ತು ಯೂರೋಪ್ ಮಧ್ಯೆ ಆರ್ಥಿಕ ಕಾರಿಡಾರ್ ರಚಿಸುವ ಯೋಜನೆ ಘೋಷಣೆಯಾಗಿದ್ದು ಮಹತ್ವದ ಬೆಳವಣಿಗೆ ಎನಿಸಿದೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಸೂಪರ್ ಹಿಟ್ ಎನಿಸಿರುವುದು ಯಾಕೆ? ಐತಿಹಾಸಿಕ ಎನಿಸಿದ ನಿರ್ಧಾರಗಳ್ಯಾವುವು?
ಜಿ20 ಶೃಂಗಸಭೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2023 | 4:56 PM

Share

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ಬಾರಿಯ ಜಿ20 ಸಭೆ (G20 Summit) ಸೆಪ್ಟೆಂಬರ್ 10ರಂದು ಸಮಾರೋಪಗೊಂಡಿದೆ. ಹೆಚ್ಚೂಕಡಿಮೆ ವರ್ಷದಾದ್ಯಂತ ಭಾರತದ ವಿವಿಧೆಡೆ ಪೂರಕ ಸಭೆಗಳು ನಡೆದು ಅಂತಿವಾಗಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಶೃಂಗಸಭೆಯಲ್ಲಿ ಸಮಾಪ್ತಿಗೊಂಡಿತು. ಜಿ20 ಇತಿಹಾಸದಲ್ಲೇ ಅತಿಹೆಚ್ಚು ವಿಚಾರಗಳಿಗೆ ಒಮ್ಮತ ಮೂಡಿದ್ದು ಇದೇ ಮೊದಲು. ಭಾರತದ ಮಾತಿಗೆ ಅಂತಾರಾಷ್ಟ್ರೀಯ ಮನ್ನಣೆ ಹೆಚ್ಚಿರುವುದು ವೇದ್ಯವಾಗಿದೆ. 4,000 ಕೋಟಿಗೂ ಹೆಚ್ಚು ಖರ್ಚಾದರೂ ನವದೆಹಲಿ ಜಿ20 ಸಭೆ ಭಾರತಕ್ಕೆ ಮತ್ತು ವಿಶ್ವಕ್ಕೆ ಹಲವು ಲಾಭಗಳನ್ನು ಕೊಟ್ಟಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳು ಈ ಸಭೆ ಯಶಸ್ವಿಯಾಗಿ ನಡೆಸಿದ್ದಕ್ಕೆ ಭಾರತವನ್ನು ಅಭಿನಂದಿಸಿವೆ. ಜಿ20 ಸಭೆ ಬಳಿಕ ಭಾರತದ ಸೂಪರ್ ಪವರ್ ಗುಣಲಕ್ಷಣಗಳು ಗೋಚರಿಸುತ್ತಿವೆ.

ನವದೆಹಲಿ ಜಿ20 ಸಭೆಯ ಮೂರು ಐತಿಹಾಸಿಕ ನಿರ್ಧಾರಗಳು

ಈ ಬಾರಿಯ ಜಿ20 ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳು ಘಟಿಸಿವೆ. ಅದರಲ್ಲಿ ವಿಶ್ವದ ಆರ್ಥಿಕ ಮತ್ತು ರಾಜಕೀಯ ಸಮೀಕರಣ ಬದಲಿಸಬಲ್ಲ 3 ಪ್ರಮುಖ ನಿರ್ಧಾರಗಳು ಸೇರಿವೆ.

  1. ಜಿ20 ಗುಂಪಿಗೆ ಆಫ್ರಿಕನ್ ಒಕ್ಕೂಟದ ಸೇರ್ಪಡೆ
  2. ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ಮಧ್ಯೆ ಆರ್ಥಿಕ ಕಾರಿಡಾರ್ ನಿರ್ಮಾಣದ ಯೋಜನೆ
  3. ಜಾಗತಿಕ ಜೈವಿಕ ಇಂಧನ ಕೂಟದ ರಚನೆ

ಇದನ್ನೂ ಓದಿ: ಮಹತ್ವಾಕಾಂಕ್ಷಿ ಕಾರಿಡಾರ್ ಯೋಜನೆ; ಸೌದಿ ಅರೇಬಿಯಾ ಜೊತೆ ಕಾರ್ಯಾಚರಣೆಗಿಳಿದ ಭಾರತ; 8 ಒಪ್ಪಂದಗಳಿಗೆ ಸಹಿ

ಆಫ್ರಿಕನ್ ಯೂನಿಯನ್ ಸೇರ್ಪಡೆ ಎಷ್ಟು ಮಹತ್ವದ್ದು ಗೊತ್ತಾ?

ಆಫ್ರಿಕನ್ ಒಕ್ಕೂಟವನ್ನು ಜಿ20 ರಾಷ್ಟ್ರಗಳ ಗುಂಪಿಗೆ ಸೇರಿಸಲಾಗಿರುವುದು ಬಹಳ ಮಹತ್ವದ ಸಂಗತಿ. ಬ್ರೆಜಿಲ್​ನಲ್ಲಿ ಮುಂದಿನ ವರ್ಷ ನಡೆಯುವ ಜಿ20 ಸಭೆಯಷ್ಟರಲ್ಲಿ ಆಫ್ರಿಕನ್ ಯೂನಿಯನ್ ಜಿ20 ಗುಂಪಿನ ಅಧಿಕೃತ ಸದಸ್ಯತ್ವ ಪಡೆಯಲಿದೆ. ಇದರೊಂದಿಗೆ ಗುಂಪಿನ ಹೆಸರು ಜಿ20 ಬದಲು ಜಿ21 ಆಗಿ ಬದಲಾಗುತ್ತದೆ. ಈ ಬೆಳವಣಿಗೆ ಬಳಿಕ ಭಾರತದ ಪ್ರಭಾವಳಿ ಮತ್ತು ಗೌರವ ಇನ್ನಷ್ಟು ಹೆಚ್ಚಾಗುತ್ತಿದೆ.

ಆಫ್ರಿಕನ್ ಯೂನಿಯನ್​ನಲ್ಲಿ ಒಟ್ಟು 55 ದೇಶಗಳಿವೆ. ಭವಿಷ್ಯದ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳು ಹೆಚ್ಚಾಗಿ ಇರುವುದು ಆಫ್ರಿಕಾದಲ್ಲೇ. ಹೀಗಾಗಿ, ಮುಂದಿನ ವರ್ಷಗಳಲ್ಲಿ ಜಾಗತಿಕ ಅಭಿವೃದ್ಧಿಗೆ ಬೇಕಾದ ಸರಕುಗಳನ್ನು ನಾವು ಆಫ್ರಿಕಾದಿಂದಲೇ ಹೆಚ್ಚಾಗಿ ಪಡೆಯಬೇಕು. ಈ ಕಾರಣಕ್ಕೆ ವಿಶ್ವದ ಅತ್ಯಂತ ಪ್ರಬಲ ಆರ್ಥಿಕ ಗುಂಪಿಗೆ ಆಫ್ರಿಕಾ ಸೇರ್ಪಡೆಯಾಗಿರುವುದು ಸಮಂಜಸವೇ.

ಇದನ್ನೂ ಓದಿ: G20ಗೆ ಆಫ್ರಿಕನ್ ಯೂನಿಯನ್ ಸೇರ್ಪಡೆ ಈ ಶೃಂಗಸಭೆಯ ದೊಡ್ಡ ಸಾಧನೆ: ಧರ್ಮೇಂದ್ರ ಪ್ರಧಾನ್

ಚೀನಾದ ಬಿಆರ್​ಐಗೆ ಪರ್ಯಾಯವಾಗಿ ಭಾರತದ ಐಮೆಕ್

ಚೀನಾದ ಕೆಲವೊಂದು ವರ್ತನೆಗಳ ಕಾರಣದಿಂದ ವಿಶ್ವದ ಹೆಚ್ಚಿನ ದೇಶಗಳು ಚೀನಾದಿಂದ ವಿಮುಖರಾಗಲು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಭಾರತ ಪರ್ಯಾಯ ಆಯ್ಕೆಗಳಲ್ಲಿ ಒಂದಾಗಿದೆ. ಒಂದೆಡೆ ಚೀನಾ ತನ್ನ ಒನ್ ಬೆಲ್ಟ್ ಒನ್ ರೋಡ್ ಅಥವಾ ಸಿಲ್ಕ್ ರೋಡ್ ಪ್ರಾಜೆಕ್ಟ್ ಮೂಲಕ ವಿವಿಧ ದೇಶಗಳನ್ನು ಉಸಿರುಗಟ್ಟಿಸುತ್ತಿದೆ. ಸಾಲದ ಶೂಲಕ್ಕೆ ಸಿಲುಕಿಸಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎನ್ನುವ ಆರೋಪ ಇದೆ.

ಈ ಹಿನ್ನೆಲೆಯಲ್ಲಿ ಭಾರತದ ಎಕನಾಮಿಕ್ ಕಾರಿಡಾರ್ ಯೋಜನೆ (IMEC- India Middle-east Europe Economic Corridor Project) ಬಹಳ ದೇಶಗಳಿಗೆ ಸೂಕ್ತ ಆಯ್ಕೆ ಎನಿಸಬಹುದು. ಈ ಯೋಜನೆಯು ಭಾರತ, ಪಶ್ಚಿಮ ಏಷ್ಯಾ ಮತ್ತು ಯೂರೋಪ್ ಅನ್ನು ಬೆಸೆಯುತ್ತದೆ. ಈ ಯೋಜನೆಗೆ ಪೂರಕವಾಗಿ ಎಂಬಂತೆ ಭಾರತ ಮತ್ತು ಸೌದಿ ಅರೇಬಿಯಾ ಮಧ್ಯೆ ಈಗಾಗಲೇ ಎಂಟು ಒಪ್ಪಂದಗಳಿಗೆ ಸಹಿ ಕೂಡ ಸಿಕ್ಕಿದೆ.

ಜಾಗತಿಕ ಜೈವಿಕ ಇಂಧನಗಳ ಕೂಟ

ಜಿ20 ಶೃಂಗಸಭೆಯಲ್ಲಿ ಬಂದ ಇನ್ನೊಂದು ಮಹತ್ವದ ಘೋಷಣೆ ಗ್ಲೋಬಲ್ ಬಯೋಫುಯೆಲ್ಸ್ ಅಲಾಯನ್ಸ್​ನದ್ದು. ಜೈವಿಕ ಕಚ್ಚಾವಸ್ತುಗಳಿಂದ ಪಡೆಯಬಹುದಾದ ಎಥನಾಲ್, ಬಯೋಡೀಸೆಲ್ ಇತ್ಯಾದಿ ಇಂಧನಗಳು ಉತ್ತಮ ಮರುಬಳಕೆ ಶಕ್ತಿ ಎನಿಸಿವೆ. ಭಾರತ ನೇತೃತ್ವದ ಈ ಜಾಗತಿಕ ಜೈವಿಕ ಇಂಧನಗಳ ಕೂಟದಲ್ಲಿ ಅಮೆರಿಕ, ಬ್ರೆಜಿಲ್ ಕೂಡ ಮುಂಚೂಣಿಯಲ್ಲಿವೆ.

ಇದನ್ನೂ ಓದಿ: ಭಾರತದ ಕಾರುಗಳು ಮತ್ತು ವಿಮಾನಗಳಲ್ಲಿ ಜೈವಿಕ ಇಂಧನ ಬಳಕೆ? ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದ್ದೇನು?

ಭಾರತ ಎಥನಾಲ್ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸುತ್ತಿದೆ. ಸದ್ಯ ಭಾರತದಲ್ಲಿ ಪೆಟ್ರೋಲ್​ಗೆ ಎಥನಾಲ್ ಅನ್ನು ಮಿಶ್ರ ಮಾಡುವ ಕೆಲಸ ಆಗುತ್ತಿದೆ. ಈ ಪ್ರಮಾಣವನ್ನು ಇನ್ನೆರಡು ವರ್ಷದಲ್ಲಿ ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸುವ ಗುರಿ ಭಾರತದ್ದು.

ಒನ್ ಗ್ರಿಡ್ ಯೋಜನೆ

ಭಾರತ ಸೂಕ್ತ ಕಾಲದಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ20 ಗುಂಪಿಗೆ ಸೇರಿಸಿಕೊಂಡಿದೆ. ಆಫ್ರಿಕನ್ ದೇಶಗಳು ಮರುಬಳಕೆ ಇಂಧನ ಉತ್ಪಾದನೆಗೆ ಪ್ರಶಸ್ತವಾಗಿವೆ. ಭವಿಷ್ಯದ ಇಂಧನ ಮಾರುಕಟ್ಟೆಯಲ್ಲಿ ಆಫ್ರಿಕಾ ಪಾತ್ರ ಮಹತ್ವದ್ದಿರುತ್ತದೆ. ಹೀಗಾಗಿ, ಭಾರತ ಒಂದು ವಿಶ್ವ, ಒಂದು ಸೂರ್ಯ, ಒಂದು ಗ್ರಿಡ್ ಎಂಬ ಯೋಜನೆ ಆರಂಭಿಸಿದೆ. ಆಫ್ರಿಕಾವನ್ನು ಕೇಂದ್ರವಾಗಿಸಿ, ಅಲ್ಲಿ ಉತ್ಪಾದನೆಯಾಗುವ ಮರುಬಳಕೆ ಶಕ್ತಿಯನ್ನು ಜಾಗತಿಕವಾಗಿ ಹಂಚುವುದು ಈ ಯೋಜನೆಯ ಒಂದು ಮೂಲ ಉದ್ದೇಶ.

ಒಟ್ಟಾರೆ, ಭಾರತ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳತೊಡಗಿರುವುದು ಜಿ20 ಶೃಂಗಸಭೆಯಲ್ಲಿ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಬೆಳವಣಿಗೆಗಳೇನಾಗಬಹುದು ಎಂಬುದು ಕುತೂಹಲ ಹುಟ್ಟಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್